ನವದೆಹಲಿ: ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ (Rishi Sunak) ಅವರು ಬ್ರಿಟನ್ ಪ್ರಧಾನಿಯಾಗಿದ್ದನ್ನು ಭಾರತೀಯರೂ ಸಂಭ್ರಮಿಸುತ್ತಿದ್ದಾರೆ. ಭಾರತ ಮೂಲದವರೊಬ್ಬರು ನಮ್ಮನ್ನಾಳಿದ ದೇಶದಲ್ಲಿ ಉನ್ನತ ಹುದ್ದೆ ಅಲಂಕರಿಸುತ್ತಿರುವ ಕಾರಣ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ರಿಷಿ ಸುನಕ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
“ಬ್ರಿಟನ್ ಪ್ರಧಾನಿ ಆಗಿರುವುದಕ್ಕೆ ರಿಷಿ ಸುನಕ್ ಅವರಿಗೆ ಅಭಿನಂದನೆಗಳು. ಭಾರತ-ಬ್ರಿಟನ್ ಒಗ್ಗೂಡಿ ಜಾಗತಿಕ ವಿಷಯಗಳು ಸಮಸ್ಯೆಗಳು ಹಾಗೂ 2030ರವರೆಗೆ ಜಾರಿಗೊಳಿಸುವ ಯೋಜನೆಗಳಿಗೆ ಕ್ರಿಯಾಯೋಜನೆ ರೂಪಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ಉದ್ದೇಶ ಇದೆ. ಬ್ರಿಟನ್‌ನಲ್ಲಿರುವ ಎಲ್ಲ ಭಾರತೀಯರಿಗೆ ದೀಪಾವಳಿ ಹಬ್ಬದ ವಿಶೇಷ ಶುಭಾಶಯಗಳು. ನಮ್ಮ ಐತಿಹಾಸಿಕ ಒಪ್ಪಂದಗಳು ಆಧುನಿಕ ಸಹಭಾಗಿತ್ವವಾಗಿ ಮಾರ್ಪಾಡಾಗಲಿ” ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | Rishi Sunak | ‘ಹೆಮ್ಮೆಯ ಹಿಂದೂ’ ಬ್ರಿಟನ್ ಪಿಎಂ ರಿಷಿ ಸುನಕ್ ಕುರಿತ ಕುತೂಹಲಕರ ಸಂಗತಿಗಳಿವು