Site icon Vistara News

Phalodi Satta Bazar: ಚುನಾವಣಾ ಫಲಿತಾಂಶದ ಬಗ್ಗೆ ಸಟ್ಟಾ ಬಜಾರ್‌ನ ಪಕ್ಕಾ ಭವಿಷ್ಯವಾಣಿ; ಈ ಮಾರ್ಕೆಟ್‌ನ ಹಿನ್ನೆಲೆ ಏನು?

Phalodi satta market

ನವದೆಹಲಿ: ಲೋಕಸಭಾ ಚುನಾವಣೆಯ(Lok Sabha Election 2024) ಐದನೇ ಹಂತದ ಮತದಾನ ಪೂರ್ಣಗೊಂಡಿದ್ದು, ಈಗಿನಿಂದಲೇ ಸೋಲು ಗೆಲವಿನ ಲೆಕ್ಕಾಚಾರ ಒಂದೆಡೆಯಾದರೆ ಬಿಜೆಪಿ(BJP)ಯ 400 ಸ್ಥಾನಗಳ ಟಾರ್ಗೆಟ್‌ ಬಗೆಗಿನ ಚರ್ಚೆ ಮತ್ತೊಂದೆಡೆ. ಇದರ ನಡುವೆ ನಿಖರ ಚುನಾವಣಾ ಫಲಿತಾಂಶ(Election Result)ದ ಬಗ್ಗೆ ನಿಖರವಾದ ಸಮೀಕ್ಷೆ ವರದಿಗೆ ಖ್ಯಾತಿ ಪಡೆದಿರುವ ಫಲೋಡಿ ಸಟ್ಟಾ ಬಜಾರ್‌(Phalodi Satta Bazar) ಫಲಿತಾಂಶದ ಭವಿಷ್ಯವಾಣಿಯತ್ತ ಎಲ್ಲರ ಕಣ್ಣು ನೆಟ್ಟಿದೆ.‍ ನಾಲ್ಕನೇ ಹಂತದ ಮತದಾನ ಪೂರ್ಣಗೊಂಡ ಬಳಿಕ ಫಲಿತಾಂಶದ ಬಗ್ಗೆ ಭವಿಷ್ಯವಾಣಿ ನುಡಿದಿದ್ದ ಸಟ್ಟಾ ಬಜಾರ್‌, ಬಿಜೆಪಿ ನೇತೃತ್ವದ ಎನ್‌ಡಿಎ ಕೇವಲ 329 ರಿಂದ 332 ಸೀಟು ಗೆಲ್ಲಬಹುದೆಂದು ಹೇಳುವ ಮೂಲಕ ಬಿಜೆಪಿಗೆ ಶಾಕ್‌ ಕೊಟ್ಟಿತ್ತು.

ಫಲೋಡಿ ಸಟ್ಟಾ ಮಾರುಕಟ್ಟೆ ಇತಿಹಾಸವೇನು?

ಇದೀಗ ಲೋಕಸಭೆ ಚುನಾವಣೆ ಕೊನೆಯ ಹಂತಕ್ಕೆ ತಲುಪಿದ್ದು, ಇನ್ನುಳಿದಿರುವುದು ಕೇವಲ ಎರಡೇ ಹಂತದ ಚುನಾವಣೆ. ಹೀಗಿರುವಾಗ ಮತ್ತೊಮ್ಮೆ ಚುನಾವಣಾ ಫಲಿತಾಂಶದ ಭವಿಷ್ಯವಾಣಿಗಾಗಿ ರಾಜಸ್ಥಾನ ಮೂಲಕ ಫಲೋಡಿ ಸಟ್ಟಾ ಬಜಾರ್‌ನತ್ತ ಎಲ್ಲರೂ ಮುಖಮಾಡಿದ್ದಾರೆ. ಫಲೋಡಿ ಸಟ್ಟಾ ಮಾರುಕಟ್ಟೆಯು ಶತಮಾನಗಳ ಇತಿಹಾಸ ಹೊಂದಿದೆ. 19 ನೇ ಶತಮಾನದ ಅಂತ್ಯದ ವೇಳೆಗೆ ಈ ಮಾರುಕಟ್ಟೆಯ ಭವಿಷ್ಯವಾಣಿ ಮೂಲಕ ದೇಶದ ಗಮನವನ್ನೇ ಸೆಳೆದಿತ್ತು. ಹಿಂದೆ ಮಳೆಯ ಮುನ್ಸೂಚನೆಗಾಗಿ ಈ ಮಾರುಕಟ್ಟೆಯ ಮೇಲೆ ಜನ ಅವಲಂಭಿಸಿದ್ದರು. ಬರು ಬರುತ್ತಾ ಈ ಕಲೆ ದಂಧೆಯಾಗಿ ಮಾರ್ಪಾಡಾಗಿತ್ತು. ಅನಂತರದ ದಿನಗಳಲ್ಲಿ ಚುನಾವಣಾ ಭವಿಷ್ಯವಾಣಿ, ಬೆಟ್ಟಿಂಗ್‌ ದಂಧೆಗಳಿಗೆ ಈ ಮಾರುಕಟ್ಟೆ ಕುಖ್ಯಾತಿ ಪಡೆಯಿತು. ಕಾನೂನೂ ಬಾಹಿರವಾಗಿದ್ದರೂ ಕ್ರಿಕೆಟ್‌, ಐಪಿಎಲ್‌ ಸಂದರ್ಭದಲ್ಲಿ ಇಲ್ಲಿ ಅತಿ ಹೆಚ್ಚಾಗಿ ಬೆಟ್ಟಿಂಗ್‌ ನಡೆಯುತ್ತದೆ ಎಂಬ ಆರೋಪ ಕೇಳಿಬರುತ್ತದೆ.

ಫಲೋಡಿ ಮಾರುಕಟ್ಟೆಗೆ ಎಂಟ್ರಿ ಸಿಗೋಗು ಅಷ್ಟು ಸುಲಭ ಅಲ್ಲ

ಫಲೋಡಿ ಸಟ್ಟಾ ಮಾರುಕಟ್ಟೆಯನ್ನು ಪ್ರವೇಶಿಸುವುದು ಹೊರಗಿನವರಿಗೆ ಅಷ್ಟೊಂದು ಸುಲಭದ ಮಾತಲ್ಲ. ಸಾಮಾನ್ಯವಾಗಿ ಏಜೆಂಟ್‌ಗಳ ಮೂಲಕ ಹೋಗಬೇಕಾಗುತ್ತದೆ. ಬೆಟ್ಟಿಂಗ್‌ನಲ್ಲಿ ಭಾಗವಹಿಸುವವರು ಮುಂಚಿತವಾಗಿ ಹಣ ಪಾವತಿಸಬೇಕು. ಈ ಮಾರುಕಟ್ಟೆಯಲ್ಲಿ ಎಲ್ಲಾ ಹಣಕಾಸು ವಹಿವಾಟುಗಳು ಡಿಜಿಟಲ್ ಚಾನೆಲ್‌ಗಳ ಮೂಲಕ ನಡೆಸಲ್ಪಡುತ್ತವೆ. ವಿಷಯದ ಆಧಾರದ ಮೇಲೆ ಬೆಟ್ಟಿಂಗ್‌ ಮೊತ್ತವು ಬದಲಾಗುತ್ತದೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಾರುಕಟ್ಟೆ ಕಾರ್ಯ ನಿರ್ವಹಿಸುತ್ತಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದೆ. ಇದು ಅಕ್ರಮ ಚಟುವಟಿಕೆ ಆಗಿದ್ದರೂ ಚುನಾವಣಾ ಭವಿಷ್ಯ ಕ್ಷೇತ್ರ ನುಡಿಯುವುದರಲ್ಲಿ ವಿಶ್ವಾಸಾರ್ಹತೆಯನ್ನು ಗಳಿಸಿದೆ.

ಚುನಾವಣಾ ಭವಿಷ್ಯವಾಣಿ ಏನು?

ಮೇ 13, 2024 ರಂದು, ಬೆಟ್ಟಿಂಗ್ ಮಾರುಕಟ್ಟೆಯು ಬಿಜೆಪಿ ಈ ಬಾರಿ ಉತ್ತಮ ಪ್ರದರ್ಶನ ತೋರಲಿದೆ ಎಂದು ಹೇಳಿತ್ತು, ಬಿಜೆಪಿ ಸುಮಾರು 300 ಸ್ಥಾನಗಳನ್ನು ಗೆಲ್ಲಲಿದ್ದು. ಹೋಲಿಸಿದರೆ, ಕಾಂಗ್ರೆಸ್ 40 ರಿಂದ 42 ಸ್ಥಾನಗಳನ್ನು ಪಡೆಯಬಹುದೆಂದು ನಿರೀಕ್ಷಿಸಿತ್ತು. ಉತ್ತರಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆಯಾದರೂ ಬಿಜೆಪಿ 80 ಸ್ಥಾನಗಳಲ್ಲಿ 62 ರಿಂದ 65 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ರಾಷ್ಟ್ರವ್ಯಾಪಿ ಕಾಂಗ್ರೆಸ್ 70–85 ಸ್ಥಾನಗಳನ್ನು ಗೆಲ್ಲಲಿದ್ದು, ಬಿಜೆಪಿ 280–290 ಸ್ಥಾನಗಳನ್ನು ಗೆಲ್ಲಲಿದೆ ಎಂದು ಬೆಟ್ಟಿಂಗ್ ಮಾರುಕಟ್ಟೆ ಭವಿಷ್ಯ ನುಡಿದಿತ್ತು. ಫಲೋಡಿ ಸತ್ತಾ ಬಜಾರ್ ಮತ್ತು ಮಾಧ್ಯಮ ಮೂಲಗಳು ಬಿಜೆಪಿಯು ಒಟ್ಟಾರೆಯಾಗಿ 335 ರಿಂದ 340 ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ಹೊಂದಿದೆ ಎಂದು ಭವಿಷ್ಯ ನುಡಿದಿತ್ತು.

ಇದನ್ನೂ ಓದಿ:Bangladesh MP Missing Case: ನಿಗೂಢವಾಗಿ ಕಣ್ಮರೆ ಆಗಿದ್ದ ಬಾಂಗ್ಲಾದೇಶ ಸಂಸದನ ಬರ್ಬರ ಕೊಲೆ

Exit mobile version