Site icon Vistara News

ಮಾತು ತಪ್ಪದ ಸಿಎಂ ಶಿಂಧೆ; ಮಹಾರಾಷ್ಟ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿತ

Petrol rate hike in Pakistan by rs 10 per liter

ಮುಂಬೈ: ಮಹಾರಾಷ್ಟ್ರದ ನೂತನ ಸರ್ಕಾರ ಅಲ್ಲಿನ ಪ್ರಜೆಗಳಿಗೆ ಒಂದೊಳ್ಳೆ ಗಿಫ್ಟ್‌ ಕೊಟ್ಟಿದೆ. ಸಿಎಂ ಶಿಂಧೆ ಬಹುಮತ ಸಾಬೀತಾಗುತ್ತಿದ್ದಂತೆ ಮಾತೊಂದನ್ನು ಕೊಟ್ಟಿದ್ದರು. ಅದನ್ನೀಗ ಉಳಿಸಿಕೊಂಡಿದ್ದಾರೆ. ಅಂದು ವಿಧಾನಸಭೆಯಲ್ಲಿ ಮಾತನಾಡುತ್ತ ಪೆಟ್ರೋಲ್‌-ಡೀಸೆಲ್‌ ಮೇಲಿನ ತೆರಿಗೆ ಕಡಿಮೆ ಮಾಡುವುದಾಗಿ ಹೇಳಿದ್ದ ಅವರೀಗ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಮಹಾರಾಷ್ಟ್ರಲ್ಲಿ ಪೆಟ್ರೋಲ್‌-ಡೀಸೆಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಅದರ ಅನ್ವಯ ಇನ್ಮುಂದೆ ಪೆಟ್ರೋಲ್‌ ಬೆಲೆ ಲೀಟರ್‌ಗೆ 5 ರೂಪಾಯಿ ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ 3 ರೂಪಾಯಿ ಕಡಿಮೆಯಾಗಿದೆ.

ಪೆಟ್ರೋಲ್‌ ಬೆಲೆ ಮುಂಬೈ ಮಹಾನಗರದಲ್ಲಿ ಕಳೆದ 11 ದಿನಗಳಿಂದ 111.35 ರೂಪಾಯಿ ಇತ್ತು. ಅದೀಗ ಲೀಟರ್‌ಗೆ 106.35ಕ್ಕೆ ಇಳಿದಿದೆ. ಹಾಗೇ ಡೀಸೆಲ್‌ ಬೆಲೆ 97.28 ರೂಪಾಯಿ ಇದ್ದಿದ್ದು, 94.28ಕ್ಕೆ ಇಳಿಕೆಯಾಗಿದೆ. ಈ ಮೂಲಕ ಜನರ ಮೇಲಿನ ಹೊರೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಶಿವಸೇನೆ-ಬಿಜೆಪಿಯ ನೂತನ ಮೈತ್ರಿ ಸರ್ಕಾರ ಜನಾನುಕೂಲಕರ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುತ್ತದೆ. ಅದರ ಭಾಗವಾಗಿಯೇ ಪೆಟ್ರೋಲ್‌-ಡೀಸೆಲ್‌ ಬೆಲೆ ಕಡಿತ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ತಿಳಿಸಿದ್ದಾರೆ.

ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್‌ ದರವೆಷ್ಟು?
ನವ ದೆಹಲಿ: ಪೆಟ್ರೋಲ್‌ 96.72 ರೂ.-ಡೀಸೆಲ್‌ 89.62 ರೂ.
ಮುಂಬೈ: ಪೆಟ್ರೋಲ್‌ 111.35 ರೂ. (ನಾಳೆಯಿಂದ 106.35 ರೂ.)- ಡೀಸೆಲ್‌ 97.28 ರೂ. (ನಾಳೆಯಿಂದ 94.28)
ಕೋಲ್ಕತ್ತಾ: ಪೆಟ್ರೋಲ್‌ 106.03 ರೂ.-ಡೀಸೆಲ್‌ 92.76 ರೂ.
ಚೆನ್ನೈ: ಪೆಟ್ರೋಲ್‌ 102.63 ರೂ.- ಡೀಸೆಲ್‌ 94.24 ರೂಪಾಯಿ.
ಗುವಾಹಟಿ: ಪೆಟ್ರೋಲ್‌ 96.48 ರೂ. -ಡೀಸೆಲ್‌ 84.37 ರೂ.
ಬೆಂಗಳೂರು: ಪೆಟ್ರೋಲ್‌ 101.94 ರೂ.-ಡೀಸೆಲ್‌ 87.89 ರೂ.

ಇದನ್ನೂ ಓದಿ: ಇನ್ನು ಐದು ವರ್ಷದಲ್ಲಿ ದೇಶದಲ್ಲಿ ಪೆಟ್ರೋಲ್‌ ಬ್ಯಾನ್‌ ಆಗುತ್ತಾ? ನಿತಿನ್‌ ಗಡ್ಕರಿ ಹೇಳಿದ್ದೇನು?

Exit mobile version