Site icon Vistara News

Global Leader Approval Rating: ಜನಪ್ರಿಯತೆಯಲ್ಲಿ ಅಮೆರಿಕ ಅಧ್ಯಕ್ಷ, ಬ್ರಿಟನ್ ಪ್ರಧಾನಿಯನ್ನು ಹಿಂದಿಕ್ಕಿದ ಭಾರತದ ಪಿಎಂ ಮೋದಿ

Unemployment rate

India’s Unemployment Rate At Record Low, SBI Research Says

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೊಸದಾಗಿ ಬಿಡುಗಡೆಯಾಗಿರುವ ಅಪ್ರೂವಲ್ ರೇಟಿಂಗ್‌ನಲ್ಲಿ ಮೋದಿ ಅವರು, ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden), ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜನವರಿ 26-31ರ ನಡುವೆ ಮಾರ್ನಿಂಗ್ ಕನ್ಸಲ್ಟ್‌ನ ವಿಶ್ವ ನಾಯಕರ ಅಪ್ರೂವಲ್ ರೇಟಿಂಗ್‌ನಲ್ಲಿ (Approval Rating) ಪ್ರಧಾನಿ ಮೋದಿ ಮೊದಲನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಈ ಪಟ್ಟಿ ಒಟ್ಟು 22 ಜಾಗತಿಕ ನಾಯಕರ ಅಪ್ರೂವಲ್ ರೇಟಿಂಗ್ ಹೊಂದಿದೆ.

ಪ್ರಧಾನಿ ಮೋದಿ ಅವರು ಒಟ್ಟು ಶೇ.78 ಅಪ್ರೂವಲ್ ರೇಟ್‌‌ನೊಂದಿಗೆ ಮೊದಲನೇ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಮೆಕ್ಸಿಕೋ ಅಧ್ಯಕ್ಷ ಲೋಪೆಜ್ ಒಬ್ರಡಾರ್ (Lopez Obrador) ಶೇ.68 ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ (Anthony Albanese) ಅವರು ಶೇ.58 ಅಪ್ರೂವಲ್ ರೇಟಿಂಗ್‌ನೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ಶೇ.40 ಹಾಗೂ ಬ್ರಿಟನ್ ಪಿಎಂ ರಿಷಿ ಸುನಕ್ ಅವರು ಶೇ.30 ಅಂಕಗಳೊಂದಿಗೆ ಕ್ರಮವಾಗಿ 6 ಮತ್ತು 10ನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.

ಇದನ್ನೂ ಓದಿ: Modi in Mangalore | ರಾಜ್ಯದಲ್ಲಿ ಮೋದಿ ನಂತರ ಜನಪ್ರಿಯ ವ್ಯಕ್ತಿ ಯಡಿಯೂರಪ್ಪ !

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು 52 ಶೇಕಡಾ ರೇಟಿಂಗ್‌ನೊಂದಿಗೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಲುಲಾ ಡಿ ಸಿಲ್ವಾ ಅವರು 50 ಪ್ರತಿಶತದ ಅನುಮೋದನೆಯೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಭಾರತದಲ್ಲೂ ಪ್ರಧಾನಿ ಮೋದಿ ಅವರು ಜನಪ್ರಿಯತೆ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಇಂಡಿಯಾ ಟುಡೇ ನಡೆಸಿದ ಮೂಡ್ ಆಫ್ ನೇಷನ್ ಸಮೀಕ್ಷೆಯಲ್ಲೂ ಮೋದಿ ಅವರು ಮುಂದೆ ಇದ್ದಿರುವುದು ತಿಳಿದು ಬಂದಿತ್ತು.

Exit mobile version