Site icon Vistara News

PM Modi France Visit: ಗುರುವಾರದಿಂದ ಮೋದಿ ಫ್ರಾನ್ಸ್‌, ಯುಎಇ ಪ್ರವಾಸ; ಭೇಟಿಯ ವೇಳಾಪಟ್ಟಿ ಇಲ್ಲಿದೆ

PM Modi France Visit

PM Modi To Visit France and UAE From July 13-15; Check Full Details

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಅಮೆರಿಕ ಸೇರಿ ಹಲವು ರಾಷ್ಟ್ರಗಳ ಪ್ರವಾಸ ಮುಗಿಸಿಕೊಂಡು ಬಂದ ಪ್ರಧಾನಿ ನರೇಂದ್ರ ಮೋದಿ ಅವರೀಗ ಫ್ರಾನ್ಸ್‌ ಹಾಗೂ ಯುಎಇ ಪ್ರವಾಸ (PM Modi France Visit) ಕೈಗೊಳ್ಳಲು ಅಣಿಯಾಗಿದ್ದಾರೆ. ಜುಲೈ 13ರಿಂದ ಜುಲೈ 15ರವರೆಗೆ ನರೇಂದ್ರ ಮೋದಿ ಅವರು ಅವರು ಮೂರು ದಿನ ಎರಡು ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇದೇ ವೇಳೆ ಮೋದಿ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಜುಲೈ 14ರಂದು ಮೋದಿ ಅವರು ಪ್ಯಾರಿಸ್‌ನಲ್ಲಿ ನಡೆಯುವ ಬ್ಯಾಸ್ಟೈಲ್‌ ಡೇ ಪರೇಡ್‌ನಲ್ಲಿ ಭಾಗವಹಿಸಲಿದ್ದು, ಗೆಸ್ಟ್‌ ಆಫ್‌ ಆನರ್‌ ಸ್ವೀಕರಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಭಾರತ ಸೇನೆಯ ಮೂರೂ ಪಡೆಗಳ ಯೋಧರು ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಮೋದಿ ಅವರು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅವರಿಗಾಗಿ ವಿಶೇಷ ಭೋಜನ ಕೂಟವನ್ನೂ ಆಯೋಜಿಸಲಾಗಿದೆ.

ನರೇಂದ್ರ ಮೋದಿ ಅವರು ಯಾವುದೇ ದೇಶಕ್ಕೆ ಹೋದರೂ ಅಲ್ಲಿ ನೆಲೆಸಿರುವ ಭಾರತೀಯರ ಜತೆ ಮಾತುಕತೆ ನಡೆಸಲಿದ್ದಾರೆ. ಫ್ರಾನ್ಸ್‌ನಲ್ಲೂ ಮೋದಿ ಅವರು ಅನಿವಾಸಿ ಭಾರತೀಯರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಹಾಗೆಯೇ, ಭಾರತ ಹಾಗೂ ಫ್ರಾನ್ಸ್‌ ಕಂಪನಿಗಳ ಸಿಇಒಗಳು, ಫ್ರಾನ್ಸ್‌ನ ಪ್ರಮುಖ ಗಣ್ಯರ ಜತೆಗೂ ಮೋದಿ ಚರ್ಚೆ, ಸಂವಾದ ನಡೆಸಲಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: Rafale Fighter Jet: 90 ಸಾವಿರ ಕೋಟಿ ರೂ.ಗೆ ಯುದ್ಧವಿಮಾನ ಖರೀದಿ! ಭಾರತ-ಫ್ರಾನ್ಸ್ ನಡುವೆ ‘ರಫೇಲ್’ ಡೀಲ್

ಅಬುಧಾಬಿ ಪ್ರವಾಸ

ಜುಲೈ 15ರಂದು ಅಬುಧಾಬಿ ಪ್ರವಾಸ ಕೈಗೊಳ್ಳಲಿರುವ ಅವರು, ಯುಎಇ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್‌ ಅವರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಯುಎಇ ಜತೆಗಿನ ಭಾರತದ ಸಂಬಂಧ ವೃದ್ಧಿ, ರಕ್ಷಣೆ, ವ್ಯಾಪಾರ, ಆಹಾರ ಸೇರಿ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಅದರಲ್ಲೂ, ಫ್ರಾನ್ಸ್‌ ಭೇಟಿ ವೇಳೆ 90 ಸಾವಿರ ಕೋಟಿ ರೂಪಾಯಿ ಮೌಲ್ಯದ 26 ರಫೇಲ್‌ ಮರಿನ್‌ ಯುದ್ಧವಿಮಾನಗಳು ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುವುದು ಪ್ರಮುಖವಾಗಿದೆ.

Exit mobile version