ನವದೆಹಲಿ: ಚೀನಾದಲ್ಲಿ ಮತ್ತೊಂದು ಅಲೆಗೆ ಕಾರಣವಾಗಿರುವ ಓಮಿಕ್ರಾನ್ ಉಪತಳಿ (Coronavirus) ಬಿಎಫ್.7 ಪ್ರಕರಣಗಳು ಭಾರತಕ್ಕೂ ಕಾಲಿಟ್ಟಿರುವ ಕಾರಣ ಆತಂಕ ಹೆಚ್ಚಾಗಿದ್ದು, ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತಮಟ್ಟದ ಸಭೆ ನಡೆಸಿದ್ದಾರೆ.
ಹೆಚ್ಚಿನ ಜನ ಸೇರುವ ಕಡೆಗಳಲ್ಲಿ ಮಾಸ್ಕ್ ಧರಿಸುವಂತೆ ಮಾಡುವುದು, ಜೆನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸುವುದು, ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರವಾಸಿಗರ ತಪಾಸಣೆ ಸೇರಿ ಹಲವು ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಆತಂಕದ ಅಗತ್ಯವಿಲ್ಲ
ಚೀನಾದಲ್ಲಿ ಆತಂಕ ಸೃಷ್ಟಿಸಿರುವ ಬಿಎಫ್.7 ಉಪತಳಿಯು ಭಾರತದಲ್ಲಿ ಜೂನ್‌ನಲ್ಲಿಯೇ ಪತ್ತೆಯಾಗಿದೆ. ಇದರ ಪ್ರಸರಣ ಹಾಗೂ ಪರಿಣಾಮದ ತೀವ್ರತೆ ಹೆಚ್ಚಾಗಿಲ್ಲ. ಹಾಗಾಗಿ, ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಸಭೆಯಲ್ಲಿ ತಿಳಿಸಿದ್ದಾರೆ. ಹಾಗಾಗಿ, ಕಠಿಣ ನಿರ್ಬಂಧ ಹೇರುವ ಕುರಿತು ಚರ್ಚಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | Coronavirus | ಚೀನಾದಲ್ಲಿ ಕೊರೊನಾ ಉಲ್ಬಣದ ಬೆನ್ನಲ್ಲೇ ಭಾರತದಲ್ಲಿ ಮೂವರಿಗೆ ಓಮಿಕ್ರಾನ್, ಏರ್‌ಪೋರ್ಟ್‌ನಲ್ಲಿ ತಪಾಸಣೆ