Site icon Vistara News

PM Narendra Modi: ಚೀನಿಯರಿಗೂ ಮೋದಿ ಇಷ್ಟ, ಅವರನ್ನು ಯಾವ ಅಡ್ಡ ಹೆಸರಿನಿಂದ ಕರೆಯುತ್ತಾರೆ?

Narendra Modi Plans To Lok Sabha Election

Narendra Modi Strategy For Lok Sabha Election; Will Launch 42 Key Projects by Jan 26

ನವದೆಹಲಿ: ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ನರೇಂದ್ರ ಮೋದಿ(PM Narendra Modi) ಅವರು, ಚೀನಾದ ಜನರಿಗೂ ಇಷ್ಟ. ವಿಶೇಷವಾಗಿ ನೆಟಿಜನ್ಸ್‌ಗೆ ಮೋದಿ ಅಂದರೆ ಅಚ್ಚುಮೆಚ್ಚು. ಚೀನಾ ಮತ್ತು ಭಾರತದ ನಡುವೆ ಗಡಿ ಗಲಾಟೆಯ ನಡುವೆಯೂ ಚೀನಿ ನೆಟಿಜನ್ಸ್‌ಗೆ ಮೋದಿ ಇಷ್ಟವಾಗಿದ್ದಾರೆ. ಅಮೆರಿಕ ಮೂಲದ ಸ್ಟ್ರಾಟೆಜಿಕ್ ಅಫೇರ್ಸ್ ಮ್ಯಾಗ್‌ಜಿನ್ ದಿ ಡಿಪ್ಲೋಮ್ಯಾಟ್ (The Diplomat) ಪ್ರಕಟಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ. ಚೀನಿ ನೇಚಿಜನ್ಸ್ ಅವರು ಮೋದಿ ಅವರನ್ನ ಮೋದಿ ಲಾವೋಕ್ಸಿಯನ್ (Modi Laoxian) ಎಂದು ಕರೆಯುತ್ತಾರೆ. ಅಂದರೆ, ಮೋದಿ ಅಮರ ಎಂದಾಗುತ್ತದೆ! ಇದು ಚೀನಿಯರು ಮೋದಿಗೆ ಇಟ್ಟಿರುವ ನಿಕ್ ನೇಮ್.

ದಿ ಡಿಪ್ಲೋಮ್ಯಾಟ್ ಮಾಗ್‌ಜಿನ್‌ನಲ್ಲಿ How is India viewed in China? ಶೀರ್ಷಿಕೆಯಡಿ ಲೇಖನ ಪ್ರಕಟಿಸಲಾಗಿದೆ. ಚೀನಿ ಸೋಷಿಯಲ್ ಮೀಡಿಯಾಗಳನ್ನು ವಿಶ್ಲೇಷಿಸುವ ಪತ್ರಕರ್ತ ಮು ಚುನ್ಶಾನ್ ಅವರು ಈ ಲೇಖನ ಬರೆದಿದ್ದಾರೆ. ಮೋದಿ ನೇತೃತ್ವದ ಭಾರತವು ವಿಶ್ವದ ಪ್ರಮುಖ ರಾಷ್ಟ್ರಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬಹುದು ಎಂದು ಹೆಚ್ಚಿನ ಚೀನಿಯರು ಭಾವಿಸುತ್ತಾರೆ ಎಂಬುದು ಅವರ ಅಭಿಪ್ರಾಯವಾಗಿದೆ. ಚೀನಾದ ಸೋಷಿಯಲ್ ಮೀಡಿಯಾ ಆಗಿರುವ Sina Weibo 58.2 ಕೋಟಿಗೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚೀನಿ ಇಂಟರ್ನೆಟ್ ವಿಶಿಷ್ಟವಾದ ನಿಕ್ ‌ನೇಮ್ ನೀಡಿದೆ. ಮೋದಿ ಲಾವೋಕ್ಸಿಯನ್ ಎಂಬುದು ನಿಕ್ ನೇಮ್ ಆಗಿದೆ. ಲಾವೊಕ್ಸಿಯನ್ ಕೆಲವು ವಿಲಕ್ಷಣ ಸಾಮರ್ಥ್ಯಗಳೊಂದಿಗೆ ವಯಸ್ಸಾದ ಅಮರರನ್ನು ಉಲ್ಲೇಖಿಸುತ್ತದೆ. ಚೀನಾದ ನೆಟಿಜನ್‌ಗಳು ಇತರ ನಾಯಕರಿಗಿಂತ ಮೋದಿ ವಿಭಿನ್ನ ಎಂದು ಹಾಗೂ ಇನ್ನೂ ಅದ್ಭುತ ಎಂದು ಭಾವಿಸುತ್ತಾರೆ ಎಂಬುದನ್ನು ಈ ಅಡ್ಡಹೆಸರು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮೋದಿ ಅವರ ಡ್ರೆಸ್ ಮತ್ತು ಶರೀರ ಕೂಡ ಚೀನಾದ ಲಾವೋಕ್ಸಿಯನ್‌ಗೆ ಹೋಲಿಕೆಯಾಗುತ್ತದೆ. ಹಾಗಾಗಿ, ಅವರನ್ನು ಅದೇ ಹೆಸರಿನಿಂದ ಚೀನಿ ನೇಟಿಜನ್ಸ್ ಕರೆಯುತ್ತಾರೆ. ಅಲ್ಲದೇ, ಈ ಹಿಂದಿನ ಸರ್ಕಾರಗಿಂತಲೂ ಭಾರತವು ಈಗ ಅನುಸರಿಸುತ್ತಿರುವ ನೀತಿಗಳು ಬದಲಾಗಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ಮು ಅವರು.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗಾಗಿ ಔತಣಕೂಟ ಏರ್ಪಡಿಸಲಿದ್ದಾರೆ ಜೋ ಬೈಡೆನ್​; ಶೀಘ್ರದಲ್ಲೇ ಮೋದಿ ಅಮೆರಿಕ ಪ್ರವಾಸ?

ಅದು ರಷ್ಯಾ, ಅಮೆರಿಕ ಅಥವಾ ದಕ್ಷಿಣ ದೇಶಗಳಾಗಿರಲಿ, ಭಾರತವು ಎಲ್ಲರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದೆ. ಮೋದಿ ಅವರ ಈ ನಾಯಕತ್ವವು ಕೆಲವು ಚೀನಾದ ನೆಟಿಜನ್‌ಗಳಿಗೆ ಬಹಳ ಪ್ರಶಂಸನೀಯ ಎನಿಸಿದೆ. ಲಾವೋಕ್ಸಿಯನ್ ಪದವು ಮೋದಿಯ ಬಗ್ಗೆ ಚೀನಾದ ಜನರ ಸಂಕೀರ್ಣ ಭಾವನೆಯನ್ನು ಪ್ರತಿಬಿಂಬಿಸುತ್ತದೆ, ಕುತೂಹಲ, ಬೆರಗು ಮತ್ತು ಬಹುಶಃ ಸಿನಿಕತನವನ್ನು ಸಂಯೋಜಿಸುತ್ತದೆ ಎಂದು ಮು ಬರೆದಿದ್ದಾರೆ.

Exit mobile version