Site icon Vistara News

PM Narendra Modi: ವಿಶ್ವದ ಜನಪ್ರಿಯ ನಾಯಕ ಪ್ರಧಾನಿ ಮೋದಿಯ ನಂ.1 ಸ್ಥಾನ ಅಬಾಧಿತ!

PM Narendra Modi is number 1 popular global leader Says Morning Consult

ನವದೆಹಲಿ: ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ (most popular global leader) ಭಾರತದ ಪ್ರಧಾನಿ ನರೇಂದ್ರ ಮೋದಿ (Indian Prime Minister Narendra Modi) ಅವರು ತಮ್ಮ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ(Number 1). ಮಾರ್ನಿಂಗ್ ಕನ್ಸಲ್ಟ್ (Morning Consult Survey) ನಡೆಸಿದ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರ ಅನುಮೋದನೆ ರೇಟಿಂಗ್ ಪಟ್ಟಿಯಲ್ಲಿ ಶೇ.76ರೊಂದಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಶೇ.18 ಜನರು ಮೋದಿ ಅವರ ಜಾಗತಿಕ ನಾಯಕತ್ವಕ್ಕೆ ಮನ್ನಣೆ ನೀಡಿಲ್ಲ ಮತ್ತು ಶೇ.6 ಜನರು ಯಾವುದೇ ಅಭಿಪ್ರಾಯವನ್ನು ನೀಡಿಲ್ಲ ಎಂದು ಸಮೀಕ್ಷೆ ಕೈಗೊಂಡ ಅಮೆರಿಕ ಮೂಲದ ಕನ್ಸಲ್ಟನ್ಸಿ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಹೇಳಿದೆ. ನರೇಂದ್ರ ಮೋದಿ ಅವರ ನಂತರದ ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಅಧ್ಯಕ್ಷರಿದ್ದಾರೆ(Brazil President).

ಈ ತಿಂಗಳ ಆರಂಭದಲ್ಲಿ ದಿಲ್ಲಿಯಲ್ಲಿ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಮೋದಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ ಅವರು 64 ಶೇಕಡಾ ಅನುಮೋದನೆ ಮತ್ತು ಮೆಕ್ಸಿಕೊದ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು 61 ಶೇಕಡಾ ಅನುಮೋದನೆ ರೇಟಿಂಗ್ ಹೊಂದಿದ್ದಾರೆ. ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಅತಿ ಹೆಚ್ಚು ಅನುಮೋದನೆ ಪ್ರಮಾಣದೊಂದಿಗೆ ಪ್ರಥಮ ಸ್ಥಾನದಲ್ಲೇ ಇದ್ದರು.

ಶೇ.40 ಅನುಮೋದನೆ ಪ್ರಮಾಣದೊಂದಿಗೆ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಕೆನಡಿಯನ್ ಪ್ರಧಾನಿ ಜಸ್ಟಿನ್ ಟ್ರುಡೂ ಶೇ.37, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರು ಶೇ.27 ಹಾಗೂ ಫ್ರಾನ್ಸ್ ಅಧ್ಯಕ್, ಎಮ್ಯಾನುಯೆಲ್ ಮ್ಯಕ್ರಾನ್ ಅವರು ಶೇ.14 ಅಪ್ರೂವಲ್ ರೇಟಿಂಗ್‌ನೊಂದಿಗೆ ಟಾಪ್ 10 ಪಟ್ಟಿಯಲ್ಲಿದ್ದಾರೆ.

ಈ ಸುದ್ದಿಯನ್ನೂ ಓದಿ: PM Narendra Modi: ನರೇಂದ್ರ ಮೋದಿ 73ನೇ ಜನುಮ ದಿನ; ಬಿಜೆಪಿಯಿಂದ ವಿಭಿನ್ನ ಕಾರ್ಯಕ್ರಮ ಆಯೋಜನೆ

ಮಾರ್ನಿಂಗ್ ಕನ್ಸಲ್ಟ್ ಇತ್ತೀಚಿನ ಅನುಮೋದನೆ ರೇಟಿಂಗ್‌ಗಳು ಸೆಪ್ಟೆಂಬರ್ 6 ರಿಂದ 12 ರವರೆಗೆ ಸಂಗ್ರಹಿಸಿದ ಡೇಟಾವನ್ನು ಆಧರಿಸಿದೆ ಎಂದು ಹೇಳಿದೆ. ರೇಟಿಂಗ್‌ಗಳು ವಿವಿಧ ಮಾದರಿ ಗಾತ್ರಗಳೊಂದಿಗೆ ಪ್ರತಿ ದೇಶದಲ್ಲಿ ಏಳು ದಿನಗಳ ಮೋವಿಂಗ್ ಆ್ಯವರೇಜ್ ವಯಸ್ಕ ನಿವಾಸಿಗಳನ್ನು ಆಧರಿಸಿದೆ. ಅಮೆರಿಕದಲ್ಲಿ ಈ ಸರಾಸರಿ ಮಾದರಿ ಗಾತ್ರವು (ಸ್ಯಾಂಪಲ್ ಸೈಜ್)ಸುಮಾರು 45,000ರಷ್ಟಿದ್ದರೆ, ಇತರ ದೇಶಗಳಲ್ಲಿ ಮಾದರಿ ಗಾತ್ರವು ಸರಿಸುಮಾರು 500-5,000 ವರೆಗೆ ಇರುತ್ತದೆ ಎಂದು ಸಂಸ್ಥೆ ಹೇಳಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version