Site icon Vistara News

Narendra Modi: ನರೇಂದ್ರ ಮೋದಿಗೆ ಎಕ್ಸ್‌ ಜಾಲತಾಣದಲ್ಲಿ 10 ಕೋಟಿ ಫಾಲೋವರ್ಸ್;‌ ಜಗತ್ತಿನಲ್ಲೇ ನಂಬರ್‌ 1!

Narendra Modi

PM Narendra Modi becomes most followed global leader on X with 100 million followers

ನವದೆಹಲಿ: ಭಾರತದಲ್ಲಿ ಜನಪ್ರಿಯ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಾಗತಿಕವಾಗಿಯೂ ಖ್ಯಾತಿ ಹೊಂದಿದ್ದಾರೆ. ಅದರಲ್ಲೂ, ನರೇಂದ್ರ ಮೋದಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಫಾಲೋವರ್‌ಗಳನ್ನು ಹೊಂದಿದ್ದಾರೆ. ಹೀಗೆ, ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್‌ಗಳನ್ನು ಹೊಂದುವಲ್ಲಿ ಮೋದಿ ಅವರು ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಎಕ್ಸ್‌ (ಮೊದಲು Twitter) ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಅವರ ಫಾಲೋವರ್‌ಗಳ (Modi Followers On X) ಸಂಖ್ಯೆ 100 ದಶಲಕ್ಷ ದಾಟಿದ್ದು (10 ಕೋಟಿ), ಜಗತ್ತಿನಲ್ಲೇ ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ನಾಯಕ ಎನಿಸಿದ್ದಾರೆ.

ಹೌದು, ನರೇಂದ್ರ ಮೋದಿ ಅವರೀಗ ಜಗತ್ತಿನಲ್ಲೇ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ನಾಯಕ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಮೋದಿ ನಂತರದ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ 3.81 ಕೋಟಿ, ದುಬೈನ ಶೇಖ್‌ ಮೊಹಮ್ಮದ್ 1.12 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇನ್ನು ಪೋಪ್‌ ಫ್ರಾನ್ಸಿಸ್‌ ಅವರು 1.85 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ. ಜಗತ್ತಿನ ಯಾವುದೇ ದೇಶದ ಪ್ರಧಾನಿ ಅಥವಾ ಅಧ್ಯಕ್ಷರು ಜಾಗತಿಕವಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್‌ಗಳಿಗಿಂತ ಮೋದಿ ಅವರು ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ.

ಭಾರತೀಯ ನಾಯಕರ ಫಾಲೋವರ್‌ಗಳು

ಜನಪ್ರಿಯತೆಯಲ್ಲೂ ಪ್ರಥಮ

ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಯಲ್ಲಿಯೂ ಪ್ರಧಾನಿ ಮೋದಿ ಅವರು ನಂಬರ್‌ 1 ಆಗಿದ್ದಾರೆ. ಜನಪ್ರಿಯತೆಯ ಸಮೀಕ್ಷೆ ನಡೆಸಿ ಪಟ್ಟಿ ಮಾಡುವ ಸಂಸ್ಥೆ ಇಪ್ಸೋಸ್ ಇಂಡಿಯಾಬಸ್ (Ipsos IndiaBus) ಪ್ರಕಾರ, ಪ್ರಧಾನಿ ಮೋದಿ ಫೆಬ್ರವರಿ 2024ರಲ್ಲಿ ಶೇಕಡಾ 75ರಷ್ಟು ಅನುಮೋದನೆ ರೇಟಿಂಗ್ ಅನ್ನು ಸಾಧಿಸಿದ್ದಾರೆ. ಸೆಪ್ಟೆಂಬರ್ 2023ರಲ್ಲಿ ಬಿಡುಗಡೆಯಾದ ಡೇಟಾದಲ್ಲಿ, ಪಿಎಂ ಮೋದಿ 65 ಪ್ರತಿಶತದಷ್ಟು ರೇಟಿಂಗ್ ಪಡೆದಿದ್ದರು. ಈ ಬಾರಿ ಅವರ ಅನುಮೋದನೆ ರೇಟಿಂಗ್ ಶೇಕಡಾ 10ರಷ್ಟು ಹೆಚ್ಚಾಗಿದೆ.

ಡಿಸೆಂಬರ್ 2022ರಿಂದ ಪಿಎಂ ಮೋದಿಯವರ ಅನುಮೋದನೆ ರೇಟಿಂಗ್ ಹೆಚ್ಚಾಗಿದೆ. 2022ರ ಡಿಸೆಂಬರ್‌ನಲ್ಲಿ ಪ್ರಧಾನಿಯ ರೇಟಿಂಗ್ ಶೇಕಡಾ 60ರಷ್ಟಿತ್ತು . ಫೆಬ್ರವರಿ 2023ರಲ್ಲಿ ರೇಟಿಂಗ್ ಶೇಕಡಾ 67ರಷ್ಟಿತ್ತು. ಸೆಪ್ಟೆಂಬರ್ 2023ರಲ್ಲಿ ಎರಡು ಪ್ರತಿಶತದಷ್ಟು ಕುಸಿದಿದೆ ಮತ್ತು 65 ಪ್ರತಿಶತದಷ್ಟು ರೇಟಿಂಗ್ ಪಡೆದಿದೆ. ಈಗ ಫೆಬ್ರವರಿ 2024ರಲ್ಲಿ ಮೋದಿ ರೇಟಿಂಗ್ ಮತ್ತೆ ಹೆಚ್ಚಾ ಗಿದೆ.

ಇದನ್ನೂ ಓದಿ: Narendra Modi: ಅನಂತ್‌ ಅಂಬಾನಿ ಮದುವೆಯಲ್ಲಿ ಮೋದಿ ಭಾಗಿ; ನೂತನ ದಂಪತಿಗೆ ಆಶೀರ್ವಾದ; Video ಇದೆ

Exit mobile version