Site icon Vistara News

PM Narendra Modi: WHO ಅಧ್ಯಕ್ಷರಿಂದ ಶುಭಾಶಯ; ಥ್ಯಾಂಕ್ಸ್‌ ʼತುಳಸಿ ಭಾಯ್‌ʼ ಎಂದ ಮೋದಿ-ಭಾರೀ ಕುತೂಹಲಕ್ಕೆ ಕಾರಣವಾಯ್ತು ಟ್ವೀಟ್‌

PM Narendra Modi

ನವದೆಹಲಿ: ಮೂರನೇ ಬಾರಿ ಪ್ರಧಾನಿಯಾಗಿ ಚುನಾಯಿತರಾಗಿರುವ ನರೇಂದ್ರ ಮೋದಿ(PM Narendra Modi) ಯವರಿಗೆ ದೇಶ ವಿದೇಶಗಳ ನಾಯಕರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ(WHO) ಮುಖ್ಯಸ್ಥರೂ ಪ್ರಧಾನಿ ನರೇಂದ್ರ ಮೋದಿಗೆ ಹ್ಯಾಟ್ರಿಕ್‌ ಗೆಲುವಿಗೆ ಶುಭಾಶಯ ಕೋರಿದ್ದು, ಅದಕ್ಕೆ ಮೋದಿಯ ಪ್ರತಿಕ್ರಿಯೆ ದೇಶದ ಗಮನ ಸೆಳೆದಿದೆ. WHO ಅಧ್ಯಕ್ಷ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್(Tedros Adhanom Ghebreyesus) ಎಕ್ಸ್‌ನಲ್ಲಿ ಮೋದಿಗೆ ಶುಭಾಶಯ ಕೋರಿದ್ದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ, ನನ್ನ ಪ್ರೀತಿಯ ಸ್ನೇಹಿತ ತುಳಸೀ ಭಾಯಿಗೆ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ. ಇದೀಗ ಈ ತುಳಸೀ ಭಾಯ್‌ ಎಂಬ ಪದ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಟೆಡ್ರೊಸ್ ಟ್ವೀಟ್‌ನಲ್ಲಿ ಏನಿತ್ತು?

“ನಿಮ್ಮ ಮರು ಆಯ್ಕೆಗೆ ಅಭಿನಂದನೆಗಳು ಪ್ರಧಾನ ಮಂತ್ರಿ @narendramodi. #HealthForAll ಗೆ @WHO-#ಭಾರತದ ನಿಕಟ ಸಹಯೋಗವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ, ತಮ್ಮ ಸ್ನೇಹಿತ “ತುಳಸಿ ಭಾಯಿ” ಅವರಿಗೆ ಧನ್ಯವಾದ ಅರ್ಪಿಸಿದರು. “ಧನ್ಯವಾದಗಳು ನನ್ನ ಸ್ನೇಹಿತೆ ತುಳಸಿ ಭಾಯ್! WHO ನೊಂದಿಗೆ ಭಾರತದ ಸಹಕಾರವು ‘ಒಂದು ಭೂಮಿ ಒಂದು ಆರೋಗ್ಯ’ದ ಪರಿಕಲ್ಪನೆಯನ್ನು ಉತ್ತೇಜಿಸುತ್ತದೆ. ಭಾರತದಲ್ಲಿನ ಮೊದಲ WHO ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ ಬಗೆಗಿನ ನಮ್ಮ ಜಂಟಿ ಪ್ರಯತ್ನ ಹೀಗೆ ಸಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.

ʼತುಳಸೀ ಭಾಯಿʼ ಹೆಸರೇಕೆ ಇಲ್ಲಿ ಬಂತು?

ಪ್ರಧಾನಿ ಮೋದಿ ತಾವು ಟೆಡ್ರೊಸ್ ಸಂದೇಶಕ್ಕೆ ಪ್ರತಿಯಾಗಿ ಕಳುಹಿಸಿದ ಟ್ವೀಟ್‌ನಲ್ಲಿ ತುಳಸೀ ಭಾಯ್‌ ಎಂದು ಉಲ್ಲೇಖಿಸಿದ್ದಾರೆ. ಇದು ಎಲ್ಲರ ಗಮನ ಸೆಳೆದಿದ್ದು, ಇದರ ಬಗ್ಗೆ ಕುತೂಹಲ ಎಲ್ಲರಲ್ಲೂ ಇದೆ. ಇದರ ಅಸಲಿ ಕಥೆ ಇಲ್ಲಿದೆ ನೋಡಿ. ಎರಡು ವರ್ಷಗಳ ಹಿಂದೆ ಅಂದರೆ 2022ರಲ್ಲಿ ಗುಜರಾತ್‌ನಲ್ಲಿ ನಡೆದ ಮೂರು ದಿನಗಳ ಜಾಗತಿಕ ಆಯುಷ್‌ ಹೂಡಿಕೆ ಮತ್ತು ಆವಿಷ್ಕಾರ ಶೃಂಗಸಭೆಯಲ್ಲಿ ಟೆಡ್ರೊಸ್ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನೂ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಟೆಡ್ರೊಸ್ ತಮಗೂ ಒಂದು ಗುಜರಾತ್‌ ಹೆಸರನ್ನು ಇಡುವಂತೆ ಮೋದಿಯನ್ನು ಕೇಳಿಕೊಂಡಿದ್ದರು. ಆಗ ಮೋದಿ ಟೆಡ್ರೊಸ್‌ಗೆ ತುಳಸೀ ಭಾಯಿ ಎಂದು ಹೆಸರಿಟ್ಟಿದ್ದರು.

“WHO ಡೈರೆಕ್ಟರ್-ಜನರಲ್ ಟೆಡ್ರೊಸ್ ನನ್ನ ಉತ್ತಮ ಸ್ನೇಹಿತ. ನನಗೆ ಭಾರತೀಯ ಶಿಕ್ಷಕರು ಕಲಿಸಿದರು ಮತ್ತು ಅವರ ಕಾರಣದಿಂದಾಗಿ ನಾನು ಇಲ್ಲಿದ್ದೇನೆ ಎಂದು ಅವರು ನನಗೆ ಯಾವಾಗಲೂ ಹೇಳುತ್ತಿದ್ದರು. ಅಲ್ಲದೇ ‘ನಾನು ಪಕ್ಕಾ ಗುಜರಾತಿಯಾಗಿದ್ದೇನೆ. ನೀವು ನನಗೆ ಒಂದು ಹೆಸರನ್ನು ಇಡಿ ಎಂದು ನನ್ನಲ್ಲಿ ಕೇಳಿದ್ದರು. ‘ ಆದ್ದರಿಂದ ನಾನು ಅವರನ್ನು ತುಳಸಿ ಭಾಯಿ ಎಂದು ಕರೆಯುತ್ತೇನೆ ಎಂದು ಪ್ರಧಾನಿ ಮೋದಿ ಈ ಹಿಂದೆ ಹೇಳಿದ್ದರು.

ಇದನ್ನೂ ಓದಿ:Election Results 2024: ಸಂಸದರಾಗಿ ಆಯ್ಕೆಯಾದ ಉತ್ತರ ಪ್ರದೇಶದ ಎಂಟು ಶಾಸಕರು; ಶೀಘ್ರ ಉಪಚುನಾವಣೆ

Exit mobile version