Site icon Vistara News

G20 Summit | ವಿಶ್ವ ನಾಯಕರಿಗೆ ಭಾರತದ ಕಲೆ, ಸಂಸ್ಕೃತಿ ಸಾರುವ ಗಿಫ್ಟ್ ನೀಡಿದ ಮೋದಿ, ಇಲ್ಲಿವೆ ಫೋಟೊಗಳು

Joe-Biden

ಬಾಲಿ: ಇಂಡೋನೇಷ್ಯಾದ ಬಾಲಿಯಲ್ಲಿ ಜಿ20 ಶೃಂಗಸಭೆ (G20 Summit) ಮುಕ್ತಾಯಗೊಂಡು ಮುಂಬರುವ ಜಿ20 ಸಭೆಯ ಅಧ್ಯಕ್ಷತೆಯನ್ನು ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಹಲವು ರಾಷ್ಟ್ರಗಳಿಗೆ ಭಾರತದ ಸಂಸ್ಕೃತಿ ಹಾಗೂ ಕಲೆಯ ಸಿರಿವಂತಿಕೆ ಸಾರುವ ಉಡುಗೊರೆಗಳನ್ನು ನೀಡಿದ್ದಾರೆ. ಹಾಗಾದರೆ, ಮೋದಿ ಅವರು ಯಾವ ದೇಶಗಳಿಗೆ ಯಾವ ಉಡುಗೊರೆ ನೀಡಿದರು ಎಂಬುದರ ಮಾಹಿತಿಯನ್ನು ಫೋಟೊಗಳ ಸಮೇತ ನೀಡಲಾಗಿದೆ.

ಚೋಟಾ ಉದಯಪುರದ ‘ಪಿಥೋರಾ’ ಎಂಬ ಚಿತ್ರಕಲೆಯನ್ನು ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾಗೆ ಉಡುಗೊರೆ ನೀಡಿದರು.
ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ತಯಾರಿಸುವ ವಿಶೇಷ ಶಾಲನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾಗೆ ಉಡುಗೊರೆಯಾಗಿ ನೀಡಿದರು.
ಗುಜರಾತ್‌ನ ಕಛ್‌ ಜಿಲ್ಲೆಯ ಅಗಟೆ ಬೌಲ್‌ಅನ್ನು ಮೋದಿ ಅವರು ಸಿಂಗಾಪುರ, ಜರ್ಮನಿ ಹಾಗೂ ಫ್ರಾನ್ಸ್‌ ನಾಯಕರಿಗೆ ಉಡುಗೊರೆ ನೀಡಿದರು.
ಇಂಡೋನೇಷ್ಯಾಗೆ ನರೇಂದ್ರ ಮೋದಿ ನೀಡಿದ ಉಡುಗೊರೆಗಳಲ್ಲಿ ಗುಜರಾತ್‌ನ ಸೂರತ್‌ನಲ್ಲಿ ತಯಾರಿಸುವ ಬೆಳ್ಳಿಯ ಬೌಲ್‌ ಕೂಡ ಒಂದಾಗಿದೆ.
ಅಹಮದಾಬಾದ್‌ನಲ್ಲಿ ಹೆಚ್ಚು ಪ್ರಸಿದ್ಧಿಯಾಗಿರುವ, ದೇವಿ ಎಂದೇ ಆರಾಧಿಸುವ ಮಾತಾ ನಿ ಪಚೇಡಿ ಕಲಾಕೃತಿಯನ್ನು ಮೋದಿ ಬ್ರಿಟನ್‌ಗೆ ನೀಡಿದರು.
ಅಮೆರಿಕಕ್ಕೆ ಮೋದಿ ಅವರು ಕಾಂಗ್ರಾ ಮಿನಿಯೇಚರ್‌ ಪಿಥೋರಾ ಪೇಂಟಿಂಗ್‌ ಉಡುಗೊರೆ ನೀಡಿದರು. ಇದು 18ನೇ ಶತಮಾನದಲ್ಲಿ ರಚನೆಯಾದ ಕಲಾಕೃತಿ.

ಇದನ್ನೂ ಓದಿ | G20 Summit | ಇಂಡೋನೇಷ್ಯಾದಲ್ಲಿ ವಿಶ್ವ ನಾಯಕರ ಜತೆ ಮೋದಿ ಮಾತುಕತೆ, ಇಲ್ಲಿವೆ ಪ್ರಮುಖ ಫೋಟೊಗಳು

Exit mobile version