ದೇಶ
Modi Egypt Visit: ಮೋದಿ ಜಾಣ ನಾಯಕತ್ವದ ಪ್ರತಿಬಿಂಬ; ಈಜಿಪ್ಟ್ ಗ್ರ್ಯಾಂಡ್ ಮುಫ್ತಿ ಶಾಕಿ ಇಬ್ರಾಹಿಂ ಬಣ್ಣನೆ
Modi Egypt Visit: ಈಜಿಪ್ಟ್ ಗ್ರ್ಯಾಂಡ್ ಮುಫ್ತಿ ಜತೆ ಮೋದಿ ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷೀಯ ಸಂಬಂಧ, ಒಪ್ಪಂದ ಸೇರಿ ಹಲವು ವಿಷಯಗಳ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಮೋದಿ ನಾಯಕತ್ವವನ್ನು ಗ್ರ್ಯಾಂಡ್ ಮುಫ್ತಿ ಮೆಚ್ಚಿದ್ದಾರೆ.
ಕೈರೋ: ಪ್ರಧಾನಿ ನರೇಂದ್ರ ಮೋದಿ ಅವರು ಯಾವ ದೇಶಕ್ಕೆ ತೆರಳಿದರೂ ಅದ್ಧೂರಿ ಸ್ವಾಗತ ದೊರೆಯುತ್ತದೆ. ಮೋದಿ ನಾಯಕತ್ವವನ್ನು ಆ ದೇಶದ ನಾಯಕರು ಮೆಚ್ಚುತ್ತಾರೆ. ಇದೇ ಕಾರಣಕ್ಕೆ, ಕೆಲವು ದಿನಗಳ ಹಿಂದಷ್ಟೇ ಮೋದಿ ಅವರು ಅಮೆರಿಕಕ್ಕೆ ತೆರಳಿದ್ದಾಗ ಅದ್ಭುತ ಆತಿಥ್ಯ ದೊರೆಯಿತು. ಈಗ ಈಜಿಪ್ಟ್ ಗ್ರ್ಯಾಂಡ್ ಮುಫ್ತಿ (ಈಜಿಪ್ಟ್ ಸರ್ಕಾರದ ಧಾರ್ಮಿಕ ಪ್ರತಿನಿಧಿ) ಶಾಕಿ ಇಬ್ರಾಹಿಂ ಅಬ್ದೆಲ್-ಕರೀಮ್ ಅಲ್ಲಂ (Shawki Ibrahim Abdel-Karim Allam) ಅವರು ಕೂಡ (Modi Egypt Visit) ಮೋದಿ ನಾಯಕತ್ವವನ್ನು ಬಣ್ಣಿಸಿದ್ದಾರೆ.
“ನರೇಂದ್ರ ಮೋದಿ ಅವರನ್ನು ಎರಡು ಬಾರಿ ಭೇಟಿ ಮಾಡಿದೆ. ಪ್ರತಿ ಬಾರಿ ಭೇಟಿಯಾದಾಗಲೂ ಮೋದಿ ಅವರಲ್ಲಿ ಅದ್ಭುತ ನಾಯಕತ್ವದ ಪ್ರತಿಬಿಂಬ ಕಾಣಿಸಿತು. ಮೋದಿ ಅವರು ಭಾರತದಲ್ಲಿ ಜಾಣ ನೀತಿಗಳ ಮೂಲಕ ದೇಶವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ಭಾರತದಂತಹ ಬೃಹತ್ ರಾಷ್ಟ್ರಕ್ಕೆ ಮೋದಿ ಉತ್ತಮ ನಾಯಕರಾಗಿದ್ದಾರೆ. ಇದೇ ಕಾರಣಕ್ಕೆ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ” ಎಂದು ಗ್ರ್ಯಾಂಡ್ ಮುಫ್ತಿ ವರ್ಣಿಸಿದ್ದಾರೆ.
ಗ್ರ್ಯಾಂಡ್ ಮುಫ್ತಿ ಭೇಟಿ ಕುರಿತು ಮೋದಿ ಟ್ವೀಟ್
Honoured to have met the Grand Mufti of Egypt, His Eminence Prof. Shawky Ibrahim Allam. Had enriching discussions on India-Egypt ties, notably cultural and people-to-people linkages. pic.twitter.com/GMx4FCx2E0
— Narendra Modi (@narendramodi) June 24, 2023
“ಮೋದಿ ಅವರು ಭಾರತದಲ್ಲಿ ಉತ್ತಮ ನೀತಿಗಳನ್ನು ಜಾರಿಗೆ ತಂದಿದ್ದಾರೆ. ಭಾರತವನ್ನು ಹಲವು ಸ್ತರಗಳಲ್ಲಿ ಅವರು ಅಭಿವೃದ್ಧಿಗೊಳಿಸುತ್ತಿದ್ದಾರೆ. ಈಜಿಪ್ಟ್‌ಗೂ ಭಾರತದ ಸಹಕಾರ, ನೆರವು ಉತ್ತಮವಾಗಿದೆ. ಮೋದಿ ಅವರು ಧಾರ್ಮಿಕ ಸಹಕಾರವನ್ನೂ ನೀಡುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವು ಮತ್ತಷ್ಟು ವೃದ್ಧಿಯಾಗಲಿದೆ” ಎಂದು ಹೇಳಿದ್ದಾರೆ.
ಗ್ರ್ಯಾಂಡ್ ಮುಫ್ತಿ ಅವರನ್ನು ಭೇಟಿಯಾದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೂ ಮಾಹಿತಿ ನೀಡಿದ್ದಾರೆ. “ಈಜಿಪ್ಟ್ ಗ್ರ್ಯಾಂಡ್ ಮುಫ್ತಿ ಶಾಕಿ ಇಬ್ರಾಹಿಂ ಅಬ್ದೆಲ್-ಕರೀಮ್ ಅಲ್ಲಂ ಅವರನ್ನು ಭೇಟಿಯಾಗಿದ್ದು ಸಂತಸವಾಯಿತು. ಭಾರತ ಹಾಗೂ ಈಜಿಪ್ಟ್ ಸಂಬಂಧ ವೃದ್ಧಿ, ದ್ವಿಪಕ್ಷೀಯ ಒಪ್ಪಂದಗಳು, ಸಾಂಸ್ಕೃತಿಕ ಸಹಕಾರ ಸೇರಿ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚಿಸಲಾಯಿತು” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Modi Egypt Visit: ಈಜಿಪ್ಟ್‌ನಲ್ಲಿ ಸಾವಿರ ವರ್ಷ ಇತಿಹಾಸವಿರುವ ಮಸೀದಿಗೆ ಮೋದಿ ಭೇಟಿ, ಸೌಹಾರ್ದ ಸಂದೇಶ ರವಾನೆ
ಎರಡು ದಿನಗಳ ಈಜಿಪ್ಟ್ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರು ಭಾನುವಾರ ಕೈರೋದಲ್ಲಿರುವ ಐತಿಹಾಸಿಕ ಅಲ್-ಹಕೀಂ ಮಸೀದಿಗೂ ಭೇಟಿ ನೀಡಲಿದ್ದಾರೆ. ಈಗಾಗಲೇ ಅನಿವಾಸಿ ಭಾರತೀಯರು ಹಾಗೂ ಈಜಿಪ್ಟ್‌ನ ದಾವೂದಿ ಬೋಹ್ರಾ ಮುಸ್ಲಿಮರನ್ನು ಭೇಟಿ ಮಾಡಿದ್ದಾರೆ. ಹಾಗೆಯೇ, “ಮೋದಿ ಭಾರತದ ಹೀರೊ” ಎಂದು ಅನಿವಾಸಿ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶ
India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ
India Canada Row: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ.
ಟೊರೊಂಟೊ, ಕೆನಡಾ: ಸದ್ಯ ಕೆನಡಾವು ಭಾರತದೊಂದಿಗೆ (Canada and India Relations) ಅತ್ಯಂತ ಸವಾಲಿನ ಸಮಯವನ್ನು ಎದುರಿಸುತ್ತಿದೆ. ಹಾಗಿದ್ದೂ, ರಚನಾತ್ಮಕ ಸಂಬಂಧವನ್ನು (Constructive Relations) ಮುಂದುರಿಸುತ್ತಿರುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ (Canada PM Justin Trudeau) ಅವರು ಮಂಗಳವಾರ ಹೇಳಿದ್ದಾರೆ. ಖಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಟ್ರೂಡೊ ಅವರ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ(India Canada Row).
ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು, ಭಾರತದಲ್ಲಿ ಕೆನಾಡ ರಾಜತಾಂತ್ರಿಕರನ್ನು ಹೊಂದಿರುವುದು ಮಹತ್ವದ್ದಾಗಿದೆ ಎಂದು ಹೇಳಿದರು. ದಿಲ್ಲಿಯ ಕೆನಡಾ ರಾಜತಾಂತ್ರಿಕ ಕಚೇರಿಯಲ್ಲಿರುವ 62 ಸಿಬ್ಬಂದಿಯ ಪೈಕಿ 41 ಜನರನ್ನು ವಾಪಸ್ ಕೆನಡಾಗೆ ಕರೆಯಿಸಿಕೊಳ್ಳುವಂತೆ ಭಾರತ ಸರ್ಕಾರವು ಹೇಳಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಟ್ರೂಡೋ ಅವರು ಹೇಳಿಕೆಯನ್ನು ನೀಡಿದ್ದಾರೆ.
ನಿಸ್ಸಂಶಯವಾಗಿ, ನಾವು ಇದೀಗ ಭಾರತದೊಂದಿಗೆ ಅತ್ಯಂತ ಸವಾಲಿನ ಸಮಯವನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ ಪ್ರಧಾನಿ ಟ್ರೂಡೋ ಅವರು, ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆ ಮಾಡುವಂತೆ ದಿಲ್ಲಿ ಹೇಳಿದೆ ಎಂಬ ಮಾಧ್ಯಮ ವರದಿಯ ಬಗ್ಗೆ ಯಾವುದೇ ಟಿಪ್ಪಣಿಯನ್ನು ಅವರು ಮಾಡಲಿಲ್ಲ.
ಈ ಸುದ್ದಿಯನ್ನೂ ಓದಿ: India Canada Row: ʼಇಷ್ಟು ರಾಜತಾಂತ್ರಿಕರು ಇಲ್ಲಿ ಬೇಕಿಲ್ಲ, ವಾಪಸ್ ಕರೆಸಿಕೊಳ್ಳಿ!ʼ ಕೆನಡಾಕ್ಕೆ ಮತ್ತೆ ಭಾರತ ತಪರಾಕಿ
ದಿಲ್ಲಿಯ ಕ್ರಮಕ್ಕೆ ಪ್ರತಿಯಾಗಿ ಕೆನಡಾ ಸರ್ಕಾರವು, ಭಾರತೀಯ ರಾಜತಾಂತ್ರಿಕರನ್ನು ಕಿತ್ತು ಹಾಕಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಾಗಲೇ ಹೇಳಿದಂತೆ ನಾವು ಸಮಸ್ಯೆಯನ್ನು ಹೆಚ್ಚಿಸಲು ಹೋಗುವುದಿಲ್ಲ. ಈ ಅತ್ಯಂತ ಕಷ್ಟದ ಸಮಯದಲ್ಲಿ ಭಾರತದೊಂದಿಗೆ ರಚನಾತ್ಮಕ ಸಂಬಂಧವನ್ನು ಮುಂದುವರಿಸುವಲ್ಲಿ ನಾವು ಮುಖ್ಯವಾದ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.
ಜೂನ್ 18ರಂದು ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಕಳೆದ ತಿಂಗಳು ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಭಾರತ ಮತ್ತು ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿತ್ತು. ಭಾರತವು ಟ್ರೂಡೋ ಆರೋಪಕ್ಕೆ ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತ ಆರೋಪ ಎಂದು ಹೇಳಿತ್ತು. ಅಲ್ಲದೇ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದವು.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
ಎನ್‌ಡಿಎಗೆ ಸೇರಿಸಿಕೊಳ್ಳಿ ಎಂದಿದ್ದ ಕೆಸಿಆರ್; ಮೋದಿ! ಬಿಜೆಪಿ ಜತೆ ಹೋಗಲು ನಮಗೇನು ಹುಚ್ಚು ನಾಯಿ ಕಚ್ಚಿದೆಯಾ; ಕೆಟಿಆರ್
PM Narendra Modi: 2020ರ ಡಿಸೆಂಬರ್‌ನಲ್ಲಿ ಕೆಸಿಆರ್ ಅವರು ಎನ್‌ಡಿಎ ಕೂಟಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಿಜಮಾಬಾದ್: ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣ (Telangana Assembly Election) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಭಾರತ್ ರಾಷ್ಟ್ರ ಸಮಿತಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ (CM KCR) ಅವರು 2020ರ ಡಿಸೆಂಬರ್‌ನಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ (NDA) ಸೇರುವ ಮನವಿ ಮಾಡಿಕೊಂಡಿದ್ದರು. ಆದರೆ, ನಾನು ಅವರ ಮನವಿಯನ್ನು ತಿರಸ್ಕರಿಸಿದೆ. ಎನ್‌ಡಿಎಗೆ ಬಿಆರ್‌ಎಸ್ (BRS) ಸೇರಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಈ ಮಧ್ಯೆ, ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೆಸಿಆರ್ ಅವರ ಪುತ್ರರೂ ಆಗಿರುವ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮ ರಾವ್ (KT Rama Rao) ಅವರು, ಎನ್‌ಡಿಎ ಸೇರಲು ನಮಗೇನೂ ಹುಚ್ಚು ನಾಯಿ ಕಚ್ಚಿಲ್ಲ (Mad Dog) ಎಂದು ತಿರುಗೇಟು ನೀಡಿದ್ದಾರೆ.
ನಿಜಮಾಬಾದ್‌ನ ಗಿರಿರಾಜ್ ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇವತ್ತು ಮಹತ್ವದ ರಹಸ್ಯವೊಂದನ್ನು ಬಿಚ್ಚಿಡುತ್ತೇನೆ ಎಂದು ಹೇಳಿದರು. 2020ರ ಡಿಸೆಂಬರ್ ನಡೆದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್ಎಂಸಿ) ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದಿತ್ತು ಮತ್ತು ಯಾವುದೇ ಪಕ್ಷವು ನಿಗಮವನ್ನು ವಶಪಡಿಸಿಕೊಳ್ಳಲು ಸಂಪೂರ್ಣ ಬಹುಮತವನ್ನು ಪಡೆದಿದಿರಲಿಲ್ಲ. ಆಗ ಚುನಾವಣೆ ಮುಗಿದ ಕೂಡಲೇ ಕೆಸಿಆರ್ ನಮ್ಮ ಬೆಂಬಲ ಪಡೆಯಲು ದೆಹಲಿಗೆ ಬಂದಿದ್ದರು ಎಂದು ಹೇಳಿದರು.
ಕೆಸಿಆರ್ ಅವರ ನನಗೆ ಹೂಗುಚ್ಛಗಳನ್ನು ಮತ್ತು ಶಾಲುಗಳನ್ನು ನೀಡಿ ಅಭಿನಂದಿಸಿದರು. ಅವರು ನನ್ನ ಮೇಲೆ ತುಂಬಾ ಪ್ರೀತಿಯನ್ನು ತೋರಿಸಿದರು, ವಾಸ್ತವದಲ್ಲಿ ಅದು ಅವರ ವ್ಯಕ್ತಿತ್ವಕ್ಕೆ ವಿರುದ್ಧವಾದ ನಡವಳಿಕೆಯಾಗಿತ್ತು. ನನ್ನ ನಾಯಕತ್ವದಲ್ಲಿ ದೇಶವು ತ್ವರಿತ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಅವರು ಹೇಳಿದರು. ನಂತರ, ಅವರ ಪಕ್ಷವೂ(ಬಿಆರ್‌ಎಸ್) ಎನ್‌ಡಿಎ ಭಾಗವಾಗಲು ಬಯಸಿದೆ ಎಂದು ಹೇಳಿದರು. ”ಸರ್, ದಯವಿಟ್ಟು ನಮ್ಮನ್ನು ಎನ್‌ಡಿಎಗೆ ತೆಗೆದುಕೊಳ್ಳಿ ಅಂದ್ರು. ನನಗೆ ಆಶ್ಚರ್ಯವಾಯಿತು ಮತ್ತು ಕಾರಣವನ್ನು ಕೇಳಿದೆ. ಜಿಎಚ್‌ಎಂಸಿಯಲ್ಲಿ ಬಿಜೆಪಿಯ ಬೆಂಬಲವನ್ನು ಬಯಸುವುದಾಗಿ ಅವರು ಹೇಳಿದರು” ಪ್ರಧಾನಿ ತಿಳಿಸಿದ್ದಾರೆ.
ಆದರೆ, ನಾನು ಕೆಸಿಆರ್ ಅವರ ಮನವಿಯನ್ನು ತಿರಸ್ಕರಿಸಿದೆ. ಭಾರತೀಯ ಜನತಾ ಪಾರ್ಟಿ ಎಂದಿಗೂ ಬಿಆರ್‌ಎಸ್‌ನೊಂದಿಗೆ ಕೈ ಜೋಡಿಸುವುದಿಲ್ಲ. ಬಿಜೆಪಿ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುವುದರಲ್ಲಿ ಹಿಂಜರಿಕೆ ಇಲ್ಲ. ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಕಿರುಕುಳವನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ನಾವು ತೆಲಂಗಾಣ ಜನರಿಗೆ ಮೋಸ ಮಾಡುವುದಿಲ್ಲ. ಆ 48 ಸ್ಥಾನಗಳೊಂದಿಗೆ ನಾವು ನಮ್ಮ ಪ್ರಯಾಣವನ್ನು ಮುಂದುವರಿಸುತ್ತೇವೆ. ಬಿಆರ್‌ಎಸ್‌ಗೆ ಎನ್‌ಡಿಎಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಮತ್ತು ನಾವು ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈ ಸುದ್ದಿಯನ್ನೂ ಓದಿ: PM Narendra Modi: ಸ್ವಾಮಿ ವಿವೇಕಾನಂದರು ತಂಗಿದ್ದ ಆಶ್ರಮದಲ್ಲಿ ಪ್ರಧಾನಿ ಮೋದಿ ವಾಸ್ತವ್ಯ!
ನಮಗೇನೂ ಹುಚ್ಚು ನಾಯಿ ಕಚ್ಚಿಲ್ಲ; ಕೆಟಿಆರ್
ಬಿಆರ್‌ಎಸ್ ಎನ್‌ಡಿಎ ಭಾಗವಾಗಲು ಮುಂದಾಗಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಅವರು, ಎನ್‌ಡಿಎ ಸೇರಲು ನಮಗೇನು ಹಚ್ಚು ನಾಯಿ ಕಚ್ಚಿದೆಯೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಅತಿ ದೊಡ್ಡ ಸುಳ್ಳಿನ ಪಕ್ಷ ಎಂದು ಹೇಳಿದ ಕೆಟಿಆರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಾಟ್ಸಾಪ್ ವಿಶ್ವವಿದ್ಯಾಲಯ ಕುಲಪತಿಯಾಗಿದ್ದಾರೆ. ಪ್ರಧಾನಿ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು.
ಇದಕ್ಕೂ ಮೊದಲು ಪ್ರದಾನಿ ನರೇಂದ್ರ ಮೋದಿ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಿಆರ್‌ಎಸ್ ಹಣ ನೀಡಿತ್ತು ಎಂದು ಹೇಳಿದ್ದರು. ಈ ವಿಷಯವನ್ನು ಪ್ರಸ್ತಾಪಿಸಿದ ಕೆಟಿಆರ್ ಅವರು, ಆ ಹೇಳಿಕೆಯಂತೆ ಕೆಸಿಆರ್ ಅವರು ಎನ್‌ಡಿಎ ಸೇರಲು ಮುಂದಾಗಿದ್ದರು ಎಂಬುದು ಸಂಪೂರ್ಣ ಸುಳ್ಳು ಎಂದು ಹೇಳಿದರು.
ಟಾಪ್ 10 ನ್ಯೂಸ್
VISTARA TOP 10 NEWS : ಜಾತಿ ಗಣತಿಗೆ ಮೋದಿ ವಿರೋಧ, ಶಿವಮೊಗ್ಗದಲ್ಲಿ ಪೊಲೀಸರಿಗೇ ಬೆದರಿಕೆ ಹಾಕಿದ್ದ ಕಿಡಿಗೇಡಿಗಳು ಮತ್ತಿತರ ದಿನದ ಪ್ರಮುಖ ಸುದ್ದಿಗಳು
VISTARA TOP 10 NEWS: ದೇಶ, ವಿದೇಶಗಳ ಸುದ್ದಿಗಳು, ದಿನವಿಡೀ ನಡೆದ ಪ್ರಮುಖ ಬೆಳವಣಿಗೆಗಳ ಸುತ್ತುನೋಟವೇ Vistara Top10 News
1. ಜಾತಿ ಗಣತಿಯಿಂದ ಹಿಂದೂಗಳಲ್ಲಿ ಒಡಕು ಮೂಡಿಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ
ಜಗದಲ್‌ಪುರ, ಛತ್ತೀಸ್‌ಗಢ: ಜಾತಿ ಗಣತಿಯ (caste census) ಮೂಲಕ ಕಾಂಗ್ರೆಸ್ ಪಕ್ಷವು (Congress Party) ಹಿಂದೂಗಳಲ್ಲಿ ಒಡಕು ಮೂಡಿಸುತ್ತಿದೆ (Dividing Hindus) ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ. ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ(Chhattisgarh Assembly Election) ನಡೆಯಲಿರುವ ಛತ್ತೀಸ್‌ಗಢ ಜಗದಲ್‌ಪುರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ಸಂಪನ್ಮೂಲಗಳ ಮೇಲಿನ ಹಕ್ಕನ್ನು ಬಡವರು ಹೊಂದಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ನಿನ್ನೆ ರಾಜಸ್ಥಾನದಲ್ಲಿ ಮಾತನಾಡಿದ್ದ ಪ್ರಧಾನಿ ಅವರು, ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಜಾತಿ ಗಣತಿಯ ಮೂಲಕ ಪ್ರತಿಪಕ್ಷಗಳು ದೇಶವನ್ನು ಒಡೆಯುವ ಸಂಚು ರೂಪಿಸಿವೆ ಎಂದು ಹೇಳಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಮೋದಿ ಅಸಮಾಧಾನದ ಮಧ್ಯೆ ರಾಜ್ಯದಲ್ಲಿ ಮಂಡನೆಯಾಗುತ್ತಾ ಜಾತಿಗಣತಿ ವರದಿ?
ಬೆಂಗಳೂರು: ಕಾಂತರಾಜು ನೇತೃತ್ವದ ಸಮಿತಿಯಿಂದ (Committee headed by Kantharaju) 2018ರಲ್ಲಿ ಸಿದ್ಧವಾಗಿರುವ ಜಾತಿಗಣತಿ ವರದಿಯು (Caste Census Report) ರಾಜ್ಯದಲ್ಲಿ ಜಾರಿಯಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಬಿಹಾರದಲ್ಲಿ ಈಗಾಗಲೇ ಜಾತಿಗಣತಿ ವರದಿಯನ್ನು ಅಂಗೀಕಾರ ಮಾಡಲಾಗಿದೆ. ಇದಕ್ಕೆ ವ್ಯಾಪಕ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಹ ವರದಿ ಬಗ್ಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Backward Classes Commission Chairman Jayaprakash Hegde) ಅವರು, ನವೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ನಡುವೆ ಕಾಂಗ್ರೆಸ್ ಹಿರಿಯ ಮುಖಂಡರಿಂದಲೇ ವರದಿ ಅಂಗೀಕಾರಕ್ಕೆ ಒತ್ತಡಗಳು ಕೇಳಿಬಂದಿವೆ. ಆದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಇದರ ಬಗ್ಗೆ ಜಾಣ್ಮೆಯ ಉತ್ತರವನ್ನು ನೀಡಿದ್ದು, ಮೊದಲು ತಮ್ಮ ಬಳಿ ವರದಿ ಬರಲಿ ಎಂದು ಹೇಳಿದ್ದಾರೆ. ಹಾಗಾದರೆ, ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಮಂಡನೆಯಾಗಲಿದೆಯೇ? ಅಥವಾ ರಾಜ್ಯ ಸರ್ಕಾರ ಸಬೂಬು ಹೇಳುತ್ತಾ ಮುಂದೂಡಲಿದೆಯೇ ಎಂಬ ಕುತೂಹಲ ಮೂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ನಾವು ಎಂಥಾ ನನ್ಮಕ್ಕಳು ಗೊತ್ತಲ್ವ? ; ಇನ್ಸ್‌ಪೆಕ್ಟರ್‌ಗೇ ಆವಾಜ್ ಹಾಕಿದ ಖತರ್ನಾಕ್ ಖಲೀಂ
ಶಿವಮೊಗ್ಗ: ಭಾನುವಾರ ಈದ್ ಮಿಲಾದ್ ಮೆರವಣಿಗೆಯ (Eid Milad Procession) ವೇಳೆ ಉಂಟಾದ ಗಲಭೆಯ (Shivamogga Violence) ಸಂದರ್ಭದಲ್ಲಿ ಕೆಲವೊಂದು ಮುಸ್ಲಿಂ ಯುವಕರು (Muslim Youths) ವಸ್ತುಶಃ ರಾಕ್ಷಸರಂತೆಯೇ ಅಟ್ಟಹಾಸ ಮೆರೆದಿರುವುದನ್ನು ಅಲ್ಲಿನ ಮನೆಯವರು ಕಣ್ಣೀರು ಹಾಕುತ್ತಾರೆ ವಿವರಿಸುತ್ತಿದ್ದಾರೆ. ಇವರು ಮನೆಗಳಿಗೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ಪೊಲೀಸರಿಗೂ ಆವಾಜ್ (Threatening to Police) ಹಾಕಿರುವ ದೃಶ್ಯಗಳು ಲಭ್ಯವಾಗಿದ್ದು ಆತಂಕ ಹುಟ್ಟಿಸುವಂತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಕೋಮು ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮ; ಸಿದ್ದರಾಮಯ್ಯ ಎಚ್ಚರಿಕೆ
4. ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡಲು ಸರ್ಕಾರ ಸಂಚು? ಡಿಕೆಶಿ ಸೂತ್ರಧಾರ
ಬೆಂಗಳೂರು: 2022ರ ಏಪ್ರಿಲ್ 16ರಂದು ನಡೆದ ಹಳೆ ಹುಬ್ಬಳ್ಳಿ ಗಲಭೆ (Hubballi Riots) ಪ್ರಕರಣವನ್ನೇ ಕೈಬಿಡಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಅಂದು ವಾಟ್ಸ್ ಆಪ್ ಸ್ಟೇಟಸ್ (Whatsapp Status) ಮುಂದಿಟ್ಟುಕೊಂಡು ಮುಸ್ಲಿಂ ಗುಂಪುಗಳು (Muslim groups) ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಮೇಲೆ ದಾಳಿ (Muslims attack on Hale hubballi police station) ಮಾಡಿದ್ದವು. ಪೊಲೀಸರೇ ಭಯದಿಂದ ನಡುಗುವಂತಾದ ಈ ಪ್ರಕರಣದಲ್ಲಿ ಸುಮಾರು 40 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಕೈಬಿಡುವ ಬಗ್ಗೆ ಪ್ರಕ್ರಿಯೆಗಳು ನಡೆಯತ್ತಿರುವುದು ಬೆಳಕಿಗೆ ಬಂದಿದೆ. ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಗಲಭೆ ನಡೆದು ಅದರ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಬೇಡಿಕೆ ಜೋರಾಗಿರುವ ನಡುವೆಯೇ ಈ ವಿದ್ಯಮಾನ ನಡೆಯುತ್ತಿರುವುದು ಪೊಲೀಸರ ನೈತಿಕ ಬಲವನ್ನು ಕುಸಿಯುವಂತೆ ಮಾಡಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪದಕಗಳ ಸಂಖ್ಯೆ ಎಷ್ಟಾಯಿತು? ಇಲ್ಲಿದೆ ವಿವರ
ಹ್ಯಾಂಗ್ಝೌ: ಚೀನಾದಲ್ಲಿ ನಡೆಯತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಅಥ್ಲೀಟ್ಗಳು ಪದಕಗಳ ಬೇಟೆಯನ್ನು ಮುಂದುವರಿಸಿದ್ದಾರೆ. ಮಂಗಳವಾರ (ಅಕ್ಟೋಬರ್ 3ರಂದು) ಭಾರತಕ್ಕೆ ಎರಡು ಚಿನ್ನದ ಪದಕ, ಎರಡು ಬೆಳ್ಳಿಯ ಪದಕ ಹಾಗೂ ಐದು ಕಂಚಿನ ಪದಕಗಳು ಲಭಿಸಿವೆ. ಇದರೊಂದಿಗೆ ಭಾರತ 15 ಚಿನ್ನ, 26 ಬೆಳ್ಳಿ ಹಾಗೂ 28 ಕಂಚಿನ ಪದಕದೊಂದಿಗೆ ಒಟ್ಟಾರೆ 69 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತ ಖಂಡಾಂತರ ಕ್ರೀಡಾಕೂಟದಲ್ಲಿ ಅತಿದೊಡ್ಡ ಪದಕ ಗಳಿಕೆಯ ಹಾದಿಯಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಇಲ್ಲಿದೆ ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳ ಡೇಟ್ ಮಾರ್ಕ್ ಮಾಡಿಕೊಳ್ಳಿ
7. Nobel Prize 2023: ಅಗೋಸ್ಟಿನಿ, ಕ್ರೌಸ್ಟ್, ಎಲ್’ಹುಲ್ಲಿಯರ್‌ಗೆ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ
8. ಬಿಜೆಪಿಗೆ ಚಿಲುಮೆ ತಂದ ಸಂಕಟ! ರಾಜ್ಯ ಸರ್ಕಾರದಿಂದ ಮತ್ತೊಂದು ತನಿಖಾಸ್ತ್ರ
9. BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
10. Bed Bugs: ಪ್ಯಾರಿಸ್‌ನಲ್ಲಿ ಸಿಕ್ಕಾಪಟ್ಟೆ ತಿಗಣೆ ಕಾಟ! ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಂಟ್ರಿ ಕೊಟ್ಟ ಫ್ರಾನ್ಸ್ ಸರ್ಕಾರ
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ದೇಶ
PM Narendra Modi: ಸ್ವಾಮಿ ವಿವೇಕಾನಂದರು ತಂಗಿದ್ದ ಆಶ್ರಮದಲ್ಲಿ ಪ್ರಧಾನಿ ಮೋದಿ ವಾಸ್ತವ್ಯ!
PM Narendra Modi: 1901ರಲ್ಲಿ ಸ್ವಾಮಿ ವಿವೇಕಾನಂದ ಅವರು ಉತ್ತರಾಖಂಡದ ಅದ್ವೈತ ಆಶ್ರಮದಲ್ಲಿ 15 ದಿನಗಳ ಕಾಲ ತಂಗಿದ್ದರು. ಈಗ ಅದೇ ಆಶ್ರಮದಲ್ಲಿ ಪ್ರಧಾನಿ ಉಳಿದುಕೊಳ್ಳಲಿದ್ದಾರೆ.
ನವದೆಹಲಿ: 1901ರಲ್ಲಿ ಸ್ವಾಮಿ ವಿವೇಕಾನಂದ (Swami Vivekananda) ಅವರು ತಂಗಿದ್ದ ಉತ್ತರಾಖಂಡದ (Uttarakhand) ಚಂಪಾವತ್ ಜಿಲ್ಲೆಯ (Champawat district) ಲೋಹಾಘಾಟ್ ಪ್ರದೇಶದ ಅದ್ವೈತ ಆಶ್ರಮದ (Advaita Ashram) ಮುಖ್ಯ ಆಶ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಂಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಕ್ಟೋಬರ್ 11 ಮತ್ತು 12ರಂದು ಪ್ರಧಾನಿ ಮೋದಿ ಅವರು ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ, ಈ ವೇಳೆ ಅವರು ಅಕ್ಟೋಬರ್ 12ರ ರಾತ್ರಿ ಈ ಆಶ್ರಮದಲ್ಲಿ ತಂಗಲಿದ್ದಾರೆ ಎಂದು ಹೇಳಲಾಗುತ್ತದೆ.
ಮಾಯಾವತಿ ಆಶ್ರಮ ಎಂದು ಸಾಮಾನ್ಯವಾಗಿ ಕರೆಯಲಾಗುವ ಅದ್ವೈತ ಆಶ್ರಮವನ್ನು 1899ರಲ್ಲಿ ಅದ್ವೈತ ವೇದಾಂತದ ಅಭ್ಯಾಸ ಮತ್ತು ಬೋಧನೆಗಾಗಿ ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ಸ್ಥಾಪಿಸಲಾಯಿತು. ಚಂಪಾವತ್ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಮೀ ದೂರದಲ್ಲಿರುವ ಆಶ್ರಮವು 6,400 ಅಡಿ ಎತ್ತರದಲ್ಲಿದೆ ಮತ್ತು ಹಚ್ಚ ಹಸಿರಿನ ಕಾಡುಗಳಿಂದ ಆವೃತವಾಗಿದೆ. ಸ್ವಾಮಿ ವಿವೇಕಾನಂದರು 1901ರಲ್ಲಿ ಇಲ್ಲಿಗೆ ಭೇಟಿ ನೀಡಿ, ಹದಿನೈದು ದಿನಗಳ ಕಾಲ ಇಲ್ಲಿಯೇ ತಂಗಿದ್ದರು.
ಪ್ರಧಾನಿ ಮೋದಿ ಅಕ್ಟೋಬರ್ 11ರಿಂದ ಎರಡು ದಿನಗಳ ಕಾಲ ಪಿಥೋರಗಢ್ ಜಿಲ್ಲೆಗೆ ಆಗಮಿಸಲಿದ್ದಾರೆ. ಅವರ ತಾತ್ಕಾಲಿಕ ಕಾರ್ಯಕ್ರಮದ ಪ್ರಕಾರ, ಅವರು ಪಿಥೋರಗಢ ಜಿಲ್ಲೆಯಲ್ಲಿ ಮೊದಲ ದಿನ ಚೀನಾ ಗಡಿಯ ಸಮೀಪವಿರುವ ನಾರಾಯಣ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಆ ರಾತ್ರಿ ಆಶ್ರಮದಲ್ಲಿ ತಂಗಲಿರುವ ಪ್ರಧಾನಿ ಮೋದಿ, ಮರುದಿನ ಅವರು ಕೈಲಾಸ ಪರ್ವತದ ದರ್ಶನಕ್ಕಾಗಿ ಪಿಥೋರಗಢ್‌ನಲ್ಲಿರುವ ಜೋಲಿಂಗ್‌ಕಾಂಗ್ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಕೈಲಾಸ ದರ್ಶನದ ನಂತರ ಪಿಥೋರಗಢ ಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಚಂಪಾವತ್ ಜಿಲ್ಲೆಯ ಮಾಯಾವತಿ ಆಶ್ರಮಕ್ಕೆ ಭೇಟಿ ನೀಡಿ ಅಕ್ಟೋಬರ್ 12ರಂದು ರಾತ್ರಿ ಅಲ್ಲಿಯೇ ತಂಗಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: PM Narendra Modi: ಜಾತಿ ಗಣತಿಯಿಂದ ಹಿಂದೂಗಳಲ್ಲಿ ಒಡಕು ಮೂಡಿಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ
ಜಿಲ್ಲಾಧಿಕಾರಿ ನವನೀದ್ ಪಾಂಡೆ ಅವರು ಈಗಾಗಲೇ ಎರಡು ಬಾರಿ ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಧಾನಿ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಮಾಯಾವತಿ ಆಶ್ರಮದ ಸ್ವಾಮಿ ಶುದ್ಧಿದಾನಂದ, “ಮೋದಿ ಅವರು ತಮ್ಮ ಭೇಟಿಯ ಸಮಯದಲ್ಲಿ ನಮ್ಮ ಮುಖ್ಯ ಆಶ್ರಮದಲ್ಲಿ ಉಳಿದುಕೊಳ್ಳಲಿದ್ದಾರೆ. 1901ರಲ್ಲಿ ಸ್ವಾಮಿ ವಿವೇಕಾನಂದರು ತಂಗಿದ್ದ ನಮ್ಮ ಮುಖ್ಯ ಆಶ್ರಮ ಕಟ್ಟಡದಲ್ಲಿ ನಾವು ಆತಿಥ್ಯ ನೀಡುತ್ತಿರುವ ಮೊದಲ ಅತಿ ಪ್ರಮುಖ ಗಣ್ಯ ವ್ಯಕ್ತಿಯಾಗಿದ್ದಾರೆ. ನಮ್ಮ ಆಶ್ರಮಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಅವರು ಆದ್ದರಿಂದ ಆಶ್ರಮದ ಆಡಳಿತವು ಅವರಿಗೆ ಈ ಗೌರವವನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಶಾಸಕ ಕುಶಾಲ್ ಶಿಂಗ್ ಅಧಿಕಾರಿ ಅವರು ಪ್ರಧಾನಿ ಭೇಟಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರು ನಮ್ಮ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು ನಮ್ಮ ಅದೃಷ್ಟ. ಅವರು ದೇಶದ ಪ್ರಧಾನಿಯಾಗಿರುವುದರಿಂದ ನಾವು ಅವರಿಗೆ ಆತ್ಮೀಯ ಸ್ವಾಗತ ನೀಡುತ್ತೇವೆ. ಮೋದಿ ಇಲ್ಲಿಗೆ ಬಂದರೆ ಖಂಡಿತ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಕಾಣೆಕೆ ಕೊಡುತ್ತಾರೆ ಎಂದು ಅಧಿಕಾರಿ ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಪ್ರಮುಖ ಸುದ್ದಿ23 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಕಿರುತೆರೆ14 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
-
ದೇಶ19 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕರ್ನಾಟಕ15 hours ago
Namma Metro: ಮೆಟ್ರೋ ಟ್ರ್ಯಾಕ್ನಲ್ಲಿ ಲಾಕ್ ಆದ ಮೆಂಟೈನ್ಸ್ ವೆಹಿಕಲ್! ಮೇಲೆತ್ತಲು ಕ್ರೇನ್ ಬಳಕೆ
-
ಕ್ರೈಂ20 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?
-
ಕರ್ನಾಟಕ13 hours ago
Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್ ವೆಹಿಕಲ್; ಎಂದಿನಂತೆ ಮೆಟ್ರೋ ಓಡಾಟ
-
ಉತ್ತರ ಕನ್ನಡ14 hours ago
Karwar Tunnel Route : ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗ ಕೊನೆಗೂ ಸಂಚಾರ ಮುಕ್ತ!
-
ಕರ್ನಾಟಕ11 hours ago
Lecturer Death : ಬಿಜಿಎಸ್ ಕಾಲೇಜಿನ ಉಪನ್ಯಾಸಕ ನೇಣಿಗೆ ಶರಣು; ಸಾವಿನ ಸುತ್ತ ಅನುಮಾನದ ಹುತ್ತ