Site icon Vistara News

PM Modi US Visit: ಮೋದಿ ಸುದ್ದಿಗೋಷ್ಠಿಗೆ ಕೂಡಿಬಂತು ಕಾಲ; ಎಷ್ಟು ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಗೊತ್ತಾ?

Modi To Address Press Conference In US

PM Modi Will Address A Press Conference In US, Will Answer 2 questions only

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿ, ಅವರು ಸುದ್ದಿಗೋಷ್ಠಿ ನಡೆಸುವುದಿಲ್ಲ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ, ಅವರಿಗೆ ಪತ್ರಕರ್ತರನ್ನು ಕಂಡರೆ ಭಯ, ಅವರಿಗೆ ಸಂವಾದದಲ್ಲಿ ನಂಬಿಕೆ ಇಲ್ಲ ಎಂದೆಲ್ಲ ಪ್ರತಿಪಕ್ಷಗಳ ನಾಯಕರು ಟೀಕಿಸುತ್ತಾರೆ. ಮೋದಿ ಅವರು ಕೂಡ, ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕಳೆದ ಒಂಬತ್ತು ವರ್ಷದಲ್ಲಿ ಒಮ್ಮೆಯೂ ಸುದ್ದಿಗೋಷ್ಠಿ ನಡೆಸಿಲ್ಲ, ಪತ್ರಕರ್ತರ ಪ್ರಶ್ನೆಗಳಿಗೆ ಮುಖಾಮುಖಿ ಆಗಿಲ್ಲ. ಆದರೆ, ಇದೇ ಮೊದಲ ಬಾರಿಗೆ ಮೋದಿ ಅವರು ಅಮೆರಿಕದಲ್ಲಿ (PM Modi US Visit) ಸುದ್ದಿಗೋಷ್ಠಿ ನಡೆಸಲಿದ್ದಾರೆ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.

ಹೌದು, ಜೋ ಬೈಡೆನ್‌ ಅವರ ಜತೆ ಮಾತುಕತೆ ಬಳಿಕ ಮೋದಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಪತ್ರಕರ್ತರು ಪ್ರಶ್ನೆಗಳನ್ನು ಕೂಡ ಕೇಳಬಹುದಾಗಿದೆ. ಆದರೆ, ಎರಡು ಪ್ರಶ್ನೆಗಳನ್ನು ಕೇಳಲು ಮಾತ್ರ ಅವಕಾಶವಿದೆ. ಈ ಕುರಿತು ಅಮೆರಿಕ ಶ್ವೇತಭವನವೇ ಪ್ರಕಟಣೆ ತಿಳಿಸಿದೆ. “ಮೋದಿ ಹಾಗೂ ಬೈಡೆನ್‌ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಪತ್ರಕರ್ತರು ಒಬ್ಬರಿಗೆ ಎರಡು ಪ್ರಶ್ನೆಗಳನ್ನು ಮಾತ್ರ ಕೇಳಬಹುದಾಗಿದೆ” ಎಂದು ಮಾಹಿತಿ ನೀಡಿದೆ.

ಒಂದೇ ಪ್ರಶ್ನೆಗೆ ಉತ್ತರಿಸಿದ್ದ ಮನಮೋಹನ್‌ ಸಿಂಗ್‌

ಡಾ.ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ 2009ರಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಆಗ ಕೂಡ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು. ಆದರೆ, ಮನಮೋಹನ್‌ ಸಿಂಗ್‌ ಅವರು ಆಗ ಒಂದೇ ಪ್ರಶ್ನೆಗೆ ಉತ್ತರಿಸಿದ್ದರು. ಒಟ್ಟಿನಲ್ಲಿ ಮೋದಿ ಅವರು ಪತ್ರಿಕಾಗೋಷ್ಠಿ ನಡೆಸುವುದಿಲ್ಲ ಎಂಬ ಟೀಕೆಗಳ ಮಧ್ಯೆಯೇ ಅವರು ಸಾಗರದಾಚೆ ಸುದ್ದಿಗೋಷ್ಠಿ ನಡೆಸಲ ಮುಂದಾಗಿದ್ದಾರೆ.

ಇದನ್ನೂ ಓದಿ: PM Modi US Visit: ಮೋದಿ ಅಮೆರಿಕ ಭೇಟಿಯಿಂದ ರಕ್ಷಣಾ ಕ್ಷೇತ್ರಕ್ಕೆ ಬಲ; ಸ್ಟ್ರೈಕರ್‌, M777 ಗನ್‌ ನೀಡಲು ಬೈಡೆನ್‌ ಆಫರ್

ರೇಂದ್ರ ಮೋದಿ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರನ್ನು ಭೇಟಿಯಾದರು. ಬೈಡೆನ್‌ ದಂಪತಿಯು ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಮೋದಿ ಅವರು ಬೈಡೆನ್‌ ಅವರಿಗೆ ವಿಶೇಷ ಉಡುಗೊರೆ ನೀಡಿದ್ದು, ಉಡುಗೊರೆಗೂ, ಮೈಸೂರಿಗೂ ನಂಟಿರುವುದು ಹೆಚ್ಚಿನ ಮಹತ್ವ ಪಡೆದಿದೆ.

ನರೇಂದ್ರ ಮೋದಿ ಅವರು ಬೈಡೆನ್‌ ಅವರಿಗೆ ವಿಶೇಷ ಪೆಟ್ಟಿಗೆಯೊಂದನ್ನು ಉಡುಗೊರೆ ನೀಡಿದ್ದಾರೆ. ಆ ಪೆಟ್ಟಿಗೆ ತಯಾರಿಸಲು ಕರ್ನಾಟಕದ ಮೈಸೂರಿನ ಗಂಧದ ಮರವನ್ನು ಬಳಸಿದ್ದು, ಜೈಪುರದಲ್ಲಿ ಇದನ್ನು ತಯಾರಿಸಲಾಗಿದೆ. ಪೆಟ್ಟಿಗೆಯಲ್ಲಿ ಪೂಜಾ ಸಾಮಗ್ರಿಗಳು, ಬೆಳ್ಳಿಯಲ್ಲಿ ತಯಾರಿಸಿದ ಗಣೇಶನ ಮೂರ್ತಿ ಹಾಗೂ ಕೋಲ್ಕೊತಾದಲ್ಲಿ ತಯಾರಿಸಿದ ಹಣತೆ, ತಾಮ್ರದ ಪತ್ರಗಳು ಇವೆ.

Exit mobile version