Site icon Vistara News

Modi Egypt Visit: ಮೋದಿಗೆ ಈಜಿಪ್ಟ್‌ ಅತ್ಯುನ್ನತ ಪ್ರಶಸ್ತಿ; ಪ್ರಧಾನಿಯಾದ ಬಳಿಕ ಸಿಕ್ಕ ಜಾಗತಿಕ ಪ್ರಶಸ್ತಿಗಳೆಷ್ಟು?

Egypt Award For Narendra Modi

PM Narendra Modi conferred with 13 internationl awards since 2014, Here is the list

ನವದೆಹಲಿ/ಕೈರೋ: ಕೈರೋದಲ್ಲಿ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಅಲ್‌-ಸಿಸಿ (Abdel Fattah al-Sisi) ಅವರು ತಮ್ಮ ರಾಷ್ಟ್ರದ ಅತ್ಯುನ್ನತ ನರೇಂದ್ರ ಮೋದಿ ಅವರಿಗೆ ಆರ್ಡರ್‌ ಆಫ್‌ ದಿ ನೈಲ್‌ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈಜಿಪ್ಟ್‌ ಮಾತ್ರವಲ್ಲ ಜಗತ್ತಿನ ಹತ್ತಾರು ರಾಷ್ಟ್ರಗಳು ಮೋದಿ ಅವರಿಗೆ ತಮ್ಮ ರಾಷ್ಟ್ರಗಳ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ. ಹಾಗಾದರೆ, 2014ರ ಬಳಿಕ ಮೋದಿ ಅವರಿಗೆ ಸಿಕ್ಕ ಜಾಗತಿಕ ಪ್ರಶಸ್ತಿಗಳು ಯಾವವು? ಯಾವ ರಾಷ್ಟ್ರ ಯಾವ ಪ್ರಶಸ್ತಿ ನೀಡಿದೆ ಎಂಬುದರ ಪಟ್ಟಿ ಇಲ್ಲಿದೆ.

ಮೋದಿಗೆ ಸಿಕ್ಕ ಅಂತಾರಾಷ್ಟ್ರೀಯ ಪ್ರಶಸ್ತಿಗಳು

  1. ಕಂಪ್ಯಾನಿಯನ್‌ ಆಫ್‌ ದಿ ಆರ್ಡರ್‌ ಆಫ್‌ ಲೊಗೊಹು: ಪಪುವಾ ನ್ಯೂಗಿನಿಯಾ ದೇಶವು 2023ರ ಮೇ ತಿಂಗಳಲ್ಲಿ ಅತ್ಯುನ್ನತ ನಾಗರಿ ಪ್ರಶಸ್ತಿ ನೀಡಿ ಗೌರವಿಸಿದೆ.
  2. ಕಂಪ್ಯಾನಿಯನ್‌ ಆಫ್‌ ದಿ ಆರ್ಡರ್‌ ಆಫ್‌ ಫಿಜಿ: ಮೋದಿ ಅವರು 2023ರ ಮೇ ತಿಂಗಳಲ್ಲಿ ಫಿಜಿಗೆ ತೆರಳಿದಾಗ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿದೆ.
  3. ಎಬಾಕ್ಲ್‌ ಅವಾರ್ಡ್‌: ಭಾರತದ ಪ್ರಧಾನಿಯು 2023ರ ಮೇ ತಿಂಗಳಲ್ಲಿ ಪಪುವಾ ನ್ಯೂಗಿನಿಯಾಗೆ ತೆರಳಿದ್ದಾಗ ರಿಪಬ್ಲಿಕ್‌ ಆಫ್‌ ಪಲೌ ದೇಶದಿಂದ ಗೌರವ.
  4. ಆರ್ಡರ್‌ ಆಫ್‌ ದಿ ಡ್ರಕ್‌ ಗ್ಯಾಲ್ಪೊ: 2021ರ ಡಿಸೆಂಬರ್‌ನಲ್ಲಿ ಭೂತಾನ್‌ ದೇಶವು ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ ಮಾಡಿದೆ.
  5. ಲಿಜನ್‌ ಆಫ್‌ ಮೆರಿಟ್‌: ಮೋದಿ ಅವರಿಗೆ 2020ರಲ್ಲಿ ಅಮೆರಿಕ ಪ್ರದಾನ ಮಾಡಿದ ಪ್ರಶಸ್ತಿ
  6. ಕಿಂಗ್‌ ಹಮಾದ್‌ ಆರ್ಡರ್‌ ಆಫ್‌ ದಿ ರೆನೈಸನ್ಸ್:‌ ಬಹ್ರೈನ್‌ ದೇಶವು 2019ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
  7. ಆರ್ಡರ್‌ ಆಫ್‌ ದಿ ಡಿಸ್ಟಿಂಗ್ವಿಶ್ಡ್‌ ರೂಲ್‌ ಆಫ್‌ ನಿಶಾನ್‌ ಇಜುದ್ದೀನ್‌: ಮಾಲ್ಡೀವ್ಸ್‌ ದೇಶವು 2019ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ ಮಾಡಿದೆ.
  8. ಆರ್ಡರ್‌ ಆಫ್‌ ಸೇಂಟ್‌ ಆ್ಯಂಡ್ರ್ಯೂ ಅವಾರ್ಡ್:‌ 2019ರಲ್ಲಿ ರಷ್ಯಾ ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
  9. ಆರ್ಡರ್‌ ಆಫ್‌ ಜಯೇದ್‌ ಅವಾರ್ಡ್:‌ ಯುಎಇ ದೇಶವು 2019ರಲ್ಲಿ ಪ್ರಶಸ್ತಿ ನೀಡಿದೆ.
  10. ಗ್ರ್ಯಾಂಡ್‌ ಕಾಲರ್‌ ಆಫ್‌ ದಿ ಸ್ಟೇಟ್‌ ಆಫ್‌ ಪ್ಯಾಲೆಸ್ತೀನ್‌ ಅವಾರ್ಡ್:‌ 2018ರಲ್ಲಿ ಪ್ಯಾಲೆಸ್ತೀನ್‌ ಸರ್ಕಾರವು ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದೆ.
  11. ಸ್ಟೇಟ್‌ ಆರ್ಡರ್‌ ಆಫ್‌ ಘಾಜಿ ಆಮಿರ್‌ ಅಮಾನುಲ್ಲಾ ಖಾನ್:‌ 2016ರಲ್ಲಿ ಅಫಗಾನಿಸ್ತಾನವು ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿದೆ.
  12. ಆರ್ಡರ್‌ ಆಫ್‌ ಅಬ್ದುಲಾಜಿಜ್‌ ಅಲ್‌ ಸೌದ್‌: ಸೌದಿ ಅರೇಬಿಯಾವು 2016ರಲ್ಲಿ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದೆ.
  13. ಆರ್ಡರ್‌ ಆಫ್‌ ದಿ ನೈಲ್‌ ಪ್ರಶಸ್ತಿ: ಈಜಿಪ್ಟ್‌ನಿಂದ ಅತ್ಯುನ್ನತ ಪ್ರಶಸ್ತಿ ಪ್ರದಾನ

ಇದನ್ನೂ ಓದಿ: Modi Egypt Visit: ಮೋದಿ ಜಾಣ ನಾಯಕತ್ವದ ಪ್ರತಿಬಿಂಬ; ಈಜಿಪ್ಟ್‌ ಗ್ರ್ಯಾಂಡ್‌ ಮುಫ್ತಿ ಶಾಕಿ ಇಬ್ರಾಹಿಂ ಬಣ್ಣನೆ

ಮೋದಿ ಅವರು ಪ್ರಶಸ್ತಿ ಸ್ವೀಕರಿಸುವ ಮೊದಲು ಈಜಿಪ್ಟ್‌ ಗ್ರ್ಯಾಂಡ್‌ ಮುಫ್ತಿ (ಈಜಿಪ್ಟ್‌ ಸರ್ಕಾರದ ಧಾರ್ಮಿಕ ಪ್ರತಿನಿಧಿ) ಶಾಕಿ ಇಬ್ರಾಹಿಂ ಅಬ್ದೆಲ್‌-ಕರೀಮ್‌ ಅಲ್ಲಂ ಜತೆಗೂ ಕೂಡ ಮೋದಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ಶಾಕಿ ಇಬ್ರಾಹಿಂ ಅಬ್ದೆಲ್‌-ಕರೀಮ್‌ ಅಲ್ಲಂ ಅವರು ಮೋದಿ ಅವರನ್ನು ಮೆಚ್ಚಿದ್ದಾರೆ. “ನರೇಂದ್ರ ಮೋದಿ ಅವರನ್ನು ಎರಡು ಬಾರಿ ಭೇಟಿ ಮಾಡಿದೆ. ಪ್ರತಿ ಬಾರಿ ಭೇಟಿಯಾದಾಗಲೂ ಮೋದಿ ಅವರಲ್ಲಿ ಅದ್ಭುತ ನಾಯಕತ್ವದ ಪ್ರತಿಬಿಂಬ ಕಾಣಿಸಿತು. ಮೋದಿ ಅವರು ಭಾರತದಲ್ಲಿ ಜಾಣ ನೀತಿಗಳ ಮೂಲಕ ದೇಶವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ಭಾರತದಂತಹ ಬೃಹತ್‌ ರಾಷ್ಟ್ರಕ್ಕೆ ಮೋದಿ ಉತ್ತಮ ನಾಯಕರಾಗಿದ್ದಾರೆ. ಇದೇ ಕಾರಣಕ್ಕೆ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ” ಎಂದು ಗ್ರ್ಯಾಂಡ್‌ ಮುಫ್ತಿ ವರ್ಣಿಸಿದ್ದಾರೆ.

Exit mobile version