Site icon Vistara News

Mera Yuva Bharat: ಮೈ ಭಾರತ್‌ಗೆ ಮೋದಿ ಚಾಲನೆ; ಯುವಕರ ಏಳಿಗೆಗೆ ನಾಂದಿ ಎಂದ ಪ್ರಧಾನಿ

Mera Yuva Bharat

PM Narendra Modi launches Mera Yuva Bharat MY Bharat platform for youths

ನವದೆಹಲಿ: ದೇಶದ ಯುವಕರಲ್ಲಿ ನಾಯಕತ್ವ ಗುಣ, ಯುವಕರ ಏಳಿಗೆ, ಕೌಶಲ ಅಭಿವೃದ್ಧಿ ಸೇರಿ ಯುವಕರನ್ನೇ ಗುರಿಯಾಗಿಸಿ ಕೇಂದ್ರ ಸರ್ಕಾರ ಸ್ಥಾಪಿಸಿರುವ ಮೇರಾ ಯುವ ಭಾರತ್‌ (My Bharat) ಸ್ವಾಯತ್ತ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ (ಅಕ್ಟೋಬರ್‌ 31) ಚಾಲನೆ ನೀಡಿದರು. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇರಾ ಯುವ ಭಾರತ್‌ (Mera Yuva Bharat) ವೆಬ್‌ಪೋರ್ಟಲ್‌ಗೂ ಪ್ರಧಾನಿ ಚಾಲನೆ ನೀಡಿದರು.

ಪೋರ್ಟಲ್‌ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, “ಭಾರತವು ಹೆಚ್ವಿನ ಪ್ರಮಾಣದಲ್ಲಿ ಯುವಕರಿಂದ ಕೂಡಿದ ದೇಶವಾಗಿದೆ. ಹಾಗಾಗಿ, ಕೇಂದ್ರ ಸರ್ಕಾರವು ಯುವಕರ ಏಳಿಗೆ, ಸಂಘಟನಾ ಶಕ್ತಿ, ನಾಯಕತ್ವ ಗುಣ, ಕೌಶಲ ಅಭಿವೃದ್ಧಿ, ತರಬೇತಿ ಸೇರಿ ಹಲವು ರೀತಿಯಲ್ಲಿ ಅವರಿಗೆ ಮಾರ್ಗದರ್ಶನ ನೀಡಲು ಮೇರಾ ಯುವ ಭಾರತ್‌ಗೆ ಚಾಲನೆ ನೀಡಲಾಗುತ್ತಿದೆ. 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿಗೆ ಯುವಕರ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಮೈ ಭಾರತ್‌ಗೆ ಚಾಲನೆ ನೀಡಲಾಗಿದೆ. ಇದರಿಂದ ಯುವಕರು ಹಾಗೂ ದೇಶವು ಮತ್ತಷ್ಟು ಏಳಿಗೆ ಹೊಂದಲಿದೆ” ಎಂದು ಹೇಳಿದರು.

ಇದರ ದೃಷ್ಟಿಕೋನ ಏನು?

‘ಮೇರಾ ಯುವ ಭಾರತ (MY Bharat)’ ಅನ್ನು ಯುವಜನರ ಅಭಿವೃದ್ಧಿ ಮತ್ತು ಯುವ-ನೇತೃತ್ವದ ಅಭಿವೃದ್ಧಿಗೆ ಪ್ರಮುಖವಾದ, ತಂತ್ರಜ್ಞಾನ-ಚಾಲಿತ ಸಹಾಯಕ ವ್ಯವಸ್ಥೆಯಾಗಿ ರೂಪಿಸಲಾಗಿದೆ. ಯುವಜನರ ಆಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಮತ್ತು ಸರ್ಕಾರದ ಸಂಪೂರ್ಣ ವ್ಯಾಪ್ತಿಯಾದ್ಯಂತ “ವಿಕಸಿತ ಭಾರತ” (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಾಣಕ್ಕೆ ಕೊಡುಗೆ ನೀಡುವ ಪ್ರಮುಖ ಗುರಿಯೊಂದಿಗೆ ಇದನ್ನು ರಚಿಸಲಾಗಿದೆ. ನಮ್ಮ ದೇಶದ ಯುವಜನರು ಕಾರ್ಯಕ್ರಮಗಳು, ಮಾರ್ಗದರ್ಶಕರು ಮತ್ತು ಅವರ ಸ್ಥಳೀಯ ಸಮುದಾಯಗಳೊಂದಿಗೆ ಯಾವುದೇ ಅಡೆತಡೆಯಿಲ್ಲದೆ ಸಂಪರ್ಕಿಸಬಹುದಾದ ಚೌಕಟ್ಟನ್ನು ಇದು ರೂಪಿಸುತ್ತದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಯುವಜನರ ತಿಳಿವಳಿಕೆಯನ್ನು ಗಾಢವಾಗಿಸಲು ಮತ್ತು ರಚನಾತ್ಮಕ ಪರಿಹಾರಗಳಿಗೆ ಕೊಡುಗೆ ನೀಡಲು ಅವರನ್ನು ಸಶಕ್ತಗೊಳಿಸಲು ಈ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ.

ಮೈ ಭಾರತ್‌ ಕುರಿತು ಇನ್ನಷ್ಟು ತಿಳಿಯಿರಿ

ಮೇರಾ ಯುವ ಭಾರತ (MY Bharat), ಸ್ವಾಯತ್ತ ಸಂಸ್ಥೆಯಾಗಿದ್ದು, 15-29 ವರ್ಷ ವಯಸ್ಸಿನ ಯುವಜನರಿಗೆ ರಾಷ್ಟ್ರೀಯ ಯುವ ನೀತಿಯಲ್ಲಿನ ‘ಯುವ’ ವ್ಯಾಖ್ಯಾನಕ್ಕೆ ಅನುಗುಣವಾಗಿ ಪ್ರಯೋಜನವನ್ನು ನೀಡುತ್ತದೆ. ಫಲಾನುಭವಿಗಳು 10-19 ವರ್ಷಗಳ ವಯೋಮಾನದವರಾಗಿರುತ್ತಾರೆ.
ಮೇರಾ ಯುವ ಭಾರತ (MY Bharat) ‘ಫಿಜಿಟಲ್ ಪ್ಲಾಟ್‌ ಫಾರ್ಮ್’ (ಭೌತಿಕ + ಡಿಜಿಟಲ್) ಆಗಿದ್ದು, ಇದು ಡಿಜಿಟಲ್ ಸಂಪರ್ಕಕ್ಕೆ ಅವಕಾಶದ ಜೊತೆಗೆ ದೈಹಿಕ ಚಟುವಟಿಕೆಯನ್ನು ಒಳಗೊಂಡಿರುತ್ತದೆ.

ಇಂತಹ ಸಂಸ್ಥೆಯ ಅಗತ್ಯವೇನು?

ಮೈ ಭಾರತ್ ಉದ್ದೇಶಗಳು‌

ಮೇರಾ ಯುವ ಭಾರತ (MY Bharat) ದ ಪ್ರಾಥಮಿಕ ಉದ್ದೇಶವು ಯುವಜನರ ಪ್ರಗತಿಗೆ ಮೀಸಲಾದ ಸಂಪೂರ್ಣ ಸರ್ಕಾರಿ ವೇದಿಕೆಯಾಗಿದೆ. ಇದರ ಉದ್ದೇಶಗಳು ಹೀಗಿವೆ…

ನನ್ನ ಮಣ್ಣು, ನನ್ನ ದೇಶ ಅಭಿಯಾನ ಅಂತ್ಯ

ಬೃಹತ್ ಸಾಂಸ್ಕೃತಿಕ ಸಂಭ್ರಮದ ನಡುವೆ ಅಮೃತ ಕಲಶಕ್ಕೆ ಭಾರತಾದ್ಯಂತ ಎಲ್ಲಡೆಯಿಂದ ಸ್ವಯಂಸೇವಕರಾಗಿ ಹೊತ್ತು ತಂದ ಮಣ್ಣನ್ನು (‘ಮಾಟಿ’) ಧಾರೆ ಎರೆಯುವುದರೊಂದಿಗೆ ನವ ದೆಹಲಿಯ ಕರ್ತವ್ಯ ಪಥದಲ್ಲಿ ‘ನನ್ನ ಮಣ್ಣು ನನ್ನ ದೇಶ(ಮೇರಿ ಮಾಟಿ ಮೇರಾ ದೇಶ)’ ಅಭಿಯಾನವು ಸಮಾಪನಗೊಂಡಿತು. ಈ ಕಾರ್ಯಕ್ರಮವು ಜೊತೆಗೆ, ಆಜಾದಿ ಕಾ ಅಮೃತ್ ಮಹೋತ್ಸವದ ಸಮಾರೋಪವನ್ನು ಕೂಡ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಸಮಾರೋಪದಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: Israel Palestine War: ಇಸ್ರೇಲ್‌-ಪ್ಯಾಲೆಸ್ತೀನ್‌ ಬಿಕ್ಕಟ್ಟು; ಈಜಿಪ್ಟ್‌ ಅಧ್ಯಕ್ಷರ ಜತೆ ಮೋದಿ ಚರ್ಚೆ

ಅಕ್ಟೋಬರ್ 30 ಮತ್ತು 31ರಂದು ನವದೆಹಲಿಯಲ್ಲಿ ನಡೆದ ಎರಡು ದಿನಗಳ ವಿಜೃಂಭಣೆಯ ಸಮಾರೋಪ (ಗ್ರ್ಯಾಂಡ್ ಫಿನಾಲೆ) ಸಮಾರಂಭದಲ್ಲಿ ಒಟ್ಟು 6 ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಂದ ಸಂಗ್ರಹಿಸಿದ ಮಣ್ಣು ಮತ್ತು ಅಕ್ಕಿಯನ್ನು ಹೊತ್ತು ತಂದ 7,000 ಬ್ಲಾಕ್ ಗಳ 20,000 ಕ್ಕೂ ಹೆಚ್ಚು ಸ್ವಯಂಸೇವಕರಿಂದ ಒಂದು ಭಾರತ ಶ್ರೇಷ್ಠ ಭಾರತ (ಏಕ್ ಭಾರತ್ ಶ್ರೇಷ್ಠ್ ಭಾರತ್) ಪರಿಕಲ್ಪನೆಯ ಉತ್ಸಾಹವು ಪ್ರತಿಧ್ವನಿಸಿತು. ಭಾಗವಹಿಸಿದ ಸ್ವಯಂಸೇವಕರಲ್ಲಿ ಅನೇಕರು ತಮ್ಮ ತಮ್ಮ ರಾಜ್ಯಗಳ ಸಾಂಪ್ರದಾಯಿಕ ನಿಲುವಂಗಿಯನ್ನು ಧರಿಸಿ, ಕೈಯಲ್ಲಿ ಕಲಶದೊಂದಿಗೆ ಮೆರವಣಿಗೆ ನಡೆಸಿದರು.

‘ನನ್ನ ಮಣ್ಣು ನನ್ನ ದೇಶ’ ಅಭಿಯಾನ

‘ನನ್ನ ಮಣ್ಣು ನನ್ನ ದೇಶ (ಮೇರಿ ಮಾಟಿ, ಮೇರಾ ದೇಶ)’ ಅಭಿಯಾನವು ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ಧೈರ್ಯಶಾಲಿ ವೀರರು ಮತ್ತು ವೀರಾಂಗನೆಯರಿಗೆ ಸಲ್ಲುವ ಗೌರವವಾಗಿದೆ. ಆಗಸ್ಟ್ 9, 2023 ರಂದು ಆಗಸ್ಟ್ ಕ್ರಾಂತಿ ದಿವಸದಂದು ಪ್ರಾರಂಭಿಸಲಾದ ಈ ಅಭಿಯಾನವು ವೀರರುಗಳ ಹೆಸರನ್ನು ಕೆತ್ತಿರುವ ಶಿಲಾಫಲಕಗಳ ಸಮರ್ಪಣೆಯಂತಹ ವಿವಿಧ ಚಟುವಟಿಕೆಗಳನ್ನು ಕೂಡಾ ಒಳಗೊಂಡಿದೆ. ಈ ವೀರರಲ್ಲಿ, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಸಿಬ್ಬಂದಿ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ ಮತ್ತು ಕರ್ತವ್ಯದ ಅವಧಿಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ರಾಜ್ಯ ಪೊಲೀಸರು ಸೇರಿದ್ದಾರೆ. ಈ ಕಾರ್ಯಕ್ರಮದ ಇತರ ಚಟುವಟಿಕೆಗಳಲ್ಲಿ ಪಂಚಪ್ರಾಣ ಪ್ರತಿಜ್ಞೆ ತೆಗೆದುಕೊಳ್ಳುವುದು, ಸ್ಥಳೀಯ ಜಾತಿಯ ಸಸಿಗಳನ್ನು ನೆಡುವ ಮೂಲಕ ಅಮೃತವಾಟಿಕಗಳನ್ನು ನಿರ್ಮಿಸುವುದು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮರಣ ಹೊಂದಿದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ವೀರರ ವಂದನೆ(ವೀರೋಂಕವಂದನ), ಸನ್ಮಾನ ಮತ್ತು ಗೌರವ ಸಲ್ಲಿಸುವುದು ಮುಂತಾದ ಚಟುವಟಿಕೆಗಳು ಸೇರಿದೆ.

ದೇಶದಾದ್ಯಂತ, 36 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 2.3 ಲಕ್ಷಕ್ಕೂ ಹೆಚ್ಚು ಶಿಲಾಫಲಕಗಳನ್ನು ನಿರ್ಮಿಸುವುದರೊಂದಿಗೆ ಅಭಿಯಾನವು ದೇಶವ್ಯಾಪ್ತಿ ಸಾಮೂಹಿಕ ಆಂದೋಲನವಾಯಿತು. ಸುಮಾರು 4 ಕೋಟಿ ಪಂಚಪ್ರಾಣ್ ಪ್ರತಿಜ್ಞೆ ಸೆಲ್ಫಿಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ; ಜತೆಗೆ ರಾಷ್ಟ್ರವ್ಯಾಪಿ 2 ಲಕ್ಷ ‘ವೀರರವಂದನೆ (ವೀರೋಂಕವಂದನ)’ ಕಾರ್ಯಕ್ರಮಗಳು; 2.36 ಕೋಟಿಗೂ ಹೆಚ್ಚು ಸ್ಥಳೀಯ ಸಸಿಗಳನ್ನು ನೆಡಲಾಗಿದೆ; ಮತ್ತು ವಸುಧಾ ವಂದನ್ ಪರಿಕಲ್ಪನೆಯಡಿಯಲ್ಲಿ ದೇಶಾದ್ಯಂತ 2.63 ಲಕ್ಷ ಅಮೃತವಾಟಿಕಾಗಳನ್ನು ರಚಿಸಲಾಯಿತು.

ಜನ ಭಾಗಿದಾರಿಯ ಉತ್ಸಾಹದಲ್ಲಿ, ದೇಶದಾದ್ಯಂತ ಪಂಚಾಯತ್/ ಗ್ರಾಮ, ಬ್ಲಾಕ್, ನಗರ ಸ್ಥಳೀಯ ಸಂಸ್ಥೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕ ಚಟುವಟಿಕೆಗಳು ಮತ್ತು ಸಮಾರಂಭಗಳನ್ನು ನಡೆಸಲಾಯಿತು.

ಇದನ್ನೂ ಓದಿ: Narendra Modi: 6G ತಂತ್ರಜ್ಞಾನದಲ್ಲಿ ಭಾರತ ಜಗತ್ತನ್ನೇ ಆಳಲಿದೆ; ಮೋದಿ ವಿಶ್ವಾಸ

‘ನನ್ನ ಮಣ್ಣು ನನ್ನ ದೇಶ(ಮೇರಿ ಮಾಟಿ ಮೇರಾ ದೇಶ)’ ಅಭಿಯಾನವು ವಿಶೇಷವಾದ ಅಮೃತ್ ಕಲಶ ಯಾತ್ರೆಯನ್ನೂ ಒಳಗೊಂಡಿತ್ತು, ಇದು ಭಾರತದಾದ್ಯಂತ ಮಣ್ಣನ್ನು ರಾಷ್ಟ್ರ ರಾಜಧಾನಿಗೆ ಹೊತ್ತು ತಂದಿರುವ ವಿಶೇಷ ಕಲಶವಾಗಿದೆ. ದೇಶದ ಪ್ರತಿಯೊಂದು ಭಾಗದಿಂದ ಸಂಗ್ರಹಿಸಿದ ಮಣ್ಣಿನಿಂದ ನವದೆಹಲಿಯ ಅಮೃತವಾಟಿಕವನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ನಿರ್ಮಿಸಲಾಗುವುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version