ನವದೆಹಲಿ: ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜಗತ್ತಿನ ಹಲವು ರಾಷ್ಟ್ರಗಳಿಗೆ ‘ವ್ಯಾಕ್ಸಿನ್ ಮೈತ್ರಿ’ ಯೋಜನೆ ಅಡಿಯಲ್ಲಿ ಕೊರೊನಾ ನಿರೋಧಕ ಲಸಿಕೆ ನೀಡಿದ ಮಾದರಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿಗೇ ಸಂಕಷ್ಟದ ಸಂದರ್ಭದಲ್ಲಿ ಔಷಧೀಯ ನೆರವು ನೀಡುವ ದಿಸೆಯಲ್ಲಿ ‘ಆರೋಗ್ಯ ಮೈತ್ರಿ’ (Arogya Maitri) ಯೋಜನೆ (Voice of Global South Summit) ಘೋಷಿಸಿದ್ದಾರೆ.
‘ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮಿಟ್’ ಸಮಾರೋಪ ಸಮಾರಂಭದಲ್ಲಿ ಜಗತ್ತಿನ ಹಲವು ಸಚಿವರು, ನಾಯಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ಜಗತ್ತಿನ ರಾಷ್ಟ್ರಗಳ ಹಿತದೃಷ್ಟಿಯಿಂದಾಗಿ ಆರೋಗ್ಯ ಮೈತ್ರಿ ಯೋಜನೆ ಘೋಷಿಸುತ್ತಿದ್ದೇನೆ. ಅಭಿವೃದ್ಧಿಶೀಲ ರಾಷ್ಟ್ರವು ಪ್ರಕೃತಿ ವಿಕೋಪ ಸೇರಿ ಯಾವುದೇ ದುರಂತಕ್ಕೆ ತುತ್ತಾದರೆ, ಭಾರತವು ಈ ಯೋಜನೆ ಅಡಿಯಲ್ಲಿ ಔಷಧ ನೆರವು ನೀಡುತ್ತದೆ” ಎಂದು ತಿಳಿಸಿದರು.
ಭಾರತದ ನೇತೃತ್ವದಲ್ಲಿ ಸಭೆ ನಡೆದಿದ್ದು, 20 ದೇಶಗಳ ಸಚಿವರು, ನಾಯಕರು ಭಾಗಿಯಾಗಿದ್ದಾರೆ. ಇದೇ ವೇಳೆ, ಮತ್ತೆರಡು ಯೋಜನೆಗಳನ್ನೂ ಮೋದಿ ಘೋಷಿಸಿದರು. ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಅಣ್ವಸ್ತ್ರದ ಕುರಿತು ತಜ್ಞರ ಮಾಹಿತಿ ವಿನಿಮಯದ ದಿಸೆಯಲ್ಲಿ ಗ್ಲೋಬಲ್ ಸೌತ್ ಸೈನ್ಸ್ ಹಾಗೂ ಟೆಕ್ನಾಲಜಿ ಇನಿಶಿಯೇಟಿವ್ ಎಂಬ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ | National Youth Festival : ಮೋದಿಗೆ ನೀಡಿದ ವಿಶೇಷ ಮೂರು ಉಡುಗೊರೆಗಳಿವು; ಬಹಳ ಹೊತ್ತು ಏಲಕ್ಕಿ ಪೇಟ ಧರಿಸಿಯೇ ಕುಳಿತಿದ್ದ ಪ್ರಧಾನಿ