Site icon Vistara News

ಗುಜರಾತ್‌ಗೆ ನರೇಂದ್ರ ಮೋದಿ ಆಗಾಗ ಭೇಟಿ, ಪಟೇಲ್ ಸಮುದಾಯ ಸೆಳೆಯಲು ಆದ್ಯತೆ

ನರೇಂದ್ರ ಮೋದಿ

ನರೇಂದ್ರ ಮೋದಿ

ಹೊಸದಿಲ್ಲಿ: ಈ ವರ್ಷದ ಸೆಪ್ಟೆಂಬರ್‌ನಲ್ಲಿ ಗುಜರಾತ್‌ ವಿಧಾನಸಭಾ ಚುನಾವಣೆ ನಡೆಯಲಿದೆ. ಇದೇ ಹೊತ್ತಿಗೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಈ ರಾಜ್ಯಕ್ಕೆ ಭೇಟಿ ನೀಡುವುದೂ ಹೆಚ್ಚಾಗುತ್ತಿದೆ. ಮುಂದಿನ ಮೂರು ವಾರಗಳಲ್ಲಿ ಅವರು ಮೂರು ಬಾರಿ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಆಸ್ಪತ್ರೆಗಳು ಸೇರಿದಂತೆ ನಾನಾ ಯೋಜನೆಗಳನ್ನು ಈ ಸಂದರ್ಭ ಲೋಕಾರ್ಪಣೆ ಮಾಡಲಿರುವುದು ಕೂಡಾ ಮುಂದಿನ ಚುನಾವಣೆಯ ಸಿದ್ಧತೆ ಎಂದೇ ಹೇಳಲಾಗುತ್ತಿದೆ.

ಮೇ 28ರಂದು ರಾಜ್‌ಕೋಟ್‌ನ ಹಳ್ಳಿಯಲ್ಲಿ ಪಟೇಲ್ ಸಮುದಾಯದ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡುವ ಸಾಧ್ಯತೆಯಿದೆ. ಪ್ರಭಾವಿ ಸಮುದಾಯವಾಗಿರುವ ಪಟೇಲರಿಂದ ಬೆಂಬಲ ಪಡೆಯುವ ನಿಟ್ಟಿನಲ್ಲಿ ಬಿಜೆಪಿ ಸುಮಾರು ನಾಲ್ಕು ಲಕ್ಷ ಜನರನ್ನು ಈ ಸಮಾವೇಶದಲ್ಲಿ ಒಟ್ಟುಗೂಡಿಸುವ ಗುರಿ ಹೊಂದಿದೆ. ಒಟ್ಟಾರೆ ಅಂದಾಜಿನ ಪ್ರಕಾರ, ಗುಜರಾತ್‌ನ ಜನಸಂಖ್ಯೆಯ ಸುಮಾರು 12 ಪ್ರತಿಶತದಷ್ಟು ಪಟೇಲರು ಇದ್ದಾರೆ.

ಐದು ವರ್ಷಗಳ ಹಿಂದೆ ವಿಧಾನಸಭಾ ಚುನಾವಣೆಗೆ ಮುನ್ನ ಪಾಟಿದಾರ್ (ಪಟೇಲ್) ಚಳವಳಿಯ ಮುಖ್ಯಸ್ಥನಾಗಿದ್ದ ಹಾರ್ದಿಕ್ ಪಟೇಲ್ ಅವರು ಮೊನ್ನೆಯಷ್ಟೇ ಕಾಂಗ್ರೆಸ್ ತೊರೆದಿದ್ದಾರೆ. ಈ ಹಂತದಲ್ಲಿ ಹಾರ್ದಿಕ್ ಪಟೇಲ್‌ ನಾಯಕತ್ವದ ಪಟೇಲ್ ಸಮುದಾಯವನ್ನು ಓಲೈಸಿಕೊಳ್ಳುವ ಈ ಕಾರ್ಯವು ಬಿಜೆಪಿ ಪಾಲಿಗೆ  ಮಹತ್ವದ್ದಾಗಿದೆ. ಒಂದೊಮ್ಮೆ ಹಾರ್ದಿಕ್‌ ಪಟೇಲ್‌ ಬಿಜೆಪಿ ಸೇರುವುದಾಗಿದ್ದರೆ ಅಂದೇ ಸೇರ್ಪಡೆಯಾಗುವ ಸಾಧ್ಯತೆಯೂ ಇದೆ.

‘ಪ್ರಧಾನಿ ಜೂನ್ 10 ರಂದು ಸರಣಿ ಕಾರ್ಯಕ್ರಮಗಳನ್ನು ಉದ್ಘಾಟಿಸಲು ಸೂರತ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಕಾರ್ಯಕ್ರಮಗಳಲ್ಲಿ ಹಲವಾರು ಜಾತಿಗಳು ಮತ್ತು ಸಮುದಾಯಗಳಿಗೆ ಸೇರಿದ ಜನರು ಭಾಗವಹಿಸಲಿದ್ದಾರೆ ಎಂದು  ಆ ನಾಯಕರು ತಿಳಿಸಿದರು.
ಗುಜರಾತ್‌ಗೆ ಪ್ರಧಾನಿಯವರ ಮೂರನೇ ಭೇಟಿಯು ವಡೋದರಾದಲ್ಲಿ ನಡೆಯಲಿದೆ.
ವರ್ಷದ ಅಂತ್ಯಕ್ಕೆ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ಅದರ ಭಾಗವಾಗಿಯೇ ಪ್ರಧಾನಿಯವರು ಪದೇ ಪದೇ ತಮ್ಮ ತವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಿಸುತ್ತಾರೆ.
ಪಕ್ಷವು ‘ಪೇಜ್ ಕಮಿಟಿ ಸದಸ್ಯರ’ ಬೃಹತ್‌ ಸಮಾವೇಶವನ್ನು ಆಯೋಜಿಸುತ್ತಿದೆ. ಜೂನ್ 18 ರಂದು ಪ್ರಧಾನಿಯವರ ಭೇಟಿ ನಿಗದಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
“ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ಈ ಪೇಜ್ ಕಮಿಟಿ ಸದಸ್ಯರು ಅದ್ಭುತ ಕಾರ್ಯಗಳನ್ನು ಮಾಡಿದ್ದಾರೆ. ಮಹಿಳೆಯರು ನಮ್ಮ ನಿಜವಾದ ಸೈನಿಕರು, ಅವರು ನಮಗೆ ಜನರ ಬೆಂಬಲವನ್ನು ಗಳಿಸಿಕೊಟ್ಟರು. ಮತ್ತು ನಾವು ಮರಳಿ ಅಧಿಕಾರಕ್ಕೆ ಬರುವುದನ್ನು ಖಾತ್ರಿಪಡಿಸಿಕೊಂಡರು. ಹಾಗಾಗಿ ಪೇಜ್ ಕಮಿಟಿ ಸದಸ್ಯರ ಸಭೆ ನಿರ್ಣಾಯಕ ಸಭೆಯಾಗಲಿದೆ’ ಎಂದು ಮೂಲಗಳು ತಿಳಿಸಿವೆ.
ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗೌರವಾನ್ವಿತ ಗೆಲುವನ್ನು ಖಚಿತಪಡಿಸಿಕೊಳ್ಳಲು ಅಹಮದಾಬಾದ್‌ನಲ್ಲಿ ಆಯೋಜಿಸಲಾದ ಚಿಂತನ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ತಿಳಿಸಿದ್ದರು.
ಪಕ್ಷವು 182 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಚುನಾವಣೆಗೆ ತಯಾರಿ ಆರಂಭಿಸಿದೆ. ಗುಜರಾತಿನಲ್ಲಿ ಬಿಜೆಪಿ 27 ವರ್ಷಗಳಿಂದ ಅಧಿಕಾರದಲ್ಲಿದೆ ಮತ್ತು ಆಡಳಿತ ವಿರೋಧಿ ಅಲೆಯನ್ನು ತಟಸ್ಥಗೊಳಿಸಲು ತಂತ್ರಗಳನ್ನು ರೂಪಿಸುತ್ತಿದೆ.

Exit mobile version