Site icon Vistara News

PM Narendra Modi: ಈ ಸಲ ಮೋದಿಗೆ ನಾನೇ ತಯಾರಿಸಿದ ರಾಖಿ ಕಟ್ಟುವೆ‌ ಎಂದ ಪಾಕಿಸ್ತಾನದ ಸಹೋದರಿ ಶೇಖ್

Qamar Mohsin Sheikh

ಹೊಸದಿಲ್ಲಿ: ಕಳೆದ 30 ವರ್ಷಗಳಿಂದ ಪ್ರತಿ ವರ್ಷ ರಕ್ಷಾಬಂಧನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ಪಾಕಿಸ್ತಾನದಿಂದ ರಾಖಿ ಕಳುಹಿಸುತ್ತಿರುವ ಮಹಿಳೆ, ಈ ವರ್ಷ ಅವರಿಗೆ ರಾಖಿ ಕಟ್ಟಲು (Raksha Bandhan) ಸ್ವತಃ ತಾವೇ ಆಗಮಿಸುತ್ತಿದ್ದಾರಂತೆ. ಜತೆಗೆ ತಾವೇ ತಯಾರಿಸಿದ ರಾಖಿಯನ್ನು ತರುತ್ತಿದ್ದಾರೆ.

ನರೇಂದ್ರ ಮೋದಿ ಅವರ ರಾಖಿ ಸಹೋದರಿ (Rakhi sister) ಎಂದು ಕರೆಯಲ್ಪಡುವ ಪಾಕಿಸ್ತಾನ ಮೂಲದ ಮಹಿಳೆ ಕಮರ್ ಮೊಹ್ಸಿನ್ ಶೇಖ್ (Qamar Mohsin Sheikh) ಅವರು ನವದೆಹಲಿಗೆ ಭೇಟಿ ನೀಡಲಿದ್ದಾರೆ. “ಈ ಬಾರಿ ನಾನೇ ರಾಖಿಯನ್ನು ತಯಾರಿಸಿದ್ದೇನೆ. ನಾನು ಅವರಿಗೆ ಕೃಷಿ ಸಂಬಂಧಿತ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡುತ್ತೇನೆ. ಏಕೆಂದರೆ ಅವರು ಓದನ್ನು ತುಂಬ ಇಷ್ಟಪಡುತ್ತಾರೆ. ಕಳೆದ ಎರಡು-ಮೂರು ವರ್ಷಗಳಿಂದ, ಕೋವಿಡ್‌ನಿಂದಾಗಿ ನಾನು ಅವರಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ನಾನು ಅವರನ್ನು ಖುದ್ದಾಗಿ ಭೇಟಿಯಾಗುತ್ತೇನೆ” ಎಂದು ಶೇಖ್ ತಿಳಿಸಿದ್ದಾರೆ.

Qamar Mohsin Sheikh rakhi sister

“ನಾನು ಅವರಿಗಾಗಿ ವಿಶೇಷವಾಗಿ ಕೆಂಪು ಬಣ್ಣದ ರಾಖಿಯನ್ನು ತಯಾರಿಸಿದ್ದೇನೆ. ಕೆಂಪು ಬಣ್ಣವನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮೊದಲು, ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಬೇಕೆಂದು ನಾನು ಪ್ರಾರ್ಥಿಸಿದ್ದೆ. ಅವರು ಸಿಎಂ ಆದರು. ನಾನು ರಾಖಿ ಕಟ್ಟಿದಾಗಲೆಲ್ಲ ಅವರು ಪ್ರಧಾನಿಯಾಗಬೇಕು ಎಂಬ ಆಸೆಯನ್ನು ವ್ಯಕ್ತಪಡಿಸುತ್ತಿದ್ದೆ. ಅವರ ಪ್ರತಿಕ್ರಿಯೆ ಯಾವಾಗಲೂ ಸಕಾರಾತ್ಮಕವಾಗಿರುತ್ತಿತ್ತು. ನಮ್ಮ ಎಲ್ಲಾ ಆಸೆಗಳನ್ನು ದೇವರು ಪೂರೈಸುತ್ತಾನೆ. ಈಗ ಅವರು ಪ್ರಧಾನಿಯಾಗಿ ದೇಶಕ್ಕಾಗಿ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ” ಎಂದಿದ್ದಾರೆ ಶೇಖ್.‌

ಕಳೆದ ವರ್ಷ ಪ್ರಧಾನಿಯವರಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ಕಳುಹಿಸಿದಾಗ, ಈ ವರ್ಷ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಎಂದಿದ್ದರು. 2024ರ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡುತ್ತಾ, “ಅವರು ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಅದಕ್ಕೆ ಅರ್ಹರು ಮತ್ತು ಆ ಸಾಮರ್ಥ್ಯವನ್ನು ಹೊಂದಿದ್ದಾರೆ. ಪ್ರತಿ ಬಾರಿಯೂ ಅವರು ಭಾರತದ ಪ್ರಧಾನಿಯಾಗಬೇಕೆಂದು ನಾನು ಬಯಸುತ್ತೇನೆ” ಎಂದರು.

ರಕ್ಷಾ ಬಂಧನದ ಶುಭ ಸಂದರ್ಭ ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾರೆ. ಅವರ ಸಂತಸ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಈ ಹಬ್ಬವನ್ನು ಶ್ರಾವಣ ತಿಂಗಳ ಕೊನೆಯ ದಿನ ಆಚರಿಸಲಾಗುತ್ತದೆ.

ಇದನ್ನೂ ಓದಿ: PM Narendra Modi: ರಿಕಿ ಕೇಜ್‌ ರಾಷ್ಟ್ರಗೀತೆ ವಾದ್ಯಮೇಳಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

Exit mobile version