ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ (ಜನವರಿ ೭) ಸಂಸತ್‌ನಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯ ಪ್ರಸ್ತಾಪಿಸಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಕ್ಕೆ ನರೇಂದ್ರ ಮೋದಿ (PM Modi Parliament Speech) ಅವರೂ ಇದೇ ವಿವಿ ಪ್ರಸ್ತಾಪಿಸಿ ತಿರುಗೇಟು ನೀಡಿದ್ದಾರೆ.
“ಸದನದಲ್ಲಿ ನಿನ್ನೆ ಒಬ್ಬರು ಹಾರ್ವರ್ಡ್ ವಿಶ್ವವಿದ್ಯಾಲಯದ ಬಗ್ಗೆ ಪದೇಪದೆ ಹೇಳುತ್ತಿದ್ದರು. ಅವರಿಗೆ ಹಾರ್ವರ್ಡ್‌ನಲ್ಲಿ ಓದಿರುವ ಶೋಕಿ ಇದೆ. ಕೆಲ ನಾಯಕರಿಗೆ ಹಾರ್ವರ್ಡ್ ವಿವಿ ಬಗ್ಗೆ ಭಾರಿ ಪ್ರೀತಿ ಇದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲೂ ಹಾರ್ವರ್ಡ್ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಅದೇ ಹಾರ್ವರ್ಡ್ ವಿವಿಯಲ್ಲಿ ಒಂದು ಅಧ್ಯಯನ ನಡೆದಿದೆ. ಅದರ ವಿಷಯವಂತೂ ತುಂಬ ಚೆನ್ನಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಏಳಿಗೆ ಮತ್ತು ಅವನತಿ (The Rise And Decline Of Indian Congress Party) ಎಂಬ ವಿಷಯದ ಬಗ್ಗೆ ಅಧ್ಯಯನ ನಡೆದಿದೆ. ಇದರ ಕುರಿತು ಎಲ್ಲ ವಿವಿಗಳಲ್ಲೂ ಅಧ್ಯಯನ ನಡೆಯಬೇಕು” ಎಂದು ಕುಟುಕಿದರು.
ರಾಹುಲ್ ಗಾಂಧಿ ಹೇಳಿದ್ದೇನು?
ಉದ್ಯಮಿ ಗೌತಮ್ ಅದಾನಿ ಹೆಸರನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಅವರ ವಿರುದ್ಧ ಸಂಸತ್‌ನಲ್ಲಿ ವಾಗ್ದಾಳಿ ನಡೆಸಿದ್ದರು. “ಗೌತಮ್ ಅದಾನಿಯವರ ಅಸ್ತಿಯ ಹೆಚ್ಚಳಕ್ಕೆ ನರೇಂದ್ರ ಮೋದಿ ಸರ್ಕಾರವೇ ಕಾರಣವಾಗಿದೆ. ಇದರ ಕುರಿತು ಹಾರ್ವರ್ಡ್ ವಿವಿಯಲ್ಲಿ ಅಧ್ಯಯನ ನಡೆಸಬೇಕು” ಎಂದಿದ್ದರು.
ಇದನ್ನೂ ಓದಿ: PM Modi Parliament Speech: ದೇಶದಲ್ಲೀಗ ರಾಜಕೀಯ ಸ್ಥಿರತೆ ಸಾಧನೆ, ಸಂಸತ್ತಲ್ಲಿ ಮೋದಿ ಉವಾಚ