ಕೋಲ್ಕೊತಾ: ಪಶ್ಚಿಮ ಬಂಗಾಳದ ಹೌರಾದಿಂದ ನ್ಯೂಜಲಪಾಯಿವರೆಗೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವರ್ಚುವಲ್ ಆಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ನಾನು ಇವತ್ತು ನಿಮ್ಮ ಮಧ್ಯೆ ಇರಬೇಕಾಗಿತ್ತು. ನಿಮ್ಮ ಜತೆಯಲ್ಲೇ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಆದರೆ, ತಾಯಿಯ ನಿಧನದಿಂದ ಬರಲು ಸಾಧ್ಯವಾಗಲಿಲ್ಲ ಎಂದು ಪಶ್ಚಿಮ ಬಂಗಾಳ ಜನರಿಗೆ ಹೇಳಿದರು.
ಡಿಸೆಂಬರ್ 30. ಇದು ಬಹಳ ಮಹತ್ವದ ದಿನವಾಗಿದೆ. ಯಾಕೆಂದರೆ 75 ವರ್ಷಗಳ ಹಿಂದೆ ಅಂಡಮಾನ್‌ನಲ್ಲಿ ಸುಭಾಷ್ ಚಂದ್ರ ಬೋಸ್ ಅವರು ತಿರಂಗಾವನ್ನು ಹಾರಿಸಿದರು ಎಂದು ಸ್ಮರಿಸಿಕೊಂಡರು.
ಹೌರಾದಿಂದ ನ್ಯೂ ಜಲಪಾಯಿ ಗುಡಿವರೆಗೆ ಸಂಚರಿಸಲಿರುವ ವಂದೇ ಭಾರತ್ ರೈಲಿಗೆ ಚಾಲನೆ ನೀಡಿರೋದು ತುಂಬಾ ಖುಷಿ ಕೊಟ್ಟಿದೆ. ಭಾರತೀಯ ರೈಲ್ವೆ ಕ್ಷೇತ್ರದ ಅಭಿವೃದ್ಧಿ ಬಹಳ ದೊಡ್ಡ ಕೆಲಸವಾಗಿದೆ. ಹಾಗಾಗಿ, ಭಾರತೀಯ ರೈಲ್ವೆ ಕಾಯಕಲ್ಪಕ್ಕಾಗಿ ರಾಷ್ಟ್ರಾದ್ಯಂತ ಅಭಿಯಾನ ನಡೆಯುತ್ತಿದೆ ಎಂದು ತಿಳಿಸಿದರು.
ದೇಶದೆಲ್ಲೆಡೆ ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣದಂತೆ ಆಧುನಿಕರಣ ಮಾಡಲಾಗುತ್ತಿದೆ. ಕಳೆದ 8 ವರ್ಷಗಳಿಂದ ಭಾರತೀಯ ರೈಲ್ವೆ ಆಧುನಿಕರಣದತ್ತ ಹೆಜ್ಜೆ ಹಾಗುತ್ತಿದೆ. ಒಂದು ರೀತಿಯಲ್ಲಿ ಯವ್ವನಾವ್ಯವಸ್ಥೆ ರೀತಿಯಲ್ಲಿ ತಯಾರಾಗುತ್ತಿದೆ ಎಂದು ಮೋದಿ ಅವರು ಅಭಿಪ್ರಾಯಪಟ್ಟರು.
ವಿಶ್ವದಲ್ಲೇ ಅತೀ ವೇಗವಾಗಿ ಓಡುವ ವಿದ್ಯುತ್ ರೈಲನ್ನು ಭಾರತವು ಅಭಿವೃದ್ಧಿ ಮಾಡುತ್ತಿದೆ ಎಂದು ಹೇಳಿದ ಅವರು, 2014ಕ್ಕಿಂತ ಮುಂಚೆ ಇಡೀ ದೇಶದಲ್ಲಿ 250 ಕಿ ಮೀ ಮಾತ್ರ ಮೆಟ್ರೋ ಲೈನ್ ಇತ್ತು. ಕಳೆದ 8 ವರ್ಷಗಳಲ್ಲಿ 24 ನಗರಕ್ಕಿಂತ ಹೆಚ್ಚು ಹಾಗೂ 800ರಿ0ದ 1000 ಕಿ ಮೀ ವರೆಗೆ ಮೆಟ್ರೋ ವಿಸ್ತರಣೆ ಆಗಿದೆ ಎಂದು ಅಭಿಮಾನದಿಂದ ಹೇಳಿದರು.
ಇದನ್ನೂ ಓದಿ | ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್; ವಾರದಲ್ಲಿ 6 ದಿನ ಸಂಚರಿಸಲಿದೆ ರೈಲು