ನವದೆಹಲಿ: ಕಳೆದ ವರ್ಷ ಅಪ್ರಾಪ್ತೆ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ಬರ್ಬರ ಕೊಲೆ(Physical Abuse & Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಂತಕರಿಗೆ ರಾಜಸ್ಥಾನ(Rajasthan)ದ ಬಿಲ್ವಾರ ವಿಶೇಷ ಕೋರ್ಟ್ ಮರಣದಂಡನೆ(Death Penalty) ವಿಧಿಸಲಾಗಿದೆ. ನ್ಯಾಯಮೂರ್ತಿ ಅನಿಲ್ ಗುಪ್ತಾ ಇದ್ದ ನ್ಯಾಯಪೀಠ, ಪ್ರಕರಣದ ದೋಷಿಗಳಾದ ಕಲು ಮತ್ತು ಕಹ್ನಾ ಎಂಬ ಸಹೋದರರಿಗೆ ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದ್ದು, ಇದು ಅಪರೂಪಗಳಲ್ಲಿ ಅಪರೂಪದ ಪ್ರಕರಣ ಎಂದು ಹೇಳಿದೆ.
ಬಾಲಕಿಯನ್ನು ಅತ್ಯಾಚಾರಗೈದು ಬಳಿಕ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲೇಬಿಯಾ ಬುಡಗಟ್ಟು ಜನಾಂಗದ ಇಬ್ಬರು ಸಹೋದರರಾದ ಕಲು ಮತ್ತು ಕಹ್ನಾ ವಿರುದ್ಧ ಪೋಕ್ಸೋ ಕಾಯ್ದೆಯಲ್ಲಿ ಕೇಸು ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮೂರು ಮಹಿಳೆಯರು ಸೇರಿದಂತೆ ಇತರೆ ಏಳು ಜನರ ವಿರುದ್ಧವೂ ಕೇಸ್ ದಾಖಲಿಸಲಾಗಿತ್ತು. ಅವರು ಆರೋಪಿಗಳಿಗೆ ಸಾಕ್ಷ್ಯಾಧಾರ ನಾಶಕ್ಕೆ ಸಹಕರಿಸಿದ ಆರೋಪ ಎದುರಿಸುತ್ತಿದ್ದರು. ಇದೀಗ ಕಲು ಮತ್ತು ಕಹ್ನಾಗೆ ಮರಣದಂಡನೆ ವಿಧಿಸಿರುವ ಕೋರ್ಟ್ ಉಳಿದ ಏಳು ಜನರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ. ಇದೀಗ ಇವರ ಬಿಡುಗಡೆ ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಇನ್ನು ಮೂವರು ಮಹಿಳೆಯರಲ್ಲಿ ಇಬ್ಬರು ಕಲು ಮತ್ತು ಕಹ್ನಾನ ಪತ್ನಿಯರು ಎಂದು ಹೇಳಲಾಗಿದೆ.
ಇನ್ನು ಈ ಬಗ್ಗೆ ಸರ್ಕಾರಿ ವಕೀಲ ಮಹಾವೀರ್ ಸಿಂಗ್ ಕಿಶ್ವಂತ್ ಪ್ರತಿಕ್ರಿಯಿಸಿದ್ದು, ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲು ಮತ್ತು ಕಹ್ನಾಗೆ ಮರಣದಂಡನೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ನಡೆದಿತ್ತು ಪೈಶಾಚಿಕ ಕೃತ್ಯ
ಬಿಲ್ವರಾ ಜಿಲ್ಲೆಯ ಕೊಟ್ರಿ ತಾಲೂಕಿನ ಶಹಾಪುರದಲ್ಲಿ ನಡೆದಿದ್ದು, ದನ ಮೇಯಿಸಲು ಹೋಗಿದ್ದ 14ವರ್ಷದ ಬಾಲಕಿ ನಿಗೂಢವಾಗಿ ಕಣ್ಮರೆ ಆಗಿದ್ದಳು. ದನಗಳು ಹಟ್ಟಿಗೆ ವಾಪಾಸಾದರೂ ಮಗಳು ಬಾರದೇ ಇರುವುದನ್ನು ಕಂಡ ಪೋಷಕರು ಗಾಬರಿಗೊಂಡಿದ್ದರು. ಆಕೆಗಾಗಿ ಮನೆಯವರೆಲ್ಲಾ ಹುಡುಕಾಟ ಶುರು ಮಾಡಿದ್ದರು. ಸುಮಾರು ಹೊತ್ತಿನ ಹುಡುಕಾಟದ ಬಳಿಕ ರಾತ್ರಿ 10ಗಂಟೆ ವೇಳೆಗೆ ಇದ್ದಿಲಿನ ಕುಲುಮೆಯಿಂದ ಹೊಗೆ ಹೋಗುತ್ತಿರುವುದನ್ನು ಗಮನಿಸಿದ್ದರು. ಅದನ್ನು ಕೆದಕಿ ನೋಡಿದಾಗ ಬಾಲಕಿ ಧರಿಸಿದ್ದ ಬಟ್ಟೆ ತುಂಡುಗಳು, ಚಪ್ಪಲಿ ಪತ್ತೆಯಾಗಿತ್ತು.
ತಕ್ಷಣ ಪೊಲೀಸರಿಗೆ ಕರೆ ಮಾಡಿದ ಕುಟುಂಬಸ್ಥರು ಘಟನೆ ಬಗ್ಗೆ ವಿವರಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಅರೆಬೆಂದ ಮೃತದೇಹ ಸಿಕ್ಕಿತ್ತು. ಇದರಿಂದ ಆಕೆಯನ್ನು ಹಂತಕರು ಜೀವಂತವಾಗಿ ಸುಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಇದಾದ ಬಳಿಕ ವಿಧಿ ವಿಜ್ಞಾನ ವಿಭಾಗಕ್ಕೆ ಮೃತದೇಹ ಕಳಿಸಿದಾಗ, ಬಾಲಕಿ ಪ್ರಜ್ಞಾ ಹೀನ ಸ್ಥಿತಿಯಲ್ಲಿರುವಾಗಲೇ ಆಕೆಯನ್ನು ಇದ್ದಿಲಿನ ಕುಲುಮೆಯಲ್ಲಿ ಸುಟ್ಟಿದ್ದಾರೆ. ಆಕೆಯನ್ನು ಇಬ್ಬರು ಅತ್ಯಾಚಾರ ಎಸಗಿದ್ದಾರೆ ಎಂಬುದು ತನಿಖೆಯಲ್ಲಿ ಬಯಲಾಗಿತ್ತು.
ಇನ್ನು ಈ ಕೃತ್ಯ ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿತ್ತು. ಅಲ್ಲದೇ ರಾಜಕೀಯ ಟೀಕಾಪ್ರಹಾರಕ್ಕೂ ಕಾರಣವಾಗಿತ್ತು. ಪೊಲೀಸರು ಪ್ರಕರಣದಕ್ಕೆ ಸಂಬಂಧಿಸಿದಂತೆ ಕೇವಲ 30ದಿನಗಳಲ್ಲಿ 400ಕ್ಕೂ ಅಧಿಕ ಪುಟುಗಳ ಚಾರ್ಜ್‌ಶೀಟ್ ದಾಖಲಿಸಿದ್ದರು.
ಇದನ್ನೂ ಓದಿ:Baby Death : ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಯ್ತಾ 3 ವರ್ಷದ ಕಂದಮ್ಮ?