Site icon Vistara News

PM Narendra Modi: ತಿರಂಗಾ ತುಳಿಯದೆ ಎತ್ತಿ ಗೌರವಿಸಿದ ಮೋದಿ; ಚೀನಾ ಧ್ವಜ ತುಳಿದ ಕ್ಸಿ ಜಿನ್‌ಪಿಂಗ್!‌

pm narendra modi in brics

ಜೊಹಾನ್ಸ್‌ಬರ್ಗ್‌: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಭಾರತದ ರಾಷ್ಟ್ರಧ್ವಜದ (tricolor) ಮೇಲೆ ಕಾಲಿಡದಂತೆ ಜಾಗರೂಕತೆ ವಹಿಸಿದ ಘಟನೆ ಬ್ರಿಕ್ಸ್‌ ಶೃಂಗಸಭೆಯಲ್ಲಿ (BRICS Summit 2023) ನಡೆಯಿತು. ಇದೇ ಸಂದರ್ಭದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi jinping) ತಮ್ಮ ರಾಷ್ಟ್ರಧ್ವಜದ ಮೇಲೆ ಹೆಜ್ಜೆ ಹಾಕಿದ ಘಟನೆಯೂ ನಡೆಯಿತು!

ದಕ್ಷಿಣ ಆಫ್ರಿಕಾದ (south Africa) ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ರಾಷ್ಟ್ರ ಮುಖ್ಯಸ್ಥರ ಗುಂಪು ಛಾಯಾಚಿತ್ರ ತೆಗೆಯುವ ವೇಳೆ ಹೀಗಾಗಿದೆ. ರಾಷ್ಟ್ರ ಪ್ರಮುಖರು ಗುಂಪು ಫೋಟೋಗೆ ನಿಲ್ಲಬೇಕಾದ ವೇದಿಕೆಯಲ್ಲಿ, ಅವರು ನಿಲ್ಲುವ ಜಾಗಗಳನ್ನು ಸೂಚಿಸಲು ನೆಲದಲ್ಲಿ ಪುಟ್ಟ ರಾಷ್ಟ್ರಧ್ವಜಗಳನ್ನು ಅಂಟಿಸಲಾಗಿತ್ತು. ಭಾರತ, ಚೀನಾ, ದಕ್ಷಿಣ ಆಫ್ರಿಕ, ರಷ್ಯಾ ಹಾಗೂ ಬ್ರೆಜಿಲ್‌ನ ರಾಷ್ಟ್ರ ನಾಯಕರು ಇಲ್ಲಿ ನಿಲ್ಲಬೇಕಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಈ ಜಾಗಕ್ಕೆ ಬರುತ್ತಿದ್ದಂತೆ ಈ ರಾಷ್ಟ್ರಧ್ವಜವನ್ನು ಗಮನಿಸಿ ಅದನ್ನು ನೆಲದಿಂದ ಎತ್ತಿಕೊಂಡು ಜೇಬಿಗೆ ಇಳಿಬಿಟ್ಟುಕೊಂಡರು. ಅವರನ್ನು ನೋಡಿದ ದಕ್ಷಿಣ ಆಫ್ರಿಕ ಅಧ್ಯಕ್ಷ ಸಿರಿಲ್‌ ರಾಮಫೊಸ ಕೂಡ ಹಾಗೇ ಮಾಡಿದರು. ಆದರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮಾತ್ರ ಹಾಗೇನೂ ಮಾಡದೆ ತಮ್ಮ ಧ್ವಜವಿದ್ದಲ್ಲಿ ಅದನ್ನು ತುಳಿದುಕೊಂಡೇ ಹೋಗಿ ನಿಂತರು.

ರಾಷ್ಟ್ರಧ್ವಜದ ಕುರಿತ ಮೋದಿಯವರ ಗೌರವದ ವರ್ತನೆ ಇದೀಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಸೋಶಿಯಲ್‌ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಈ ವರ್ಷ ಬ್ರಿಕ್ಸ್‌ ಆತಿಥ್ಯವನ್ನು ದಕ್ಷಿಣ ಆಫ್ರಿಕಾ ವಹಿಸಿದ್ದು, ಅಲ್ಲಿನ ರಾಜಧಾನಿ ಜೊಹಾನ್ಸ್‌ಬರ್ಗ್‌ನಲ್ಲಿ ಸಭೆ ನಡೆಯುತ್ತಿದೆ.

ಇದನ್ನೂ ಓದಿ: BRICS Summit 2023: ಶೀಘ್ರವೇ 5 ಲಕ್ಷ ಕೋಟಿ ಡಾಲರ್ ಆರ್ಥಿಕ ರಾಷ್ಟ್ರವಾಗಲಿದೆ ಭಾರತ ಎಂದ ಪ್ರಧಾನಿ ಮೋದಿ

Exit mobile version