Site icon Vistara News

Pigs Licking Plates | ಇಂದಿರಾ ರಸೋಯಿ ಕೇಂದ್ರದಲ್ಲಿ ಪ್ಲೇಟ್ ನೆಕ್ಕಿದ ಹಂದಿಗಳು, ಊಟ ಮಾಡುವ ಜನರ ಗತಿಯೇನು?

Pigs

ಜೈಪುರ: ದೇಶದಲ್ಲಿ ಯಾವುದೇ ಸರ್ಕಾರಗಳು ಕಡಿಮೆ ಬೆಲೆಗೆ ಊಟ ನೀಡುವ ಕ್ಯಾಂಟೀನ್‌ಗಳನ್ನು ತೆರೆದರೆ ಅವುಗಳಿಂದ ಖಂಡಿತವಾಗಿಯೂ ಬಡವರಿಗೆ ಅನುಕೂಲ ಆಗುತ್ತದೆ. ಆದರೆ, ಸರ್ಕಾರ ಅಥವಾ ಸಿಬ್ಬಂದಿಯು ಇಂತಹ ಕ್ಯಾಂಟೀನ್‌ಗಳಲ್ಲಿ ನಿರ್ಲಕ್ಷ್ಯ ಮಾಡಿದರೆ ಅದು ಜನರಿಗೆ ಮಾರಕವಾಗುತ್ತದೆ ಎಂಬುದು ರಾಜಸ್ಥಾನದ ನಿದರ್ಶನವೇ ಸಾಕ್ಷಿಯಾಗಿದೆ. ಹೌದು, ರಾಜಸ್ಥಾನದಲ್ಲಿ ಜನರಿಗೆ 8 ರೂ.ಗೆ ಊಟ ನೀಡುವ “ಇಂದಿರಾ ರಸೋಯಿ ಯೋಜನೆ” (Indira Rasoi Yojana) ನಾಯಿಗಳು ಪ್ಲೇಟ್‌ಗಳನ್ನು ನೆಕ್ಕುತ್ತಿರುವ ವಿಡಿಯೊ ವೈರಲ್‌ (Viral Video) ಆಗಿದೆ.

ಭರತ್‌ಪುರದ ಎಂಎಸ್‌ಜೆ ಕಾಲೇಜ್‌ ಎದುರಿರುವ ಕಿಚನ್‌ನಲ್ಲಿ ಹಂದಿಗಳು ಹಾವಳಿ ನಡೆಸಿವೆ. ಪ್ಲೇಟ್‌ಗಳು ಸೇರಿ ಅಲ್ಲಿರುವ ರಾಶಿ ರಾಶಿ ಪಾತ್ರೆಗಳನ್ನು ನೆಕ್ಕಿವೆ. ಈ ವಿಡಿಯೊ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಟು ರೂಪಾಯಿಗೆ ಒಂದು ಊಟ ಕೊಡುವ ದಿಸೆಯಲ್ಲಿ ಇಂದಿರಾ ರಸೋಯಿ ಯೋಜನೆಯನ್ನು ಅಶೋಕ್‌ ಗೆಹ್ಲೋಟ್‌ ಜಾರಿಗೊಳಿಸಿದ್ದಾರೆ. ಇವುಗಳಲ್ಲಿ ಬಡವರೇ ಊಟ ಮಾಡುತ್ತಾರೆ. ಆದರೆ, ಹೀಗೆ ನಿರ್ಲಕ್ಷ್ಯ ವಹಿಸಿದರೆ ಹೇಗೆ ಎಂಬ ಪ್ರಶ್ನೆಗಳು ಕೇಳಿಬಂದಿವೆ.

ಇದನ್ನೂ ಓದಿ | Cockroach In Meal | ವಿಮಾನದಲ್ಲಿ ಕೊಟ್ಟ ಊಟದಲ್ಲಿ ಜಿರಳೆ ಪತ್ತೆ, ಇದಕ್ಕೆ ಏರ್‌ಲೈನ್ಸ್‌ ಏನು ಹೇಳತ್ತೆ?

Exit mobile version