Site icon Vistara News

PM Narendra Modi: “ದೇವರೇ ನಿಮ್ಮನ್ನು ಆಯ್ಕೆ ಮಾಡಿದ್ದಾನೆ”- ಅಮೆರಿಕನ್ ಗಾಯಕಿ ಮೇರಿ ಮಿಲ್ಬೆನ್ ಅಭಿನಂದನೆ

PM Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಹ್ಯಾಟ್ರಿಕ್‌ ಗೆಲುವಿಗೆ ದೇಶ ವಿದೇಶಗಳಿಂದ ಅಭಿನಂದನೆ ಮಹಾಪೂರ ಹರಿದುಬರುತ್ತಿದೆ. ದೇಶ ವಿದೇಶದ ಗಣ್ಯರು ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ಅಮೆರಿಕದ ಖ್ಯಾತ ಗಾಯಕಿ, ನಟಿ ಮೇರಿ ಮಿಲ್ಬೆನ್(Mary Millben) ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ನಿಮ್ಮನ್ನು ಜನರು ಮಾತ್ರವಲ್ಲ, ದೇವರೂ ಆಯ್ಕೆ ಮಾಡಿದ್ದಾರೆ ಎಂದು ನಟಿ ಮೇರಿ ಮಿಲ್ಬೆನ್ ಅಭಿನಂದನಾ ಸಂದೇಶ ಕಳುಹಿಸಿದ್ದಾರೆ.

ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಶೇರ್‌ ಮಾಡಿರುವ ಮಿಲ್ಬೆನ್‌, ‘ನವ ಭಾರತ’ವನ್ನು ತರಲು ದೇವರ ರಾಯಭಾರಿ ಮತ್ತು ಜನರ ಧ್ವನಿಯಾಗಬೇಕೆಂದು ಅವರು ಟ್ವೀಟ್ ಮೂಲಕ ಪೋಸ್ಟ್ ಮಾಡಿದ್ದಾರೆ. ನನ್ನ ಪ್ರೀತಿಯ ಭಾರತ, ನಮಸ್ತೆ. ಇಂದು ಭಾರತ ಮತ್ತು ವಿಶ್ವಕ್ಕೆ ಐತಿಹಾಸಿಕ ದಿನವಾಗಿದೆ. ನನ್ನ ಸ್ನೇಹಿತ, ಗೌರವಾನ್ವಿತ ಪ್ರಧಾನ ಮಂತ್ರಿಗಳ ಮರು ಆಯ್ಕೆ ಮತ್ತು ನವ ಭಾರತದ ಉದಯ. ಪ್ರಧಾನಿ ಮೋದಿ, ನಿಮ್ಮ ಪುನರಾಯ್ಕೆಗಾಗಿ ನಿಮ್ಮನ್ನು ಅಭಿನಂದಿಸುವ ಅಮೆರಿಕದಿಂದ ಮೊದಲಿಗರಲ್ಲಿ ನಾನೂ ಒಬ್ಬಳಾಗುತ್ತೇನೆ. ನಾನು ನಿಮಗಾಗಿ ತುಂಬಾ ಸಂತೋಷಪಡುತ್ತೇನೆ. ನೀವು ಭಾರತಕ್ಕೆ ಆಯ್ಕೆ ಮಾಡಿದ ನಾಯಕ, ದೇವರು ಮತ್ತು ಮತ್ತೆ ಭಾರತದ ಜನರು. ನಿಮ್ಮ ದೀರ್ಘಾಯುಷ್ಯವನ್ನು ಪ್ರಶ್ನಿಸಿದ ಮತ್ತು ನಮಗೆಲ್ಲರಿಗೂ ಸತ್ಯವೆಂದು ತಿಳಿದಿರುವುದನ್ನು ಪ್ರಪಂಚದಾದ್ಯಂತ ದೃಢಪಡಿಸಿದ ಪಾಶ್ಚಿಮಾತ್ಯರು ತಪ್ಪು ಎಂದು ಸಾಬೀತುಪಡಿಸಿದ್ದೀರಿ – ನೀವು ಭಾರತಕ್ಕೆ, ಯುಎಸ್-ಭಾರತ ಸಂಬಂಧಕ್ಕೆ ಮತ್ತು ವಿಶ್ವದ ಸ್ಥಿರತೆಗೆ ಅತ್ಯುತ್ತಮ ನಾಯಕ. ಎಂದು ಅವರು ಟ್ವೀಟ್ ಮೂಲಕ ಪೋಸ್ಟ್ ಮಾಡಿದ್ದಾರೆ

ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. 290 ಸ್ಥಾನಗಳ ಮೂಲಕ ಬಿಜೆಪಿ ನೇತೃತ್ವ ಎನ್‌ಡಿಎ ಸರ್ಕಾರ ಮೂರನೇ ಬಾರಿ ಗದ್ದುಗೆ ಏರಲು ಸಜ್ಜಾಗಿದೆ. ಇನ್ನು ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶ್ವದ ಹಲವು ನಾಯಕರಿಂದ ಅಭಿನಂದನೆ ಮಹಾಪೂರಗಳು ಹರಿದುಬಂದಿವೆ. ಮಾಲ್ಡೀವಿಯನ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮತ್ತು ಇಟಾಲಿಯನ್ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ ಸೇರಿದಂತೆ ನೆರೆಯ ರಾಷ್ಟ್ರಗಳಾದ ಭೂತಾನ್‌, ನೇಪಾಳಗಳಿಂದ ನಾಯಕರು ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

Bangalore Central Election Result 2024 : ಪಿ.ಸಿ ಮೋಹನ್​ ಮರ್ಯಾದೆ ಉಳಿಸಿದ ಮಹದೇವರಪುರ ಕ್ಷೇತ್ರ!

Exit mobile version