Site icon Vistara News

G20 Summit | ಜಿ20 ಸಭೆ ಹಿನ್ನೆಲೆ ಇಂಡೋನೇಷ್ಯಾ ತಲುಪಿದ ಮೋದಿ, ಅದ್ಧೂರಿ ಸ್ವಾಗತ ಹೇಗಿತ್ತು ನೋಡಿ

G 20 Summit

ಬಾಲಿ: ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ಎರಡು ದಿನಗಳ ಇಂಡೋನೇಷ್ಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ನವೆಂಬರ್‌ 14) ರಾತ್ರಿ ಇಂಡೋನೇಷ್ಯಾದ ಬಾಲಿ ತಲುಪಿದ್ದು, ಸಾಂಪ್ರದಾಯಿಕ ಸ್ವಾಗತ ದೊರೆತಿದೆ. ಬಾಲಿ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸುತ್ತಲೇ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.

ಎರಡು ದಿನ ನಡೆಯುವ ಶೃಂಗಸಭೆಯು ಮಂಗಳವಾರ (ನವೆಂಬರ್‌ 15) ಬೆಳಗ್ಗೆ ಆರಂಭವಾಗಲಿದ್ದು, ನರೇಂದ್ರ ಮೋದಿ ಅವರು ಹಲವು ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಹಾಗೆಯೇ, ಜಾಗತಿಕ ನಾಯಕರ ಜತೆ ಚರ್ಚಿಸಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹಾಗೂ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಸೇರಿ ಹಲವು ಜಾಗತಿಕ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ | G20 Summit | 45 ಗಂಟೆ, 10 ವಿಶ್ವ ನಾಯಕರ ಜತೆ ಚರ್ಚೆ, 20 ಸಭೆ, ಮೋದಿ ಇಂಡೋನೇಷ್ಯಾ ಪ್ರವಾಸದ ಮಾಹಿತಿ ಹೀಗಿದೆ

Exit mobile version