Site icon Vistara News

PM Narendra Modi: ಪ್ರಧಾನಿ ಮೋದಿಗೆ ಫಿಜಿ, ಪಪುವಾ ನ್ಯೂಗಿನಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳ ಪ್ರದಾನ

PM Narendra Modi has been conferred with the highest honours by Fiji and Papua New Guinea

ನವದೆಹಲಿ: ಫಿಜಿ (Fiji) ಮತ್ತು ಪಪುವಾ ನ್ಯೂಗಿನಿಯಾ (Papua New Guinea) ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಪ್ರದಾನ ಮಾಡಲಾಗಿದೆ. ಮೂರನೇ ಇಂಡಿಯಾ-ಪೆಸಿಫಿಕ್ ಐಲ್ಯಾಂಡ್ಸ್ ಕೋ ಆಪರೇಷನ್ (FIPIC) ಶೃಂಗದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಈ ದ್ವೀಪ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದರು. ಈ ವೇಳೆ, ಅವರಿಗೆ ಫಿಜಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ದಿ ಚಾಂಪಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ (The Companion of the Order of Fiji) ಗೌರವವನ್ನು ಫಿಜಿ ಪ್ರಧಾನಿ ಸಿತಿವೇನಿ ರಬುಕಾ ಅವರು ಪ್ರದಾನ ಮಾಡಿದರು. ಫಿಜಿಯೇತರರಿಗೆ ನೀಡುವ ಅಪರೂಪದ ಗೌರವವವಾಗಿದೆ. ಜಾಗತಿಕ ನಾಯಕತ್ವದಲ್ಲಿ ತೋರಿದ ಅಪ್ರತಿಮ ಪ್ರದರ್ಶನ ತೋರಿದ್ದಕ್ಕಾಗಿ ಈ ಗೌರವವನ್ನು ನೀಡಲಾಗಿದೆ.

ಭಾರತಕ್ಕೆ ದೊರೆತ ದೊಡ್ಡ ಗೌರವವಾಗಿದೆ. ಪ್ರಧಾನಿ ಮೋದಿಯವರಿಗೆ ಫಿಜಿಯ ಪ್ರಧಾನಮಂತ್ರಿ ಫಿಜಿಯ ಅತ್ಯುನ್ನತ ಗೌರವವನ್ನು ನೀಡಿದ್ದಾರೆ. ಮೋದಿ ಅವರ ಜಾಗತಿಕ ನಾಯಕತ್ವವನ್ನು ಗುರುತಿಸಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ ಪ್ರಶಸ್ತಿ ನೀಡಲಾಗಿದೆ. ಬೆರಳೆಣಿಕೆಯಷ್ಟು ಫಿಜಿಯೇತರರು ಮಾತ್ರ ಈ ಗೌರವವನ್ನು ಪಡೆದಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗೌರವವನ್ನು ಭಾರತೀಯರಿಗೆ ಅರ್ಪಿಸಿದ್ದಾರೆ.

ಪೆಸಿಫಿಕ್ ದ್ವೀಪ ರಾಷ್ಟ್ರಗಳ ಏಕತೆಯ ಕಾರಣಕ್ಕಾಗಿ ಪಪುವಾ ನ್ಯೂಗಿನಿಯಾ ತನ್ನ ಅತ್ಯುನ್ನತ ನಾಗರಿಕ ಗೌರವವಾದ ‘ಗ್ರ್ಯಾಂಡ್ ಕಂಪ್ಯಾನಿಯನ್ ಆಫ್ ಆರ್ಡರ್ ಆಫ್ ಲೋಗೊಹು (ಜಿಸಿಎಲ್) (Grand Companion of the Order of Logohu) ಅನ್ನು ಪಿಎಂ ಮೋದಿಯವರಿಗೆ ಪ್ರದಾನ ಮಾಡಿ ಗೌರವಿಸಿತು. ದ್ವೀಪ ರಾಷ್ಟ್ರಗಳ ಕೆಲವೇ ಕೆಲವು ಅನಿವಾಸಿಗಳು ಈ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: Narendra Modi: ಪಪುವಾ ನ್ಯೂಗಿನಿಯಾದಲ್ಲೂ ಪ್ರಧಾನಿ ಹವಾ; ಹರ ಹರ ಮೋದಿ ಎಂದು ಘೋಷಣೆ

ಪ್ರಧಾನಿ ಮೋದಿಯವರಿಗೆ ಹಲವಾರು ರಾಷ್ಟ್ರಗಳು ಅತ್ಯುನ್ನತ ನಾಗರಿಕ ಗೌರವಗಳನ್ನು ನೀಡಿ ಗೌರವಿಸಿವೆ. ಈ ಮನ್ನಣೆಗಳು ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ದೂರದೃಷ್ಟಿಯ ಪ್ರತಿಬಿಂಬವಾಗಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತದ ಹೊರಹೊಮ್ಮುವಿಕೆಯನ್ನು ಬಲಪಡಿಸಿದೆ. ಇದು ಪ್ರಪಂಚದಾದ್ಯಂತದ ದೇಶಗಳೊಂದಿಗೆ ಭಾರತದ ಬೆಳೆಯುತ್ತಿರುವ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version