Site icon Vistara News

Plane grounded : ಫ್ರಾನ್ಸ್​ನಲ್ಲಿ ಸಿಲುಕಿದ 303 ಭಾರತೀಯರಿಗೆ ಸಂಪೂರ್ಣ ನೆರವು

Vatry Airtport

ಬೆಂಗಳೂರು: 300 ಭಾರತೀಯರು ಪ್ರಯಾಣಿಸುತ್ತಿದ್ದ ವಿಮಾನವೊಂದು ಫ್ರಾನ್ಸ್​ನ ವಾಟ್ರಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಅವರೆಲ್ಲರಿಗೂ ಅಲ್ಲಿನ ಸರ್ಕಾರ ನೆರವು ನೀಡುತ್ತಿದೆ. ಆದರೆ, ಅದೊಂದು ಬೃಹತ್​ ಮಾನವ ಕಳ್ಳಸಾಗಣೆಯ ಪ್ರಕರಣವಾಗಿರಬಹುದು ಎಂಬ ಅನುಮಾನದ ಮೇಲೆ ತನಿಖೆ ನಡೆಸಲಾಗುತ್ತಿದೆ. ಮರ್ನೆ ವಿಮಾನ ನಿಲ್ದಾಣದ ಹಾಲ್​ನಲ್ಲಿ ಎಲ್ಲರಿಗೂ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ.

ಮಾರ್ನೆ ವಿಮಾನ ನಿಲ್ದಾಣದ ತುರ್ತು ಸೇವೆಗಳು 303 ಪ್ರಯಾಣಿಕರಿಗೆ ತಾತ್ಕಾಲಿಕ ಹಾಸಿಗೆಗಳನ್ನು ನೀಡಿವೆ. ಅವರಿಗೆ ಶೌಚಾಲಯಗಳು ಮತ್ತು ಸ್ನಾನಕ್ಕೂ ಅವಕಾಶ ನೀಡಲಾಗಿದೆ. ವಾಟ್ರಿ ವಿಮಾನ ನಿಲ್ದಾಣದಲ್ಲಿ ಊಟ ಮತ್ತು ಬಿಸಿ ಪಾನೀಯಗಳನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತೀಯ ಜನರಲ್ ಕಾನ್ಸುಲೇಟ್​​ನ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಟ್ವಿಟರ್ ನಲ್ಲಿ ಹಂಚಿಕೊಂಡ ಪೋಸ್ಟ್​ನಲ್ಲಿ ಈ ಮಾಹಿತಿ ನೀಡಲಾಗಿದೆ ಫ್ರಾನ್ಸ್​​ನಲ್ಲಿರುವ ರಾಯಭಾರ ಕಚೇರಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಸಿಲುಕಿದವರ ಜತೆ ಸಂಹವನ ಸಾಧಿಸುತ್ತಿದೆ. ರಾಯಭಾರ ಕಚೇರಿಯ ಸಿಬ್ಬಂದಿ ವಾರಾಂತ್ಯದ ರಜಾದ ಹೊರತಾಗಿಯೂ ಭಾರತೀಯರ ಯೋಗಕ್ಷೇಮ ನೋಡುತ್ತಿದ್ದಾರೆ.

ವಿಮಾನವನ್ನು ಫ್ರಾನ್ಸ್ ಏಕೆ ಇಳಿಸಿತು

ರೊಮೇನಿಯನ್ ಚಾರ್ಟರ್ ಕಂಪನಿ ಲೆಜೆಂಡ್ ಏರ್​ಲೈನ್ಸ್​​ ನಿರ್ವಹಿಸುತ್ತಿದ್ದ ವಿಮಾನವು ದುಬೈನಿಂದ ಹೋಗುವಾಗ ತಾಂತ್ರಿಕ ಸಮಸ್ಯೆಯಿಂದಾಗಿ ವಾಟ್ರಿಯಲ್ಲಿ ಇಳಿದಿದೆ. ಬಳಿಕ ಫ್ರೆಂಚ್ ಪೊಲೀಸರು ಮಧ್ಯಪ್ರವೇಶಿಸಿ ವಿಮಾನವನ್ನು ಅಲ್ಲೇ ಇರಿಸಿಕೊಂಡಿದ್ದಾರೆ. ಪ್ರವಾಸದ ಪರಿಸ್ಥಿತಿಗಳು ಮತ್ತು ಉದ್ದೇಶದ ಬಗ್ಗೆ ನ್ಯಾಯಾಂಗ ತನಿಖೆಯನ್ನು ಪ್ರಾರಂಭಿಸಲಾಗಿದೆ. ಸಂಘಟಿತ ಅಪರಾಧಗಳಲ್ಲಿ ಪರಿಣತಿ ಹೊಂದಿರುವ ಘಟಕವು ಶಂಕಿತ ಮಾನವ ಕಳ್ಳಸಾಗಣೆ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಶಂಕಿಸಲಾಗಿದೆ. ವಿಮಾನದ ಬಗ್ಗೆ ಅನಾಮಧೇಯ ಮಾಹಿತಿದಾರರೊಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ : Khalistan Terrorists: ಅಮೆರಿಕದಲ್ಲಿ ಖಲಿಸ್ತಾನಿಗಳಿಂದ ಹಿಂದೂ ದೇವಾಲಯ ವಿರೂಪ, ಭಾರತ ತೀವ್ರ ಖಂಡನೆ

ಅಪ್ರಾಪ್ತ ವಯಸ್ಸಿನವರೂ ಇದ್ದಾರೆ

ವಿಮಾನವು ಮಧ್ಯ ಅಮೇರಿಕ ರಾಷ್ಟ್ರವಾಗಿರುವ ನಿಕರಾಗುವಾಗೆ ತೆರಳುತ್ತಿತ್ತು. ಈ ವಿಮಾನದಲ್ಲಿ 13 ಅಪ್ರಾಪ್ತ ವಯಸ್ಕರು ಸೇರಿದ್ದಾರೆ. ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ವಿಚಾರಣೆಯ ನಂತರ ವಿಮಾನದ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಲೆಜೆಂಡ್ ಏರ್​ಲೈನ್ಸ್​​ ತಿಳಿಸಿದೆ.

ವಿಮಾನದ ಸಿಬ್ಬಂದಿಯ ಸದಸ್ಯರನ್ನು ಪ್ರಶ್ನಿಸಲಾಗಿದೆ. ವಿಚಾರಣೆ ಮುಗಿದಿದೆ ಮತ್ತು ಅವರೆಲ್ಲರೂ ಬಿಟ್ಟು ಕಳುಹಿಸಲಾಗಿದೆ. ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

Exit mobile version