Site icon Vistara News

PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

PM Narendra Modi

ತಮಿಳುನಾಡು: ಲೋಕಸಭೆ ಚುನಾವಣೆ(Lok Sabha Election 2024)ಯ ಕೊನೆಯ ಹಂತ ಮತದಾನದ ಬಹಿರಂಗ ಪ್ರಚಾರ ಕೊನೆಗೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ವಾಡಿಕೆಯಂತೆ ಪ್ರಯಾಣವನ್ನು ಕೈಗೊಂಡಿದ್ದು, ನಿನ್ನೆ ಸಂಜೆಯಿಂದಲೇ ಕನ್ಯಾಕುಮಾರಿ(Kanyakumari)ಯ ವಿವೇಕಾನಂದ ಕಲ್ಲಿನ ಸ್ಮಾರಕ(Vivekananda Rock Memorial)ದಲ್ಲಿ ಧ್ಯಾನ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಕನ್ಯಾಕುಮಾರಿಗೆ ಬಂದಿಳಿಯುತ್ತಿದ್ದಂತೆ ಅವರ ಹಳೆಯ ಫೊಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 1991ರಲ್ಲಿ ನರೇಂದ್ರ ಮೋದಿ, ಅಂದಿನ ಬಿಜೆಪಿ ನಾಯಕ ಮುರಳಿ ಮನೋಹರ್‌ ಜೋಷಿ(MM Joshi) ಕನ್ಯಾಕುಮಾರಿಗೆ ಭೇಟಿ ನೀಡಿದ್ದ ಫೋಟೋ ವೈರಲ್‌ ಆಗಿದೆ.

ಈ 33 ವರ್ಷ ಹಳೆಯದಾದ ಈ ಅದ್ಭುತ ಚಿತ್ರಕ್ಕೆ ನೆಟ್ಟಿಗರಿಂದ ನಾನಾ ರೀತಿಯ ಕಮೆಂಟ್‌ಗಳು ಬಂದಿವೆ. ಡಿ. 11, 1991 ರಂದು ಬಿಜೆಪಿ ಕೈಗೊಂಡಿದ್ದ ಏಕತಾ ಯಾತ್ರೆ ಕನ್ಯಾಕುಮಾರಿಯಿಂದ ಶುರುವಾಗಿ ಕಾಶ್ಮೀರದಲ್ಲಿ ಮುಕ್ತಾಗೊಂಡಿತ್ತು. ಈ ಯಾತ್ರೆಯಲ್ಲಿ ನರೇಂದ್ರ ಮೋದಿ, ಮುರಳಿ ಮನೋಹರ್‌ ಜೋಷಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವಿವೇಕಾನಂದ ಪ್ರತಿಮೆ ಎದುರು ನಿಂತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

ಏನಿದು ಏಕತಾ ಯಾತ್ರೆ?

ಭಯೋತ್ಪಾದನೆ ವಿರುದ್ಧ ಭಾರತ ಬಲಿಷ್ಟವಾಗಿ ನಿಂತಿದೆ ಎಂಬ ಸಂದೇಶವನ್ನು ಪ್ರಪಂಚಕ್ಕೆ ಸಾರುವ ಉದ್ದೇಶದಿಂದ ಬಿಜೆಪಿ ಡಿ. 11, 1991 ರಂದು ಏಕತಾ ಯಾತ್ರೆಯನ್ನು ಆರಂಭಿಸಿತ್ತು. ಈ ಯಾತ್ರೆ ಜ. 26, 1992ರಂದು ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸಮಾಪ್ತಿಯಾಗಿತ್ತು. ಈ ಯಾತ್ರೆಯೂ ಸುಮಾರು 14 ರಾಜ್ಯಗಳಲ್ಲಿ ಸಾಗಿ, ಜನರಲ್ಲಿ ಜಾಗೃತಿ ಮೂಡಿಸಿತ್ತು.

ನಿಗದಿತ ವೇಳಾಪಟ್ಟಿಯ ಪ್ರಕಾರ, ಪ್ರಧಾನಿ ಮೋದಿ ಮೇ 30 ರ ಸಂಜೆಯಿಂದ ಜೂನ್ 1 ರ ಸಂಜೆಯವರೆಗೆ ಧ್ಯಾನ ಮಾಡಲಿದ್ದಾರೆ. ಈ ಎರಡು ದಿನ ಪ್ರವಾಸಿಗರಿಗೆ ಬೀಚ್‌ಗೆ ಹೋಗಲು ಅವಕಾಶವಿಲ್ಲ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಗುರುವಾರದಿಂದ ಶನಿವಾರದವರೆಗೆ ಪ್ರವಾಸಿಗರಿಗೆ ಬೀಚ್ ಮುಚ್ಚಲಾಗುತ್ತದೆ. ಖಾಸಗಿ ದೋಣಿಗಳಿಗೆ ಅಲ್ಲಿಗೆ ಹೋಗಲು ಅನುಮತಿ ಇಲ್ಲ.

ಇದನ್ನೂ ಓದಿ:Prajwal Revanna Case: ಮೇ 31ರಂದೇ ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರಲು ಕಾರಣವೇನು? ಇಲ್ಲಿದೆ ಇಂಟರೆಸ್ಟಿಂಗ್‌ ಸ್ಟೋರಿ

Exit mobile version