ನವದೆಹಲಿ: ಗೋಲ್ಡನ್ ಗ್ಲೋಬ್ (Golden Globe) ಪ್ರಶಸ್ತಿಯನ್ನು ಗೆದ್ದ ಆರ್‌ಆರ್‌ಆರ್ (RRR Movie) ಚಿತ್ರತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ನಡೆದ ಸಮಾರಂಭದಲ್ಲಿ 80ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಈ ವೇಳೆ, ಬೆಸ್ಟ್ ಓರಿಜನಲ್ ಸಾಂಗ್ ವಿಭಾಗದಲ್ಲಿ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಗೀತೆಗೆ ಪ್ರಶಸ್ತಿ ಸಂದಿದೆ. ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಇದೊಂದು ವಿಶೇಷ ಸಾಧನೆ. ಎಂ ಎಂ ಕೀರವಾಣಿ, ಪ್ರೇಮ್ ರಕ್ಷಿತ್, ಕಾಲಾ ಭೈರವ್, ಚಂದ್ರಬೋಸ್, ರಾಹುಲ್ ಸಿಪ್ಲಿಗಂಜ್ ಅವರಿಗೆ ಶುಭಾಶಯ. ಎಸ್ಎಸ್ ರಾಜಮೌಳಿ, ಎನ್‌ಟಿಆರ್, ರಾಮಚರಣ್ ಮತ್ತು ಇಡೀ ಆರ್ ಆರ್ ಆರ್ ತಂಡಕ್ಕೆ ಅಭಿನಂದನೆಗಳು. ಈ ಪ್ರತಿಷ್ಠಿತ ಗೌರವವು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತೆ ಮಾಡಿದೆ ಎಂದು ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಪಾಪ್ ಸಿಂಗರ್ ರಿಹನ್ನಾ ಅಭಿನಂದನೆ
ಬೆಸ್ಟ್ ಓರಿಜನಲ್ ಸಾಂಗ್ ವಿಭಾಗದಲ್ಲಿ ಆರ್‌ಆರ್‌ಆರ್ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಪಾಪ್ ಸಿಂಗರ್ ರಿಹನ್ನಾ (Rihanna) ಅವರು ತಮ್ಮ ಸಂಗಾತಿ ಎಎಸ್ಎಪಿ ರಾಕಿ ಜತೆಗೂಡಿ, ಆರ್‌ಆರ್‌ಆರ್ ಟೀಂ ಕುಳಿತಿದ್ದ ಟೇಬಲ್‌ನತ್ತ ತೆರಳಿ ಅಭಿನಂದಿಸಿದ್ದಾರೆ. ಈ ವಿಡಿಯೋವನ್ನು ಹಾಲಿವುಡ್ ರಿಪೋರ್ಟರ್ ಕ್ರಿಶ್ ಗಾರ್ಡರ್ನರ್ ಅವರು ಟ್ವಿಟರ್‌ನಲ್ಲಿ ಷೇರ್ ಮಾಡಿದ್ದಾರೆ. ರಿಹನ್ನಾ ಅವರ ಹಾಡು ಕೂಡ ನಾಮನಿರ್ದೇಶನಗೊಂಡಿತ್ತು.
ಇದನ್ನೂ ಓದಿ | RRR Film | ಗೋಲ್ಡನ್ ಗ್ಲೋಬ್ಸ್ ಅವಾರ್ಡ್‌ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ರಾಮ್ ಚರಣ್ ಪತ್ನಿ