ನವದೆಹಲಿ: ನಿರಂತರ ಅನುಪಾಲನೆ ಕೊರತೆ (Persistent Non-compliance) ಮತ್ತು ತಪ್ಪುಗಳನ್ನು ತಿದ್ದಿಕೊಳ್ಳಲು ಸಾಕಷ್ಟು ಸಮಯ ನೀಡಲಾಗಿತ್ತು. ಆದರೂ ಸಾಧ್ಯವಾಗದ್ದಕ್ಕೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ವಿರುದ್ಧ ಕ್ರಮ ಕೈಗೊಳ್ಳಲಾಯಿತು ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಸ್ವಾಮಿನಿಥಾನ್ ಗುರುವಾರ ಹೇಳಿದ್ದಾರೆ(RBI). ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ದ ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಪೇಟಿಎಂ ಆ್ಯಪ್‌ಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಿಟಿಎಂ ಆ್ಯಪ್ ವ್ಯವಸ್ಥೆಗೆ ಯಾವುದೇ ಧಕ್ಕೆ ಇಲ್ಲ. ನಾವು ಕೇವಲ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಆರ್‍ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಹೇಳಿದ್ದಾರೆ. ಎಲ್ಲವೂ ಸರಿಯಾಗಿದ್ದರೆ ಆರ್‌ಬಿಐ ಕಂಪನಿಯ ವಿರುದ್ಧ ಏಕೆ ಕ್ರಮಕೈಗೊಳ್ಳುತ್ತಿತ್ತು ಎಂದು ಪೇಟಿಎಂ ಹೆಸರಿಸದೇ ಶಕ್ತಿಕಾಂತ್ ದಾಸ್ ಅವರು ಪ್ರಶ್ನಿಸಿದರು. ಅಲ್ಲದೆ, ಪೇಟಿಎಂ ಕ್ರಮದ ನಂತರ ಸಾರ್ವಜನಿಕ ಕಳವಳಗಳನ್ನು ನಿವಾರಿಸಲು ಆರ್‌ಬಿಐ ಮುಂದಿನ ವಾರ ಎಫ್ಎಕ್ಯೂಗಳನ್ನು (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ನೀಡಲಿದೆ ಎಂದು ದಾಸ್ ಅವರು ಹೇಳಿದರು. ಅಲ್ಲದೇ ಹೊಸ ಗ್ರಾಹಕರನ್ನು ಸೆಳೆಯದಂತೆಯೂ ಅವರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಪೇಟಿಎಂ ಸಮಸ್ಯೆಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸಂಬಂಧಿಸಿದ್ದು. ಇದರಲ್ಲಿ ಸರ್ಕಾರದ ಏನೂ ಪಾತ್ರವಿಲ್ಲ ಎಂದು ಹಣಕಾಸು ಸೇವೆಗಳು ಕಾರ್ಯದರ್ಶಿ ವಿವೇಕ್ ಜೋಶಿ ಅವರು ಬುಧವಾರ ಹೇಳಿದ್ದಾರೆ. ಇಷ್ಟಾಗಿಯೂ ಅವರು, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿ. ಒಂದು ಸಣ್ಣ ವಿತ್ತ ಕಂಪನಿಯಾಗಿದ್ದು, ಯಾವುದೇ ಸ್ಥಿರ ವ್ಯವಸ್ಥೆಯ ತೊಂದರೆಗಳಲ್ಲ ಎಂದು ಹೇಳಿದ್ದಾರೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಕ್ರಮವನ್ನು ನಿಯಂತ್ರಕ ಸಂಸ್ಥೆ ತೆಗೆದುಕೊಂಡಿದೆ. ಅವರು ಬ್ಯಾಂಕುಗಳನ್ನು ನಿಯಂತ್ರಣ ಮಾಡುತ್ತಾರೆ. ಪೇಟಿಎಂ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೂ ಸರ್ಕಾರವೇನೂ ಮಾಡಬೇಕಾಗಿಲ್ಲ. ಆರ್‌ಬಿಐ ಗ್ರಾಹಕರು ಮತ್ತು ಒಟ್ಟಾರೆ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ವಿವೇಕ್ ಜೋಶಿ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Paytm Payments Bank: ನಮ್ಮ ಮೇಲೆ ಇಡಿ ತನಿಖೆ ಇಲ್ಲ: ಪೇಟಿಎಂ ಸ್ಪಷ್ಟನೆ