ವಾಷಿಂಗ್ಟನ್: ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿ ಯುದ್ಧಕ್ಕಿದು ಸಮಯವಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯು ರಷ್ಯನ್ನರ ಮೇಲೆ ಪ್ರಭಾವ ಬೀರಿದೆ (PM Modi ) ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ (CIA) ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಉಜ್ಬೆಕಿಸ್ತಾನದ ಸಮರ್‌ಖಂಡ್‌ನಲ್ಲಿ ನಡೆದ ಎಸ್‌ಸಿಒ ಶೃಂಗದಲ್ಲಿ (Shanghai Cooperation Organisation) ಮಾತನಾಡಿದ ಸಂದರ್ಭ, ಯುದ್ಧ ಮಾಡುವ ಸಮಯ ಇದಲ್ಲ ಎಂದು ಹೇಳಿದ್ದರು. ಕಳೆದ ತಿಂಗಳು ನಡೆದ ಜಿ20 ಶೃಂಗ ಸಮಾವೇಶದಲ್ಲಿ ಇದು ಯುದ್ಧದ ಯುಗ ಅಲ್ಲ ಎಂಬ ಸಂದೇಶ ಬಿಂಬಿತವಾಗಿತ್ತು.
ಉಕ್ರೇನ್ ಸಂಘರ್ಷದ ಪರಿಣಾಮ ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ರಷ್ಯಾ ನಡುವೆ ಸಂಬಂಧಗಳು ಹಳಸಿವೆ. ಇಂಥ ಬಿಕ್ಕಟ್ಟಿನ ನಡುವೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಯುದ್ಧ ಬೇಡ ಎಂದು ಶಾಂತಿಯ ಸಂದೇಶವನ್ನು ಸಾರಿರುವುದು ಉಭಯ ಬಣಗಳ ಉದ್ವಿಗ್ನತೆಯನ್ನು ಉಪ ಶಮನ ಮಾಡುವಲ್ಲಿ ಸಹಕರಿಸಿದೆ ಎಂದು ಭಾವಿಸಲಾಗಿದೆ.
ಸಂಘರ್ಷದ ಪರಿಣಾಮ ಅಣ್ವಸ್ತ್ರ ಬಳಕೆಯಾಗುವ ಅಪಾಯ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಕಳವಳ ವ್ಯಕ್ತಪಡಿಸಿರುವುದು ಪರಿಣಾಮಕಾರಿಯಾಗಿದೆ. ಇದು ರಷ್ಯನ್ನರ ಮೇಲೆ ಪ್ರಭಾವ ಬೀರಿದೆ ಎಂದು ನಾನು ಭಾವಿಸುತ್ತೇನೆ ಎಂದು ಸಿಐಎ ನಿರ್ದೇಶಕ ವಿಲಿಯಂ ಜೆ ಬರ್ನ್ಸ್ ತಿಳಿಸಿದ್ದಾರೆ.