Site icon Vistara News

PM Narendra Modi: ಬುಲ್ಡೋಜರ್‌ ಹೇಗೆ ಬಳಸಬೇಕೆಂಬುದನ್ನು ಯೋಗಿಯಿಂದ ಕಲಿಯಬೇಕು: ಪ್ರಧಾನಿ ಮೋದಿ

PM Narendra Modi

ನವದೆಹಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌(Yogi Adityanath) ಬುಲ್ಡೋಜರ್‌ ಬಾಬಾ ಎಂದೇ ಜನಪ್ರಿಯರಾದವರು. ಕೊಲೆ ದರೋಡೆ, ಅತ್ಯಾಚಾರ, ಗೂಂಡಾಗಿರಿ ಮಾಡುವವರಿಗೆ ಬಿಸಿ ಮುಟ್ಟಿಸಲು ಅವರ ಮನೆಗಳನ್ನೇ ಬುಲ್ಡೋಜರ್‌ ಮೂಲಕ ನೆಲಸಮ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದವರು. ಇದೀಗ ಈ ಬುಲ್ಡೋಜರ್‌ ನೀತಿ ಬಗ್ಗೆ ನರೇಂದ್ರ ಮೋದಿ(PM Narendra Modi) ಸಾರ್ವಜನಿಕ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್‌(Congress) ಮತ್ತು ಸಮಾಜವಾದಿ ಪಕ್ಷ(Samajwadi Party) ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್‌ ಚಲಾಯಿಸುತ್ತಾರೆ. ಅವರು ಬುಲ್ಡೋಜರ್‌ ಅನ್ನು ಎಲ್ಲಿ ಬಳಸಬೇಕು ಎಂಬುದನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಅವರಿಂದ ಕಲಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಇಂಡಿಯಾ(INDIA bloc) ವಿರುದ್ಧ ಹರಿಹಾಯ್ದಿದ್ದಾರೆ.

ಉತ್ತರಪ್ರದೇಶದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಮಲಲ್ಲಾ ಮತ್ತೆ ಟೆಂಟ್‌ನಲ್ಲಿ ಕೂರಬೇಕಾದೀತು. ಏಕೆಂದರೆ ಅವರು ಬುಲ್ಡೋಜರ್‌ ಮೂಲಕ ರಾಮಮಂದಿರವನ್ನು ಕೆಡವುತ್ತಾರೆ. ಬುಲ್ಡೋಜರ್‌ ಅನ್ನು ಎಲ್ಲಿ ಬಳಸಬೇಕು ಅಥವಾ ಎಲ್ಲಿ ಬಳಸಬಾರದು ಎಂಬುದನ್ನು ಯೋಗಿಯಿಂದ ಕಲಿಯಬೇಕು. ಒಂದೆಡೆ ದೇಶದ ಪ್ರಗತಿಗಾಗಿ ಎನ್‌ಡಿಎ ಶ್ರಮಿಸುತ್ತಿದೆ. ಮತ್ತೊಂದೆಡೆ ಇಂಡಿಯಾ ಒಕ್ಕೂಟ ದೇಶದಲ್ಲಿ ಅಶಾಂತಿ ಹುಟ್ಟಿಸಲು ಯತ್ನಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಸಮಾಜವಾದಿ ಪಕ್ಷದ ರಾಜಕುಮಾರ ಅಖಿಲೇಶ್‌ ಯಾದವ್‌ ಹೊಸ ಆಂಟಿಯ(ಮಮತಾ ಬ್ಯಾನರ್ಜಿ) ಆಶ್ರಯ ಪಡೆಯುತ್ತಿದ್ದಾರೆ. ಆ ಆಂಟಿ ಬಂಗಾಳದಲ್ಲಿದ್ದಾರೆ. ಅವರು ಮಾತ್ರ ತಾವು ನೇರವಾಗಿ ಇಂಡಿಯಾ ಒಕ್ಕೂಟಕ್ಕೆ ಬೆಂಬಲ ಕೊಡುವುದಿಲ್ಲ. ಬಾಹ್ಯ ಬೆಂಬಲ ಸೂಚಿಸುತ್ತೇನೆ ಅಂದಿದ್ದಾರೆ.

ಇದನ್ನೂ ಓದಿ:DK Shivakumar: ಉತ್ತರ ಪ್ರದೇಶದಲ್ಲಿ ಡಿಕೆಶಿ; ಅಮೇಥಿ, ರಾಯ್‌ ಬರೇಲಿಯಲ್ಲಿ ಮಾಡ್ತಾರಾ ಕಮಾಲ್?

ಪ್ರಧಾನಿ ಮೋದಿ ಕಳೆದೆರಡು ಬಾರಿಯಂತೆ ಈ ಬಾರಿ ಮೊದಲ 100 ದಿನಗಳ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಯುವಕರನ್ನು ಗುರಿಯಾಗಿಸಿಯೇ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಇದನ್ನು ಹೆಚ್ಚುವರಿ 25 ದಿನಗಳವರೆಗೆ ವಿಸ್ತರಿಸಲಾಗುತ್ತದೆ. ಈ 125 ದಿನಗಳವರೆಗೆ ಮೊದಲ ಬಾರಿಗೆ ಮತದಾನ ಮಾಡಿದವರು, ಯುವಜನತೆಯನ್ನು ಗುರಿಯಾಗಿಸಿ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕನಸಿನ ಯೋಜನೆಯಾಗಿರುವ ವಿಕ್ಷಿತ್‌ ಭಾರತ್‌ಗೆ ಯುವಕರು ತಮ್ಮ ಹೊಸ ಐಡಿಯಾಗಳ ಮೂಲಕ ಕೊಡುಗೆ ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.


Exit mobile version