Site icon Vistara News

PM Modi Birthday: ದಿರಸಿನಿಂದಲೇ ಮೋಡಿ ಮಾಡುತ್ತಾರೆ ಮೋದಿ… ಇಲ್ಲಿವೆ ಅವರ ಸ್ಪೆಷಲ್‌ ಲುಕ್‌ಗಳು

modi special look

ನಿಮಗೆ ರಾಜಕೀಯ ಇಷ್ಟ ಇಲ್ಲದಿರಬಹುದು. ಆದರೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ರಾಜಕೀಯ ಇಷ್ಟ ಇಲ್ಲದಿರುವವರ ಗಮನವನ್ನೂ ಸೆಳೆಯುವುದರಲ್ಲಿ ಅನುಮಾನವಿಲ್ಲ. ಸದಾ ಅಚ್ಚುಕಟ್ಟಾದ ದಿರಿಸು ಧರಿಸಿಕೊಂಡು ಕಾಣಿಸಿಕೊಳ್ಳುವ ಅವರ ಡ್ರೆಸ್ಸಿಂಗ್‌ ಸೆನ್ಸ್‌ (Narendra modi dressing style) ಅನ್ನು ಅನೇಕರು ಇಷ್ಟ ಪಡುತ್ತಾರೆ. ಯಾವ ಸಮಯಕ್ಕೆ, ಯಾವ ಸ್ಥಳಕ್ಕೆ ಯಾವ ರೀತಿಯ ಡ್ರೆಸ್‌ ಹಾಕಬೇಕು ಎನ್ನುವುದನ್ನು ಅವರನ್ನು ನೋಡಿಯೇ ಕಲಿಯಬೇಕು. ನಮ್ಮ ಪ್ರಧಾನಿಯವರ ಜನ್ಮದಿನದ (PM Modi Birthday) ಹಿನ್ನೆಲೆಯಲ್ಲಿ , ಅವರು ವಿವಿಧ ಸಂದರ್ಭಗಳಲ್ಲಿ ಧರಿಸಿದ್ದ ವಿವಿಧ ವಿಶೇಷ ಉಡುಗೆಗಳ ಮಾಹಿತಿ ಇಲ್ಲಿದೆ ನೋಡಿ.

1) ಭೂತಾನ್‌ ಭೇಟಿ

modi in korea

ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗಿ ಚುನಾಯಿತರಾದ ಮೇಲೆ ಕೈಗೊಂಡ ಮೊದಲ ವಿದೇಶಿ ಪ್ರವಾಸವೆಂದರೆ ಅದು ನೆರೆಯ ರಾಷ್ಟ್ರವಾದ ಭೂತಾನ್‌ಗೆ. ಅಲ್ಲಿಗೆ ಅವರು ವಿಶೇಷವಾಗಿ ಭಾರತದ ಖಾದಿ ಕುರ್ತಾವನ್ನು ಧರಿಸಿ ತೆರಳಿದ್ದರು. ಬಿಳಿ ಬಣ್ಣದ ಕುರ್ತಾ, ಪೈಜಾಮ ಮತ್ತು ಅದಕ್ಕೆ ಗೋಧಿ ಬಣ್ಣದ ಕೋಟ್‌ ಹಾಕಿ ಮಿಂಚಿದ್ದರು. ಅದೇ ದಿರಿಸಿನಲ್ಲಿ ಅವರು ಭೂತಾನ್‌ನ ರಾಜ ಜಿಗ್ಮೆ ಖೇಸರ್ ನಾಮ್‌ಗೈಲ್ ವಾಂಗ್‌ಚುಕ್ ಮತ್ತು ರಾಣಿ ಜೆಟ್ಸನ್ ಪೆಮಾ ಅವರನ್ನು ಭೇಟಿಯಾಗಿದ್ದು, ಭಾರೀ ಸುದ್ದಿಯಾಗಿತ್ತು.

2) ಬ್ರೆಜಿಲ್‌ನಲ್ಲಿ ಹೈ ಫ್ಯಾಶನ್‌

modi in korea

ಖಾದಿ ತೊಟ್ಟರು ಎಂದ ಮಾತ್ರಕ್ಕೆ ಮೋದಿ ಅವರನ್ನು ಔಟ್‌ ಆಫ್‌ ಟ್ರೆಂಡ್‌ ಎನ್ನುವಂತಿಲ್ಲ. ಏಕೆಂದರೆ ಮೋದಿ ಅವರಿಗೆ ಫ್ಯಾಶನ್‌ ಲೋಕದ ಸೂಕ್ಷ್ಮತೆ ಗೊತ್ತಿದೆ. 2014ರ ಜುಲೈನಲ್ಲಿ ಬ್ರೆಜಿಲ್‌ ದೇಶದಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಗೆ ಮೋದಿ ಅವರು ಹೈ ಫ್ಯಾಶನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಪ್ರತಿ ಸಲ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೂ ಅವರು ಅತ್ಯದ್ಭುತವಾದ ಸೂಟ್‌ ಅನ್ನು ಧರಿಸಿದ್ದರು. ವಿಶೇಷವಾದ ಸೂಟ್‌ ಅನ್ನು ಧರಿಸಿಕೊಂಡೇ ಬ್ರೆಜಿಲ್‌ ಅಧ್ಯಕ್ಷೆ ದಿಲ್ಮಾ ರೌಸೆಫ್ ಅವರನ್ನು ಹಾಗೂ ವಿಶ್ವದ ಹಲವು ನಾಯಕರನ್ನು ಭೇಟಿಯಾಗಿದ್ದರು.

3) ನೇಪಾಳದಲ್ಲಿ ಪಕ್ಕಾ ಹಿಂದೂ

modi in korea

ಮೋದಿ ಅವರು 2014ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆಗ ಅವರು ಕೇಸರಿ ಬಣ್ಣದ ಕುರ್ತಾ ಧರಿಸಿ ಅದಕ್ಕೆ ಕೆಂಪು ಬಣ್ಣದ ಶಾಲನ್ನು ಹೊದ್ದಿದ್ದರು. ಅವರ ಕುರ್ತಾ ಪ್ರೀತಿ ಎಷ್ಟರ ಮಟ್ಟಿಗೆ ಸುದ್ದಿಯಾಯಿತೆಂದರೆ ಮೋದಿ ಕುರ್ತಾ ಎನ್ನುವ ಹ್ಯಾಶ್‌ಟ್ಯಾಗ್‌ ಕೂಡ ತಯಾರಾಗಿ ಇಂದಿಗೂ ಅದು ಹೆಚ್ಚಿನದಾಗಿ ಬಳಕೆಯಲ್ಲಿದೆ. ಪಶುಪತಿನಾಥನ ದರ್ಶನ ಮಾಡುವಾಗ ಅವರು ಪಕ್ಕಾ ಹಿಂದೂ ಸಂಪ್ರದಾಯದಂತೆ ಕೇಸರಿ ಬಟ್ಟೆಯನ್ನೇ ಧರಿಸಿ ಹೋಗಿದ್ದು ವಿಶೇಷ.

4) ಅಮೆರಿಕದಲ್ಲಿ ಸೂಟು ಬೂಟು

modi in korea

ಮೋದಿ ಅವರು 2014ರ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಆಗ ಅವರು ಪಕ್ಕಾ ಉದ್ಯಮಿಯ ರೀತಿಯಲ್ಲಿ ಕಾಣಿಸಿಕೊಂಡಿದ್ದರು. ಅಮೆರಿಕದವರು ಕೇವಲ ಕಪ್ಪು ಬಿಳುಪನ್ನೇ ಬಣ್ಣಗಳೆಂದು ಉಡುಗೆ ತೊಡುತ್ತಿದ್ದರೆ, ಮೋದಿ ಅವರು ವೈನ್‌ ಬಣ್ಣದ ಸೂಟು ಬೂಟಿನಲ್ಲಿ ವಿದೇಶಿ ನೆಲದಲ್ಲಿ ಓಡಾಡಿ ಬಂದಿದ್ದರು. ಅವರ ಆ ಸೂಟು ಭಾರತದ ಉದ್ಯಮಿಗಳಿಗೆ ಇಷ್ಟವಾಗಿ ಆ ಉಡುಗೆ ಟ್ರೆಂಡ್‌ ಕೂಡ ಆಗಿತ್ತು.

5) ಮಿಕ್ಸ್‌ ಅಂಡ್‌ ಮ್ಯಾಚ್‌

modi in korea

2015ರ ಜನವರಿಯಲ್ಲಿ ಅಮೆರಿಕ ಅಧ್ಯಕ್ಷ ಬರಕ್‌ ಒಬಾಮಾ ಮತ್ತು ಅವರ ಪತ್ನಿ ಭಾರತಕ್ಕೆ ಪ್ರವಾಸ ಬಂದಿದ್ದರು. ಆ ವೇಳೆ ಮೋದಿ ಅವರು ಮಿಕ್ಸ್‌ ಅಂಡ್‌ ಮ್ಯಾಚ್‌ ಶೈಲಿಯ ಉಡುಗೆ ಧರಿಸಿದ್ದರು. ಕುರ್ತಾ ಮೇಲೆ ನೆಹರು ಕೋಟನ್ನು ಹಾಕಿಕೊಂಡು ಅದರ ಮೇಲೆ ಕೇಸರಿ ಬಣ್ಣದ ಶಾಲನ್ನು ಹೊದ್ದುಕೊಂಡಿದ್ದರು. ಒಂದು ರೀತಿಯಲ್ಲಿ ಮೇಕ್‌ ಇನ್‌ ಇಂಡಿಯಾ ಅಭಿಯಾನವನ್ನು ತಮ್ಮದೇ ಶೈಲಿಯಲ್ಲಿ ನಡೆಸಿದ್ದರು. ಮೋದಿ ಅವರ ಈ ಮಿಕ್ಸ್‌ ಅಂಡ್‌ ಮ್ಯಾಚ್‌ ಸಾರ್ವಜನಿಕರಿಗೆ ಭಾರೀ ಇಷ್ಟವಾಗಿತ್ತು ಕೂಡ.

6) ಜರ್ಮನಿಯಲ್ಲಿ ಬ್ಯಾಕ್‌ ಅಂಡ್‌ ಬ್ಲಾಕ್‌

modi in korea

2015ರ ಏಪ್ರಿಲ್‌ನಲ್ಲಿ ಮೋದಿ ಅವರು ಜರ್ಮನಿಗೆ ಭೇಟಿ ನೀಡಿದ್ದರು. ಸಾಮಾನ್ಯವಾಗಿ ಬ್ಲಾಕ್‌ ಅಂಡ್‌ ಬ್ಲಾಕ್‌ ಉಡುಗೆ ಅಷ್ಟು ಚೆನ್ನಾಗಿ ಕಾಣುವುದಿಲ್ಲ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಬ್ಲಾಕ್‌ ಅಂಡ್‌ ವೈಟ್‌ ಉಡುಗೆಗೆ ಜನ ಕೈ ಚಾಚುತ್ತಾರೆ. ಆದರೆ ಬ್ಲಾಕ್‌ ಅಂಡ್‌ ಬ್ಲಾಕ್‌ ಸೂಟನ್ನು ಹಾಕಿಕೊಂಡು ಸುಂದರವಾಗಿ ಕಾಣುವುದು ಹೇಗೆ ಎನ್ನುವುದನ್ನು ಪ್ರಧಾನಿ ಮೋದಿ ಅವರು ತಮ್ಮ ಜರ್ಮನಿಯ ಪ್ರವಾಸದಲ್ಲಿ ತೋರಿಸಿಕೊಟ್ಟಿದ್ದರು. ಜರ್ಮನಿಯ ಹ್ಯಾನೋವರ್‌ನಲ್ಲಿ ವಿಶ್ವದ ಅತಿದೊಡ್ಡ ಕೈಗಾರಿಕಾ ವ್ಯಾಪಾರ ಮೇಳವನ್ನು ಉದ್ಘಾಟಿಸಿದಾಗ ಅವರು ಬ್ಲಾಕ್‌ ಅಂಡ್‌ ಬ್ಲಾಕ್‌ ಸೂಟನ್ನು ಧರಿಸಿದ್ದರು.

7) ಜಪಾನ್‌ನಲ್ಲಿ ಬಿಳಿ ಲುಕ್‌

modi in korea

ಸಾಮಾನ್ಯವಾಗಿ ವ್ಯವಹಾರದ ಸಭೆಗಳಿಗೆ ಯಾರೂ ವೈಟ್‌ ಅಂಡ್‌ ವೈಟ್‌ ಹಾಕಿಕೊಂಡು ಬರುವುದಿಲ್ಲ. ಇದರ ಬಗ್ಗೆ ಚೆನ್ನಾಗಿ ಅರಿವಿರುವ ಪ್ರಧಾನಿ ಮೋದಿ ಅವರು 2015ರಲ್ಲಿ ಜಪಾನ್‌ನಲ್ಲಿ ಬುದ್ಧ ಧರ್ಮದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದಾಗ ವೈಟ್‌ ಅಂಡ್‌ ವೈಟ್‌ ಧರಿಸಿದ್ದರು. ಬಿಳಿ ಬಣ್ಣದ ಕುರ್ತಾ ಜತೆ ಕೋಟ್‌ ಅನ್ನು ಧರಿಸಿದ್ದ ಅವರು ಅದೇ ಉಡುಗೆಯಲ್ಲಿ ಅಲ್ಲಿನ ಸಾರ್ವಜನಿಕರೊಂದಿಗೆ ಮಾತನಾಡಿದ್ದರು ಕೂಡ.

8) ಚೀನಾದಲ್ಲಿ ಕನ್ನಡಕದ ಕಮಾಲ್‌

modi in korea

2015ರ ಮೇ ತಿಂಗಳಲ್ಲಿ ಮೋದಿ ಅವರು ಚೀನಾಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಕ್ಸಿಯಾನ್‌ನಲ್ಲಿರುವ ಕ್ವಿನ್‌ ಟೆರಾಕೋಟಾ ವಾರಿಯರ್ಸ್‌ ಮತ್ತು ಹಾರ್ಸಸ್‌ ಮ್ಯೂಸಿಯಂಗೆ ಭೇಟಿ ನೀಡಿದಾಗ ಅವರು ಬಿಳಿ ಬಣ್ಣದ ಕುರ್ತಾ ಪೈಜಾಮ ಧರಿಸಿದ್ದರು. ಅದರೊಂದಿಗೆ ಗಾಢ ಬಣ್ಣದ ಶಾಲೊಂದನ್ನು ತೊಟ್ಟಿದ್ದರು. ಹಾಗೆಯೇ ಕಣ್ಣಿಗೆ ಕಪ್ಪು ಬಣ್ಣದ ಕೂಲಿಂಗ್‌ ಗ್ಲಾಸ್‌ ಅನ್ನೂ ಹಾಕಿಕೊಂಡಿದ್ದರು. ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದ ಮೋದಿ ಅವರ ಉಡುಗೆ ಬಗ್ಗೆ ಭಾರೀ ಚರ್ಚೆಯಾಗಿತ್ತು.

9) ಮಂಗೋಲಿಯನ್‌ ನಿಲುವಂಗಿ

modi in korea

ಮೋದಿಯವರು ಆಯಾ ಸಂದರ್ಭಕ್ಕೆ ತಕ್ಕಂತೆ ದಿರಿಸು ಧರಿಸುವುದರಲ್ಲಿ ಫೇಮಸ್‌. 2015ರಲ್ಲಿ ಅವರು ಮಂಗೋಲಿಯಾದ ಉಲಾನ್‌ನ ಬಾಟರ್‌ನಲ್ಲಿ ಮಿನಿ ನಾದಮ್‌ ಉತ್ಸವದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಮಂಗೋಲಿಯಾ ಸಂಪ್ರದಾಯದ ನಿಲುವಂಗಿಯನ್ನು ತೊಟ್ಟಿದ್ದರು. ಹಾಗೆಯೇ ಮಂಗೋಲಿಯನ್‌ ಸಂಗೀತ ವಾದ್ಯವಾದ ಯೋಚಿನ್‌ ಅನ್ನು ನುಡಿಸಿದ್ದರು. ಬಿಲ್ಲುಗಾರಿಕೆಯನ್ನೂ ಪ್ರಯತ್ನಿಸಿದ್ದರು. ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಭಾರತದ ಪ್ರಧಾನಿಯನ್ನು ಕಂಡ ಮಂಗೋಲಿಯಾದ ಜನತೆ ಖುಷಿಯಿಂದ ಕುಣಿದಾಡಿತ್ತು.

10) ದಕ್ಷಿಣ ಕೊರಿಯಾದಲ್ಲಿ ಫ್ಯಾಶನ್‌

modi in korea

ರಾಜಕಾರಣಿಗಳು ಮಾಡಬಹುದಾದ ದೊಡ್ಡ ಫ್ಯಾಶನ್‌ ಅಂದರೆ ಅದು ಸೂಟ್‌. ಅದೇ ಸೂಟನ್ನು ಮೋದಿ ಅವರು 2015ರಲ್ಲಿ ದಕ್ಷಿಣ ಕೋರಿಯಾಕ್ಕೆ ಭೇಟಿ ಕೊಟ್ಟಾಗ ಧರಿಸಿದ್ದರು. ಶರ್ಟ್‌ ಮೇಲೆ ಬೂದು ಬಣ್ಣದ ಸೂಟ್‌ ಧರಿಸಿ ಮಿಂಚಿದ್ದರು. ಅವರ ಉಡುಗೆ ಕಂಡು ಅನೇಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: PM Modi Birthday: ಸೇವೆಯಿಂದ ಅಭಿವೃದ್ಧಿವರೆಗೆ; ದೇಶಾದ್ಯಂತ ನಾಳೆ ಮೋದಿ ಜನ್ಮದಿನ ಭರ್ಜರಿ ಆಚರಣೆ

Exit mobile version