Site icon Vistara News

PFI Banned | ಪಿಎಫ್‌ಐ ಬ್ಯಾಂಕ್‌ ಖಾತೆ ತಡೆಹಿಡಿದ ಕೇಂದ್ರ ಸರ್ಕಾರ

PFI

ನವದೆಹಲಿ: ದೇಶವಿರೋಧಿ ಚಟುವಟಿಕೆ, ಹಿಂಸಾಚಾರ, ಉಗ್ರರಿಗೆ ಹಣಕಾಸು ಸೇರಿ ಹಲವು ಆರೋಪಗಳ ಹಿನ್ನೆಲೆಯಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI Banned) ಸಂಘಟನೆಯ ಬ್ಯಾಂಕ್‌ಗಳನ್ನೂ ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ಹಾಗೆಯೇ, ನಿಷೇಧದ ನಂತರದ ಪ್ರಕ್ರಿಯೆಯ ಭಾಗವಾಗಿ ಪಿಎಫ್‌ಐ ಕಟ್ಟಡ ಸೇರಿ ಎಲ್ಲ ಆಸ್ತಿಗಳನ್ನು ಜಪ್ತಿ ಮಾಡುತ್ತಿದೆ.

ಪಿಎಫ್‌ಐ ಬ್ಯಾಂಕ್‌ಗಳಿಗೆ ಜಮೆಯಾದ ಹಣವನ್ನು ದೇಶವಿರೋಧಿ ಕೃತ್ಯಗಳಿಗೆ ಬಳಸಿಕೊಂಡ ಹಿನ್ನೆಲೆಯಲ್ಲಿ ಬ್ಯಾಂಕ್‌ ಖಾತೆಗಳನ್ನು ಸರ್ಕಾರ ತಡೆಹಿಡಿದಿದೆ. ಪಿಎಫ್‌ಐ ಸಂಘಟನೆಗೆ ವಿದೇಶದಿಂದಲೂ ದೇಣಿಗೆ ಹರಿದುಬಂದಿದ್ದು, ಇದನ್ನು ಉಗ್ರ ಚಟುವಟಿಕೆಗಳು, ಉಗ್ರರಿಗೆ ತರಬೇತಿ, ಹಿಂಸಾಚಾರ ಸೇರಿ ಹಲವು ಕಾರಣಗಳಿಗೆ ಬಳಸಲಾಗಿದೆ ಎಂಬ ಆರೋಪವಿದೆ. ಹಾಗಾಗಿ, ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ದೇಶವಿರೋಧಿ ಕೃತ್ಯಗಳು, ಹಿಂಸಾಚಾರಕ್ಕೆ ಪ್ರಚೋದನೆ, ಉಗ್ರರಿಗೆ ಹಣಕಾಸು ನೆರವು ನೀಡಿದ್ದು ಸೇರಿ ಹಲವು ಆರೋಪಗಳ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ದೇಶಾದ್ಯಂತ ದಾಳಿ ನಡೆಸಿ ಸಂಘಟನೆಯ ನೂರಾರು ಮುಖಂಡರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | PFI BANNED | ಪಿಎಫ್‌ಐ ರಾಜ್ಯ ಪ್ರಧಾನ ಕಚೇರಿಗೆ ಬಿಗಿ ಭದ್ರತೆ, ಧಾರ್ಮಿಕ ಮುಖಂಡರ ಜತೆ ಚರ್ಚೆ, ರಾಜ್ಯಾದ್ಯಂತ ಕಟ್ಟೆಚ್ಚರ

Exit mobile version