Site icon Vistara News

ಯುಎಇ ಅಧ್ಯಕ್ಷರ ಜತೆ ಗುಜರಾತ್‌ನಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಇಲ್ಲಿವೆ ಫೋಟೊಗಳು

Modi UAE President

PM Narendra Modi Calls Mohammed bin Zayed Al Nahyan As Brother In Gujarat Summit

ಗಾಂಧಿನಗರ: ಗುಜರಾತ್ ರಾಜಧಾನಿ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಜನವರಿ 10ರಿಂದ 12ರವರೆಗೆ ವೈಬ್ರಂಟ್‌ ಗುಜರಾತ್‌ ಗ್ಲೋಬಲ್‌ ಸಮಿಟ್‌ (Vibrant Gujarat Global Summit 2024) ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ (ಜನವರಿ 10) ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ ನೀಡಿದ್ದಾರೆ. ಶೃಂಗಸಭೆಯಲ್ಲಿ ಭಾಗವಹಿಸಲು ಮಂಗಳವಾರವೇ (ಜನವರಿ 9) ಯುಎಇ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್ (Sheikh Mohamed bin Zayed Al Nahyan) ಅವರು ಗುಜರಾತ್‌ಗೆ ಆಗಮಿಸಿದ್ದು, ಅವರನ್ನು ನರೇಂದ್ರ ಮೋದಿ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ, ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಗಾಂಧಿನಗರದವರೆಗೆ ನರೇಂದ್ರ ಮೋದಿ ಹಾಗೂ ಶೇಖ್‌ ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್ ರೋಡ್‌ ಶೋ ನಡೆಸಿದರು. ಮೋದಿ-ಯುಎಇ ಅಧ್ಯಕ್ಷರ ಭೇಟಿಯ ಫೋಟೊಗಳು ಇಲ್ಲಿವೆ.

ಇದನ್ನೂ ಓದಿ: ಅಧ್ಯಕ್ಷ ಮುಯಿಜುವನ್ನು ವಜಾಗೊಳಿಸಿ; ಮೋದಿಗೆ ಮಾಲ್ಡೀವ್ಸ್‌ ಪ್ರತಿಪಕ್ಷಗಳಿಂದಲೂ ಬೆಂಬಲ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version