Site icon Vistara News

G20 Virtual Summit: ಜಿ20 ಶೃಂಗದಲ್ಲಿ ಡೀಪ್‌ಫೇಕ್ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಧಾನಿ ಮೋದಿ

PM Narendra Modi express concern about Deepfake at G20 Virtual Summit

ನವದೆಹಲಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು (artificial intelligence Technology) ಸಮಾಜಕ್ಕೆ ಸುರಕ್ಷಿತವಾಗಿರಬೇಕು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ವಿರಾಮವನ್ನು ಸ್ವಾಗತಿಸಿದರು(Israel-Hamas Truce Deal). ಬುಧವಾರ ಪ್ರಧಾನಿ ಮೋದಿ ಅವರು ವರ್ಚುವಲ್ ಜಿ20 ಶೃಂಗವನ್ನು (G20 Virtual Summit) ಉದ್ದೇಶಿಸಿ ಮಾತನಾಡಿ, ಭಾರತದ ಅಧ್ಯಕ್ಷತೆಯಲ್ಲಿ ಆಫ್ರಿಕನ್ ಯೂನಿಯನ್ ಜಿ-20 ಗೆ ಪ್ರವೇಶ ಸೇರಿದಂತೆ ಒಕ್ಕೂಟದ ಸಾಧನೆಗಳನ್ನು ಈ ವೇಳೆ ಬಣ್ಣಿಸಿದರು.

ಇವತ್ತಿನ ಜಗತ್ತು ಸಾಖಷ್ಟು ಸವಾಲುಗಳನ್ನು ಎದಿರಿಸುತ್ತಿದೆ. ನಮ್ಮ ನಡುವಿನ ಪರಸ್ಪರ ವಿಶ್ವಾಸ ನಮ್ಮನ್ನು ಒಂದುಗೂಡಿಸಿದ್ದು ಮತ್ತು ಕನೆಕ್ಟ್ ಮಾಡದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ವೇಳೆ ಹೇಳಿದರು. ಜಿ 20 ಅಸಾಧಾರಣವಾದ ಒಳಗೊಳ್ಳುವಿಕೆಯ ಸಂದೇಶವನ್ನು ನೀಡಿದೆ. ಆಫ್ರಿಕನ್ ಯೂನಿಯನ್ ತನ್ನ ಅಧ್ಯಕ್ಷತೆಯಲ್ಲಿ ಜಿ 20 ನಲ್ಲಿ ಧ್ವನಿ ನೀಡಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಹಮಾಸ್- ಇಸ್ರೇಲ್‌ ನಡುವಿನ ಯುದ್ಧದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನ ನರೇಂದ್ರ ಮೋದಿ, ಒತ್ತೆಯಾಳುಗಳ ಬಿಡುಗಡೆಯ ಒಪ್ಪಂದವನ್ನು ಸ್ವಾಗತಿಸಿದರು ಮತ್ತು ಯಾವುದೇ ರೂಪದಲ್ಲಿ ಅಥವಾ ರಾಜ್ಯದಲ್ಲಿ ಭಯೋತ್ಪಾದನೆಯು ಜಿ20ಗೆ ಸ್ವೀಕಾರ್ಹವಲ್ಲ ಎಂದು ಹೇಳಿದರು. ಎಲ್ಲಾ ಒತ್ತೆಯಾಳುಗಳನ್ನು ಶೀಘ್ರದಲ್ಲೇ ಸುರಕ್ಷಿತವಾಗಿ ಬಿಡುಗಡೆಯಾಗುತ್ತಾರೆಂದು ನಾನು ಭಾವಿಸುತ್ತೇನೆ. ಈ ಯುದ್ಧವು ಪ್ರಾದೇಶಿಕ ಮಿಲಿಟರಿ ಸಂಘರ್ಷವಾಗಿ ರೂಪುಗೊಳ್ಳುವುದಿಲ್ಲ ಎಂದು ಒತ್ತಿ ಹೇಳಿದರು.

ಕೃತಕ ಬುದ್ಧಿಮತ್ತೆಯ ಋಣಾತ್ಮಕ ಪರಿಣಾಮಗಳ ಬಗ್ಗೆ ಜಗತ್ತು ಚಿಂತಿತವಾಗಿದೆ. ಕೃತಕ ಬುದ್ಧಿಮತ್ತೆಗಾಗಿ ಜಾಗತಿಕ ನಿಯಮಗಳ ಮೇಲೆ ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಭಾರತ ಭಾವಿಸುತ್ತದೆ. ಸಮಾಜ ಮತ್ತು ವ್ಯಕ್ತಿಗಳಿಗೆ ಡೀಪ್‌ಫೇಕ್‌ಗಳು ಎಷ್ಟು ಅಪಾಯಕಾರಿ ಎಂಬುದನ್ನು ಅರ್ಥಮಾಡಿಕೊಂಡು, ನಾವು ಮುಂದೆ ಕೆಲಸ ಮಾಡಬೇಕಾಗಿದೆ. ಕೃತಕ ಬುದ್ಧಿಮತ್ತೆ ಜನರನ್ನು ತಲುಪಬೇಕೆಂದು ನಾವು ಬಯಸುತ್ತೇವೆ. ಆದರೆ, ಅದು ಸಮಾಜಕ್ಕೆ ಸುರಕ್ಷಿತವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈ ಸುದ್ದಿಯನ್ನೂ ಓದಿ: PM Narendra Modi: ದೇಶದಿಂದ ಜಾತೀಯತೆ, ಪ್ರಾದೇಶಿಕವಾದ ಕಿತ್ತೊಗೆಯಲು ಪ್ರಧಾನಿ ನರೇಂದ್ರ ಮೋದಿ ಕರೆ

Exit mobile version