ವಾರಾಣಸಿ: ಇಲ್ಲಿನ ಜ್ಞಾನವಾಪಿ ಮಸೀದಿಯಲ್ಲಿ (Gyanvapi Case ) ಇದೆ ಎನ್ನಲಾದ ಶಿವಲಿಂಗಕ್ಕೆ ಪೂಜೆಗೆ ಅವಕಾಶ ಕೋರಿ ಸಲ್ಲಿಸಲಾಗಿದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ತ್ವರಿತ ನ್ಯಾಯಾಲಯವು, ಮಂಗಳವಾರ (ನವೆಂಬರ್ 8) ತೀರ್ಪು ಪ್ರಕಟಿಸಬೇಕಿತ್ತು. ಆದರೆ, ನ್ಯಾಯಾಲಯವು ತೀರ್ಪು ಪ್ರಕಟಣೆಯನ್ನು ನವೆಂಬರ್ 14ಕ್ಕೆ ಮುಂದೂಡಿದೆ.
ನ್ಯಾಯಾಲಯವು ಮಂಗಳವಾರೇ ತನ್ನ ತೀರ್ಪನ್ನು ಪ್ರಕಟಿಸಬೇಕಿತ್ತು. ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರನಿಗೆ ತಕ್ಷಣದಿಂದಲೇ ಪೂಜೆಗೆ ಅವಕಾಶ ನೀಡುವುದು, ಇಡೀ ಜ್ಞಾನವಾಪಿ ಸಂಕೀರ್ಣವನ್ನು ಹಿಂದೂಗಳಿಗೆ ಹಸ್ತಾಂತರಿಸುವುದು ಮತ್ತು ಜ್ಞಾನವಾಪಿ ಸಂಕೀರ್ಣದೊಳಗೆ ಮುಸ್ಲಿಮರಿಗೆ ಪ್ರವೇಶವನ್ನು ನಿರಾಕರಿಸುವುದು… ಈ ಮೂರೂ ವಿಚಾರಗಳಿಗೆ ಸಂಬಂಧಿಸಿದಂತೆ ವಾರಾಣಸಿಯ ತ್ವರಿತ ನ್ಯಾಯಾಲಯವು ತೀರ್ಪು ನೀಡಲಿದೆ.
ಈ ಹಿಂದಿನ ವಿಚಾರಣೆ ವೇಳೆ, ಮಸೀದಿಯೊಳಗೆ ಇದೆ ಎನ್ನಲಾದ ಶಿವಲಿಂಗದ ವೈಜ್ಞಾನಿಕ(ಕಾರ್ಬನ್ ಡೇಟಿಂಗ್) ಪರೀಕ್ಷೆಗೆ ನ್ಯಾಯಾಲಯವು ನಿರಾಕರಿಸಿತ್ತು. ಕಾರ್ಬನ್ ಡೇಟಿಂಗ್ ಪರೀಕ್ಷೆಯ ಮೂಲಕ ಶಿವಲಿಂಗ ಎಷ್ಟು ಹಳೆಯದು ಎಂದು ತಿಳಿದುಕೊಳ್ಳಲು ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಕೋರ್ಟ್ ಇದಕ್ಕೆ ಸಮ್ಮತಿಸರಲಿಲ್ಲ. ಇದೇ ವೇಳೆ, ವಝುಖಾನದಲ್ಲಿರುವುದು ಕಾರಂಜಿಯೇ ಹೊರತು ಶಿವಲಿಂಗವಲ್ಲ ಎಂದು ಮುಸ್ಲಿಮರು ತಮ್ಮ ವಾದವನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ | Explainer: ಜ್ಞಾನವಾಪಿ ಮಸೀದಿ ಕೊಳದಲ್ಲಿ ಶಿವಲಿಂಗ, ಮಂದಿರ ಪರ ಇನ್ನೊಂದು ಪುರಾವೆ?