Site icon Vistara News

Paytm Layoff : ಪೇಟಿಎಂನಿಂದ 1000ಕ್ಕೂ ಹೆಚ್ಚು ಉದ್ಯೋಗಿಗಳ ವಜಾ

Paytm Crisis, RBI asked NPCI to review Paytm's third party app request

ಬೆಂಗಳೂರು: ಯುಪಿಐ ಪೇಮೆಂಟ್​ ಆ್ಯಪ್​ ಪೇಟಿಎಂನ ಮಾತೃಸಂಸ್ಥೆ ಒನ್ 97 ಕಮ್ಯುನಿಕೇಷನ್ಸ್ ತನ್ನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ 1,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು (Paytm Layoff) ನಿರ್ಧರಿಸಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಪೇಟಿಎಂ ವಿವಿಧ ವ್ಯವಹಾರಗಳನ್ನು ಮರುಹೊಂದಿಸುವ ಪ್ರಕ್ರಿಯೆಯಲ್ಲಿದೆ. ಆದ್ದರಿಂದ, ವೆಚ್ಚವನ್ನು ಕಡಿತಗೊಳಿಸಲು ಮುಂದಾಗಿದೆ ಎಂದು ವರದಿ ಹೇಳಿದೆ. ಇದರರ್ಥ ಮುಂಬರುವ ತಿಂಗಳುಗಳಲ್ಲಿ ಕಂಪನಿಯಾದ್ಯಂತ ಇನ್ನಷ್ಟು ಮಂದಿ ಉದ್ಯೋಗ ಕಳೆದುಕೊಳ್ಳಬಹುದು. ಕಳೆದ ಕೆಲವು ತಿಂಗಳುಗಳಲ್ಲಿ ಎಲ್ಲಾ ವಜಾಗಳು ನಡೆದಿವೆ.

ಪೇಟಿಎಂನ ಒಟ್ಟು ಉದ್ಯೋಗಿಗಳ ಶೇಕಡಾ 10ಕ್ಕಿಂತ ಹೆಚ್ಚು ಜನರು ಈ ಕ್ರಮದಿಂದ ಪರಿಣಾಮ ಎದುರಿಸಲಿದ್ದಾರೆ. ಯುಪಿಐ ಪ್ಲಾಟ್​ಫಾರ್ಮ್​ ಸಣ್ಣ-ಟಿಕೆಟ್ ಗ್ರಾಹಕ ಸಾಲದ ಉದ್ಯಮವನ್ನು ಹಿಂತೆಗೆದುಕೊಂಡಿದೆ. ಅಂದರೆ “ಈಗ ಖರೀದಿಸಿ ನಂತರ ಪಾವತಿಸಿ” ಸಾಲ ವಿಭಾಗವನ್ನು ಹಿಂತೆಗೆದುಕೊಂಡಿದೆ. ಹೀಗಾಗಿ ಉದ್ಯೋಗಿಗಳ ಕಡಿತಕ್ಕೆ ಮುಂದಾಗಿದೆ.

ಪೇಟಿಎಂನಲ್ಲಿ ನಡೆಸಲಾಗುತ್ತಿರುವ 1000 ಕ್ಕೂ ಹೆಚ್ಚು ಉದ್ಯೋಗ ಕಡಿತ ಭಾರತದ ಟೆಕ್ ಸಂಸ್ಥೆಗಳಲ್ಲಿ ನಡೆದಿರುವ ಅತಿದೊಡ್ಡ ಉದ್ಯೂಗ ನಷ್ಟದ ಪ್ರಕರಣವಾಗಿದೆ. ಸ್ಟಾರ್ಟ್ಅಪ್ ಕಂಪನಿಗಳು ಈ ವರ್ಷ ಭಾರತದಾದ್ಯಂತ ವಜಾ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿವೆ, ಹಣಕಾಸಿನ ಕೊರತೆ ಮತ್ತು ಕಂಪನಿಯ ಆರ್ಥಿಕ ಪುನರ್ರಚನೆಯ ಕಾರಣಕ್ಕೆ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

ಸಾಲದಿಂದಾಗಿ ಉದ್ಯೋಗ ಕಡಿತ

ಪೇಟಿಎಂನಲ್ಲಿ ಹೆಚ್ಚಿನ ಉದ್ಯೋಗ ಕಡಿತಗಳು ಅದರ ಸಾಲ ವ್ಯವಹಾರದಿಂದ ನಷ್ಟದ ಪರಿಣಾಮವಾಗಿದೆ. ಇದು ಕಳೆದ ವರ್ಷದಲ್ಲಿ ಘಾತೀಯ ಬೆಳವಣಿಗೆಯನ್ನು ಕಂಡಿದೆ . ಪೇಟಿಎಂ ಪೋಸ್ಟ್​ಪೇಯ್ಡ್​ ಸಾಮಾನ್ಯವಾಗಿ 50,000 ರೂ.ಗಿಂತ ಕಡಿಮೆ ಸಾಲವನ್ನು ನೀಡುತ್ತದೆ.

ಇದನ್ನೂ ಓದಿ : ಮಾರನ್‌ ʼಟಾಯ್ಲೆಟ್‌ ಕ್ಲೀನ್‌ʼ ಹೇಳಿಕೆಗೆ ತೇಜಸ್ವಿ ಯಾದವ್‌ ಖಂಡನೆ, ಇಂಡಿಯಾ ಮೈತ್ರಿಕೂಟದಲ್ಲಿ ಒಡಕು?

ಪೇಟಿಎಂನ ಷೇರುಗಳು ಈ ವರ್ಷ ದೊಡ್ಡ ಹೊಡೆತವನ್ನು ಅನುಭವಿಸಿದವು, ಡಿಸೆಂಬರ್ 7ರಂದು ಸುಮಾರು 20 ಪ್ರತಿಶತದಷ್ಟು ಕುಸಿದಿದ್ದವು. ಪೇಟಿಎಂ ಪೋಸ್ಟ್​ಪೋಯ್ಡ್​ ಲೋನ್ ಯೋಜನೆಯನ್ನು ಹಿಂತೆಗೆದುಕೊಳ್ಳುವುದಾಗಿ ಕಂಪನಿಯು ಘೋಷಿಸಿದ ನಂತರ ಷೇರುಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ.

ಸ್ಟಾರ್ಟ್​ಅಪ್​ಗಳಿಗೆ ನಷ್ಟ

ಪೇಟಿಎಂ ಮಾತ್ರವಲ್ಲ, ಹೊಸ ಟೆಕ್ ಸ್ಟಾರ್ಟ್ಅಪ್​ಗಳು ಈ ವರ್ಷ ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಉದ್ಯೋಗ ಕಡಿತ ಮಾಡಿವೆ.. ಲಾಂಗ್​ಹೌಡ್​ ಕನ್ಸಲ್ಟಿಂಗ್​​ನ ಅಂಕಿಅಂಶಗಳು ಹೊಸ ಕಂಪನಿಗಳು ಈ ವರ್ಷ ಸುಮಾರು 28,000 ಜನರನ್ನು ವಜಾಗೊಳಿಸಿವೆ ಎಂದು ಹೇಳಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ವಜಾಗೊಳಿಸುವ ಪ್ರಮಾಣವು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಏಕೆಂದರೆ 2021ರಲ್ಲಿ ಈ ಕಂಪನಿಗಳಿಂದ ಕೇವಲ 4,080 ಜನರನ್ನು ವಜಾಗೊಳಿಸಲಾಗಿದೆ ಮತ್ತು 2022 ರಲ್ಲಿ 20,000 ಜನರನ್ನು ವಜಾಗೊಳಿಸಲಾಗಿದೆ. 28,000 ಜನರಲ್ಲಿ ಹೆಚ್ಚಿನವರನ್ನು ಕೇವಲ ಆರು ತಿಂಗಳ ಅವಧಿಯಲ್ಲಿ ವಜಾಗೊಳಿಸಲಾಯಿತು.

ಫಿಸಿಕ್ಸ್ ವಾಲಾ, ಉಡಾನ್, ಥರ್ಡ್ ವೇವ್ ಕಾಫಿ ಮತ್ತು ಬಿಜೊಂಗೊ ಈ ವರ್ಷ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿದ್ದರೆ, ಫ್ಲಿಪ್ಕಾರ್ಟ್ ಮತ್ತು ಬೈಜೂಸ್​ನಂಥ ಸಂಸ್ಥೆಗಳು ಈ ವರ್ಷ ವೇತನ ಏರಿಕೆ ಮಾಡದಿರಲು ನಿರ್ಧರಿಸಿದೆ.

Exit mobile version