Site icon Vistara News

PM Modi Russia Visit: “ಕೊಲೆಗಡುಕನನ್ನು ಮೋದಿ ಅಪ್ಪಿಕೊಂಡಿದ್ದಾರೆ”- ರಷ್ಯಾ ಭೇಟಿಗೆ ಉಕ್ರೇನ್‌ ಅಸಮಾಧಾನ

PM Modi Russia visit

ಉಕ್ರೇನ್‌: ಪ್ರಧಾನಿ ನರೇಂದ್ರ ಮೋದಿ(PM Modi Russia Visit) ರಷ್ಯಾ ಪ್ರವಾಸದ ಬೆನ್ನಲ್ಲೇ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ (Volodymyr Zelenskiy) ಅಸಮಾಧಾನ ಹೊರ ಹಾಕಿದ್ದಾರೆ. ಭಾರತದ ಪ್ರಧಾನಿ ಮೋದಿ(PM Narendra Modi) ಪ್ರಪಂಚದ ಅತಿದೊಡ್ಡ ಕೊಲೆಗಡುಕನನ್ನು ಆಲಂಗಿಸಿಕೊಂಡಿದ್ದಾರೆ ಎಂದು ಪುಟಿನ್‌(Vladimir Putin) ವಿರುದ್ಧ ಕಿಡಿ ಕಾರಿದ್ದಾರೆ. ಮೋದಿಯವರ ಮಾಸ್ಕೋ ಭೇಟಿ ನಿರಾಶದಾಯಕ ಮತ್ತು ಶಾಂತಿ ಪ್ರಯತ್ನಗಳ ಮೇಲಿನ ಬಹುದೊಡ್ಡ ಹೊಡೆತ ಎಂದು ಕರೆದಿದ್ದಾರೆ.

ನಿನ್ನೆ ಪ್ರಧಾನಿ ಮೋದಿ ರಷ್ಯಾಗೆ ತೆರಳಿದ್ದು, ಅಲ್ಲಿ ಪುಟಿನ್‌ ಅವರನ್ನು ಅಪ್ಪಿಕೊಂಡು ಸ್ವಾಗತಿಸಿದ್ದರು. ಈ ಫೊಟೋ ಸಾಮಾಜಿಕ ಜಾಲತಾಣ ವೈರಲ್‌ ಆಗಿತ್ತು. ಇನ್ನು ಮೋದಿ ಭೇಟಿಗೂ ಕೆಲವೇ ಗಂಟೆ ಮುನ್ನ ಅಂದರೆ ಸೋಮವಾರ ಮುಂಜಾನೆ ರಷ್ಯಾದ ಕ್ಷಿಪಣಿಗಳು ಉಕ್ರೇನಿಯನ್ ನಗರಗಳ ಮೇಲೆ ದಾಳಿ ಮಾಡಿದ್ದು, ಕನಿಷ್ಠ 37 ಜನರು ಸಾವನ್ನಪ್ಪಿದ್ದಾರೆ ಮತ್ತು 170 ಜನರು ಗಾಯಗೊಂಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಝೆಲೆನ್ಸ್ಕಿ, ನರೇಂದ್ರ ಮೋದಿಯನ್ನು ಗುರಿಯಾಗಿಸಿಕೊಂಡು ಪುಟಿನ್ ಅವರನ್ನು ಕೊಲೆಗಾರ ಎಂದು ಕರೆದಿದ್ದಾರೆ. “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕ ಮಾಸ್ಕೋದಲ್ಲಿ ವಿಶ್ವದ ಅತ್ಯಂತ ರಕ್ತಸಿಕ್ತ ಅಪರಾಧಿಯನ್ನು ಅಪ್ಪಿಕೊಳ್ಳುವುದನ್ನು ನೋಡುವುದು ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.

ರಷ್ಯಾ-ಉಕ್ರೇನ್‌ ಯುದ್ಧ ಕೊನೆಗೊಳಿಸಲು ಆಗ್ರಹ

ಪ್ರಸ್ತುತ ಎರಡು ದಿನಗಳ ಅಧಿಕೃತ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವಂತೆ ನೇರ ಮನವಿ ಮಾಡಿದರು. ಮಾಸ್ಕೋದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕೃತ ನಿವಾಸದಲ್ಲಿ ಅನೌಪಚಾರಿಕ ಸಭೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರಿಗೆ ಯುದ್ಧಭೂಮಿಯಲ್ಲಿ ಯಾವುದೇ ಪರಿಹಾರವನ್ನು ಕಂಡುಹಿಡಿಯಲಾಗುವುದಿಲ್ಲ ಎಂದು ಹೇಳಿದರು.

“ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಸೇರಿದಂತೆ ಯುಎನ್ ಚಾರ್ಟರ್ ಅನ್ನು ಗೌರವಿಸಲು ಭಾರತ ಯಾವಾಗಲೂ ಕರೆ ನೀಡಿದೆ. ಯುದ್ಧಭೂಮಿಯಲ್ಲಿ ಯಾವುದೇ ಪರಿಹಾರವಿಲ್ಲ. ಮಾತುಕತೆ ಮತ್ತು ರಾಜತಾಂತ್ರಿಕತೆಯು ಮುಂದಿನ ಮಾರ್ಗವಾಗಿದೆ” ಎಂದು ಔತಣಕೂಟದಲ್ಲಿ ಪುಟಿನ್ ಅವರಿಗೆ ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Uttara Kannada News: ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಸತೀಶ ಕೆ. ಸೈಲ್ ಭೇಟಿ

Exit mobile version