Site icon Vistara News

Pralhad Joshi: ಮೋದಿ ಅಭಿವೃದ್ಧಿ ಪರ್ವ ಅರಿಯದವರಿಗೆ ದೇಶದ ಜನರೇ ಅವರ ಸ್ಥಾನ ತೋರಿಸಿದ್ದಾರೆ; ಜೋಶಿ ಟೀಕೆ

People Show their position to opposition who criticize modi, Says Pralhad Joshi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಆಡಳಿತದಲ್ಲಿ ಭಾರತ ಸಮಗ್ರ ಬದಲಾವಣೆ ಕಾಣುತ್ತಿದೆ(Developing India). ಇದನ್ನು ಅರ್ಥ ಮಾಡಿಕೊಳ್ಳದವರಿಗೆ (Opposition Parties) ದೇಶದ ಜನರೇ ಅವರ ಸ್ಥಾನ ಏನೆಂಬುದನ್ನು ತೋರಿಸಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ(Union Minister Pralhad Joshi) ಅವರು ಕಾಂಗ್ರೆಸ್‌ ಪಕ್ಷಕ್ಕೆ (Congress Party) ಟಾಂಗ್ ಕೊಟ್ಟರು.

ಆಂಧ್ರಪ್ರದೇಶದ ಮಂಗಳಗಿರಿಯಲ್ಲಿ ನಡೆದ ಏಮ್ಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೋದಿಯವರು ಪ್ರಧಾನಿಯಾದ ಮೇಲೆ ದೇಶದ ಅರ್ಥ ವ್ಯವಸ್ಥೆ ಬದಲಾಗುತ್ತಿದೆ ಎಂದು ಪ್ರತಿಪಾದಿಸಿದರು.

ಹಿಂದಿನ ಆಡಳಿತ-ಅರ್ಥ ವ್ಯವಸ್ಥೆ, ಅಭಿವೃದ್ಧಿ ಮತ್ತು ಮೋದಿ ಅವರ ಅವಧಿಯಲ್ಲಿನ ಆಡಳಿತ- ಅಭಿವೃದ್ಧಿ ಬಗೆಗಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳದವರಿಗೆ ದೇಶದ ಜನ ಅವರ ಸ್ಥಾನವನ್ನು ತೋರಿಸಿದ್ದಾರೆ ಎಂದು ಜೋಶಿ ಹೇಳಿದರು.

ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿದ್ದ ಒಟ್ಟು ಏಮ್ಸ್‌ಗಳ ಸಂಖ್ಯೆ 7 ಅಷ್ಟೇ. ಆದರೆ, ನಾವಿಂದು ಒಂದೇ ದಿನದಲ್ಲಿ ಐದು ಏಮ್ಸ್‌ಗಳನ್ನು ೃಉದ್ಘಾಟಿಸುತ್ತಿದ್ದೇವೆ. ಇದು ನಮ್ಮ ಅಭಿವೃದ್ಧಿ ಪರ್ವಕ್ಕೆ ನಿದರ್ಶನ ಎಂದು ಪ್ರತಿಪಾದಿಸಿದರು.

ಏಮ್ಸ್ ಆಂಧ್ರಪ್ರದೇಶದ ಅತ್ಯುತ್ತಮ ಹಾಗೂ ಕೈಗೆಟುಕುವ ಆಸ್ಪತ್ರೆಗಳಲ್ಲಿ ಒಂದಾಗಿದೆ ಮತ್ತು ಯಾವುದೇ ಕಾರ್ಪೊರೇಟ್ ಆಸ್ಪತ್ರೆಗಿಂತ ಕಡಿಮೆಯಿಲ್ಲ. ಆಂಧ್ರಪ್ರದೇಶದ ಬಡ ರೋಗಿಗಳಿಗೆ ಮೋದಿಯವರು ಈ ಮೂಲಕ ಅತ್ಯುನ್ನತ ಸೌಲಭ್ಯ ಒದಗಿಸಿದ್ದಾರೆ ಎಂದು ಸಚಿವ ಜೋಶಿ ಬಣ್ಣಿಸಿದರು.

ರಾಜ್ ಕೋಟ್‌ನಿಂದ ಏಮ್ಸ್‌ಗೆ ಪ್ರಧಾನಿ ಮೋದಿ ಚಾಲನೆ

ರಾಜ್ ಕೋಟ್‌ನಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಐದು ಏಮ್ಸ್‌ಗಳು ಮತ್ತು ರಾಷ್ಟ್ರವ್ಯಾಪಿ ಮೆಗಾ ಆರೋಗ್ಯ ಯೋಜನೆಗಳನ್ನು ದೇಶಕ್ಕೆ ಅರ್ಪಿಸಿದ್ದಾರೆ.

ಯೋಜನೆಗಳ ಲೋಕಾರ್ಪಣೆ ಸಮಾರಂಭದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾದ ಎಸ್. ಅಬ್ದುಲ್ ನಜೀರ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ, ಸಚಿವರಾದ ಡಾ.ಭಾರತಿ ಪವಾರ್, ರಾಜ್ಯ ಆರೋಗ್ಯ ಸಚಿವೆ ವಿಡದಲಾ ರಜಿನಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ: Pralhad Joshi: 17ನೇ ಲೋಕಸಭೆಯಲ್ಲಿ 221 ವಿಧೇಯಕ ಅಂಗೀಕಾರ ಎಂದ ಪ್ರಲ್ಹಾದ್ ಜೋಶಿ

Exit mobile version