ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜಗತ್ತಿನ ಅತ್ಯಂತ ಜನಪ್ರಿಯ ನಾಯಕನೆಂಬ ಖ್ಯಾತಿ ಮುಂದುವರಿದಿದೆ(Most Popular Global Leader). ಅಮೆರಿಕದ ಸಮೀಕ್ಷಾ ಕನ್ಸಲ್ಟನ್ಸಿ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ (Morning Consult) ಪ್ರಕಾರ, ಶೇ.76 ಅನುಮೋದನೆಯೊಂದಿಗೆ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಲ್ಲಿ ಅಗ್ರಗಣ್ಯರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಂತರದಲ್ಲಿ ಶೇ.66 ಅನುಮೋದನೆಯೊಂದಿಗೆ ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್, ಶೇ.58ರ ಅನುಮೋದನೆಯೊಂದಿಗೆ ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸ್ ಹಾಗೂ ಶೇ.49 ಅನುಮೋದನೆಯೊಂದಿಗೆ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಇದ್ದಾರೆ.
NEW: Global Leader Approval: *Among all adults
— Morning Consult (@MorningConsult) December 8, 2023
Modi: 76%
López Obrador: 66%
Lula da Silva: 49%
Albanese: 47%
Meloni: 41%
Biden: 37%
Sánchez: 37%
Trudeau: 31%
Sunak: 25%
Macron: 24%
Scholz: 21%
*Updated 12/7/23https://t.co/Qxc6HbLPz4 pic.twitter.com/IK0niZPdso
ಈ ನಾಯಕರ ಜತೆಗೆ, ಆಸ್ಟ್ರೇಲಿಯಾ ಪ್ರಧಾನಿ ಆಂಟನಿ ಅಲ್ಬೇನೀಸ್(ಶೇ.47), ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ(ಶೇ.41), ಅಮೆರಿಕ ಅಧ್ಯಕ್ಷ ಜೋ ಬೈಡೆನ್ (ಶೇ.37), ಸ್ಪಾನಿಷ್ ಪ್ರಧಾನಿ ಸ್ಯಾಂಚೆಜ್ (ಶೇ.37), ಕೆನಡಾ ಪ್ರಧಾನಿ ಜಸ್ಟಿ ಟ್ರುಡೋ(ಶೇ.31), ಬ್ರಿಟನ್ ಪ್ರಧಾನಿ ರಿಷಿ ಸುನಕ್(ಶೇ.25), ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್(ಶೇ.24) ಮತ್ತು ಜರ್ಮನಿ ಚಾನ್ಸಲರ್ ಸ್ಕೂಲ್ಜ್ ಶೇ.21 ಅನುಮೋದನೆಯೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ.
3 ತಿಂಗಳ ಹಿಂದೆ ನಡೆಸಿದ ಸಮೀಕ್ಷೆಯಲ್ಲೂ ಮೋದಿ ನಂ.1
ಮೂರು ತಿಂಗಳ ಹಿಂದೆ ನಡೆದ ಸಮೀಕ್ಷೆಯಲ್ಲೂ ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ (most popular global leader) ಭಾರತದ ಪ್ರಧಾನಿ ನರೇಂದ್ರ ಮೋದಿ (Indian Prime Minister Narendra Modi) ಅವರು ತಮ್ಮ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರು. ಮಾರ್ನಿಂಗ್ ಕನ್ಸಲ್ಟ್ (Morning Consult Survey) ನಡೆಸಿದ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರ ಅನುಮೋದನೆ ರೇಟಿಂಗ್ ಪಟ್ಟಿಯಲ್ಲಿ ಶೇ.76ರೊಂದಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಶೇ.18 ಜನರು ಮೋದಿ ಅವರ ಜಾಗತಿಕ ನಾಯಕತ್ವಕ್ಕೆ ಮನ್ನಣೆ ನೀಡಿಲ್ಲ ಮತ್ತು ಶೇ.6 ಜನರು ಯಾವುದೇ ಅಭಿಪ್ರಾಯವನ್ನು ನೀಡಿರಲಿಲ್ಲ ಎಂದು ಸಮೀಕ್ಷೆ ಕೈಗೊಂಡ ಅಮೆರಿಕ ಮೂಲದ ಕನ್ಸಲ್ಟನ್ಸಿ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಹೇಳಿದೆ. ನರೇಂದ್ರ ಮೋದಿ ಅವರ ನಂತರದ ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಅಧ್ಯಕ್ಷರಿದ್ದಾರೆ(Brazil President).
ಸೆಪ್ಟೆಂಬರ್‌ನಲ್ಲಿ ಆರಂಭದಲ್ಲಿ ದಿಲ್ಲಿಯಲ್ಲಿ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಮೋದಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ ಅವರು 64 ಶೇಕಡಾ ಅನುಮೋದನೆ ಮತ್ತು ಮೆಕ್ಸಿಕೊದ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು 61 ಶೇಕಡಾ ಅನುಮೋದನೆ ರೇಟಿಂಗ್ ಹೊಂದಿದ್ದಾರೆ. ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಅತಿ ಹೆಚ್ಚು ಅನುಮೋದನೆ ಪ್ರಮಾಣದೊಂದಿಗೆ ಪ್ರಥಮ ಸ್ಥಾನದಲ್ಲೇ ಇದ್ದರು.
ಈ ಸುದ್ದಿಯನ್ನೂ ಓದಿ: PM Narendra Modi: ವಿಶ್ವದ ಜನಪ್ರಿಯ ನಾಯಕ ಪ್ರಧಾನಿ ಮೋದಿಯ ನಂ.1 ಸ್ಥಾನ ಅಬಾಧಿತ!