ನ್ಯೂಯಾರ್ಕ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ ಯೋಗ ಕಾರ್ಯಕ್ರಮದ ನೇತೃತ್ವ ವಹಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ (PM Modi US Visit) ಅವರು ಇತಿಹಾಸ ಸೃಷ್ಟಿಸಿದ್ದಾರೆ. ದೇಶದ ಇತಿಹಾಸದಲ್ಲೇ ವಿಶ್ವಸಂಸ್ಥೆಯ ಯೋಗ ಕಾರ್ಯಕ್ರಮದ ನೇತೃತ್ವ ವಹಿಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.
ನರೇಂದ್ರ ಮೋದಿ ಅವರು ನಡೆಸಿಕೊಟ್ಟ ಯೋಗ ಕಾರ್ಯಕ್ರಮದಲ್ಲಿ 180 ದೇಶಗಳ ಗಣ್ಯರು ಭಾಗಿಯಾಗಿದ್ದು ಐತಿಹಾಸಿಕ ಎನಿಸಿತು. ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷರು ಸೇರಿ ಹಲವು ಗಣ್ಯರು ಕೂಡ ಯೋಗಾಭ್ಯಾಸ ಮಾಡಿದರು.
ಇನ್ನು ಮೋದಿ ಅವರು 2014ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಯೋಗದ ಮಹತ್ವ ಸಾರಿ, ಇದಾದ ಬಳಿಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಸ್ತಾಪ ಮಾಡಿದ ಕುರಿತು, ನಂತರ ಯೋಗವು ವಿಶ್ವವನ್ನೇ ಪಸರಿಸುವಂತೆ ಮಾಡಿರುವುದು ಸೇರಿ ಹಲವು ವಿಷಯಗಳನ್ನು ಅಮೆರಿಕ ನೆನೆಯಿತು.
ಕಾರ್ಯಕ್ರಮಕ್ಕೆ ಪ್ರಧಾನಿ ಆಗಮಿಸಿದ್ದು ಹೀಗೆ
#WATCH | PM Narendra Modi at the UN Headquarters lawns in New York, to lead the Yoga event on the occasion of #9thInternationalYogaDay pic.twitter.com/1kwsr6OnJq
— ANI (@ANI) June 21, 2023
ಇದನ್ನೂ ಓದಿ: PM Modi US Visit: ಮೋದಿ ಭೇಟಿ ಬಳಿಕ ʼಭಾರತೀಯನಾಗಿದ್ದಕ್ಕೆ ಹೆಮ್ಮೆ ಎನಿಸಿತು…ʼ ಎಂದ ಅಮೆರಿಕ ತಜ್ಞರು
ಇದಕ್ಕೂ ಮೊದಲು ಮಾತನಾಡಿದ ಮೋದಿ, “ಯೋಗವು ಆರೋಗ್ಯದ ಗುಟ್ಟಾಗಿದ್ದು, ಯೋಗವು ಎಲ್ಲರಿಗೂ ಮುಕ್ತವಾಗದೆ. ಯೋಗಕ್ಕೆ ಯಾವುದೇ ಪೇಟೆಂಟ್ ಇಲ್ಲ. ಯೋಗವನ್ನು ಯಾರು ಬೇಕಾದರೂ ಮಾಡಬಹುದು. ಇದರಿಂದ ದೇಹವು ಆರೋಗ್ಯದಿಂದ ಇರುವ ಜತೆಗೆ ಮನಸ್ಸು ಯಾವಾಗಲೂ ಉಲ್ಲಾಸದಿಂದ ಇರುತ್ತದೆ. ಹಾಗಾಗಿ, ಯೋಗ ಎಂದರೆ ಒಗ್ಗಟ್ಟು, ಯೋಗ ಎಂದರೆ ಜೀವನ ಶೈಲಿ, ಯೋಗ ಎಂದರೆ ಆರೋಗ್ಯ, ಯೋಗ ಎಂದರೆ ಶಾಂತಿ” ಎಂದು ಯೋಗದ ಮಹತ್ವ ಸಾರಿದರು.
ಗಾಂಧೀಜಿ ಪ್ರತಿಮೆಗೆ ನಮನ
ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗಾಭ್ಯಾಸಕ್ಕೂ ಮುನ್ನ ಕೇಂದ್ರ ಕಚೇರಿ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿಗೆ ನಮನ ಸಲ್ಲಿಸಿದರು. ಪುಷ್ಪನಮನದ ಮೂಲಕ ಭಾರತದ ಪಿತಾಮಹನಿಗೆ ಮೋದಿ ಗೌರವ ಸಲ್ಲಿಸಿದರು.