Site icon Vistara News

PM Narendra Modi: ಪ್ರಧಾನಿಯಿಂದ ಭವ್ಯ ಅಯೋಧ್ಯಾ ಧಾಮ್ ರೈಲು ನಿಲ್ದಾಣ ಉದ್ಘಾಟನೆ, ಅಮೃತ್‌ ಭಾರತ್‌ ರೈಲಿಗೆ ಚಾಲನೆ

ayodhya dham

ಅಯೋಧ್ಯೆ: ದೇಗುಲ ನಗರಿ ಅಯೋಧ್ಯೆಗೆ ಇಂದು ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು 240 ಕೋಟಿ ರೂ. ವೆಚ್ಚದ ನೂತನ, ಭವ್ಯ ಅಯೋಧ್ಯಾ ಧಾಮ್ ರೈಲ್ವೇ ನಿಲ್ದಾಣವನ್ನು (Ayodhya Dham Railway station) ಉದ್ಘಾಟಿಸಿದರು. ಇದಕ್ಕೂ ಮುನ್ನ ಅವರು 5 ಕಿಲೋಮೀಟರ್‌ ದೂರ ರೋಡ್‌ ಶೋ ನಡೆಸಿದರು.

11.30ರ ಸುಮಾರಿಗೆ ನೂತನ ಅಯೋಧ್ಯಾ ಧಾಮ್‌ ರೈಲ್ವೆ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಿದರು. ಅವರ ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದತ್ಯನಾಥ್‌, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಉತ್ತರಪ್ರದೇಶ ರಾಜ್ಯಪಾಲ ಆನಂದಿ ಬೆನ್‌ ಉಪಸ್ಥಿತರಿದ್ದರು. ರೈಲ್ವೆ ನಿಲ್ದಾಣದ ಜೊತೆಗೆ 2 ಹೊಸ ಅಮೃತ್ ಭಾರತ್ ರೈಲುಗಳು ಮತ್ತು 6 ವಂದೇ ಭಾರತ್ ರೈಲುಗಳನ್ನು ಫ್ಲ್ಯಾಗ್ ಆಫ್ ಮಾಡಿದರು.

ಈದಕ್ಕೂ ಮುನ್ನ ಪ್ರಧಾನಿ ಮೋದಿ ದೆಹಲಿಯಿಂದ ವಿಶೇಷ ವಿಮಾನದಲ್ಲಿ 10.40ರ ಸುಮಾರಿಗೆ ಅವರು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ನಂತರ ತೆರೆದ ವಾಹನದಲ್ಲಿ ರೋಡ್‌ ಶೋ ಮಾಡಿದರು. ರೋಡ್‌ ಶೋ ನಡೆದ ರಸ್ತೆಯ ಎರಡೂ ಕಡೆಗಳಲ್ಲಿ ಸಾವಿರಾರು ಜನ ನೆರೆದು ಮೋದಿಯವರನ್ನು ಪುಷ್ಪಾರ್ಚನೆ ಹಾಗೂ ಜಯಘೋಷಗಳಿಂದ ಸ್ವಾಗತಿಸಿದರು. ದೇಶದ ನಾನಾ ಕಡೆಗಳಿಂದ ಬಂದ ಸಾಂಸ್ಕೃತಿಕ ಕಲಾ ತಂಡಗಳು ದಾರಿಯುದ್ದಕ್ಕೂ ತಮ್ಮ ಕಲಾ ಪ್ರದರ್ಶನಗಳನ್ನು ನೀಡಿ ನೋಡುಗರ ಮನ ಸೂರೆಗೊಂಡವು.

ಮಧ್ಯಾಹ್ನ 1 ಗಂಟೆಗೆ ಮೋದಿಯವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅಲ್ಲಿ ಅವರು ರಾಜ್ಯದಲ್ಲಿ ₹ 15,000 ಕೋಟಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮಾಡಲಿದ್ದಾರೆ. ಇವುಗಳಲ್ಲಿ ಅಯೋಧ್ಯೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ₹ 11,100 ಕೋಟಿ ಮೌಲ್ಯದ ಯೋಜನೆಗಳು ಮತ್ತು ಉತ್ತರ ಪ್ರದೇಶದಾದ್ಯಂತ ಇತರ ಯೋಜನೆಗಳಿಗೆ ಸಂಬಂಧಿಸಿದ ₹ 4,600 ಕೋಟಿ ಮೌಲ್ಯದ ಯೋಜನೆಗಳು ಸೇರಿವೆ.

ಅಯೋಧ್ಯಾ ಧಾಮ್ ರೈಲು ನಿಲ್ದಾಣ

ಅಯೋಧ್ಯೆ ರೈಲು ನಿಲ್ದಾಣವನ್ನು, ಸಿಟಿ ಅಯೋಧ್ಯಾ ಜಂಕ್ಷನ್‌ಗೆ (Ayodhya Railway Station) ಬದಲಿಗೆ ಅಯೋಧ್ಯಾ ಧಾಮ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ (Ayodhya Dham Junction). ರಾಮ ಮಂದಿರ ನಿರ್ಮಾಣಕ್ಕಾಗಿ ರಾಜಸ್ಥಾನದ ಭಾರತಪುರ್ ಜಿಲ್ಲೆಯಿಂದಲೇ ಕಲ್ಲುಗಳನ್ನು ತರಿಸಲಾಗಿತ್ತು. ಈ ಅಯೋಧ್ಯೆ ರೈಲು ನಿಲ್ದಾಣ ಅಭಿವೃದ್ಧಿಗೂ ಅಲ್ಲಿಂದಲೇ ಕಲ್ಲುಗಳನ್ನು ತರಿಸಲಾಗಿದೆ. ಗುಣಮಟ್ಟ ಮತ್ತು ಅನುಕೂಲತೆಯ ದೃಷ್ಟಿಯಿಂದ ವಿಮಾನ ನಿಲ್ದಾಣದ ಸೌಲಭ್ಯಗಳನ್ನು ಸಹ ಮೀರಿಸುವಂತಹ ಅದರ ನಿಖರವಾದ ಯೋಜಿತ ನಿಲ್ದಾಣವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ಶಿಶುಪಾಲನಾ ಕೇಂದ್ರ, ಆನಾರೋಗ್ಯರಿಗೆ ಪ್ರತ್ಯೇಕ ಕೋಣೆ, ಪ್ರವಾಸಿ ಮಾಹಿತಿ ಕೇಂದ್ರ, ಅಗ್ನಿ ಅವಘಡ ನಿರ್ಗಮನ ದ್ವಾರ ಮತ್ತು ದೇಶದಲ್ಲೇ ಅತಿ ದೊಡ್ಡ ಎನ್ನಬಹುದಾದ ಅಂಗಣ ಸೇರಿದಂತೆ ಅನೇಕ ಸೌಲಭ್ಯಗಳು ಈ ರೈಲ್ವೆ ನಿಲ್ದಾಣದಲ್ಲಿ ದೊರೆಯಲಿವೆ.

ಮರುಅಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣದ ಹಂತ I – ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ಎಂದು ಕರೆಯಲ್ಪಡುತ್ತದೆ. ₹ 240 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮೂರು ಅಂತಸ್ತಿನ ಆಧುನಿಕ ರೈಲು ನಿಲ್ದಾಣದ ಕಟ್ಟಡವು ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಫುಡ್ ಪ್ಲಾಜಾಗಳು, ಪೂಜಾ ಅಗತ್ಯಗಳಿಗಾಗಿ ಅಂಗಡಿಗಳು, ಕ್ಲೋಕ್‌ರೂಮ್‌ಗಳು, ಮಕ್ಕಳ ಆರೈಕೆ ಕೊಠಡಿಗಳು ಮತ್ತು ಕಾಯುವ ಹಾಲ್‌ಗಳಂತಹ ಎಲ್ಲಾ ಆಧುನಿಕ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿದೆ. ನಿಲ್ದಾಣದ ಕಟ್ಟಡ ಎಲ್ಲರಿಗೂ ಪ್ರವೇಶಿಸಬಹುದಾದಂತೆ ಐಜಿಬಿಸಿ-ಪ್ರಮಾಣೀಕೃತ ಹಸಿರು ನಿಲ್ದಾಣ ಕಟ್ಟಡವಾಗಿರುತ್ತದೆ.

Exit mobile version