Site icon Vistara News

PM Narendra Modi: ಮೋದಿ ಜನಪ್ರಿಯತೆ ಮತ್ತೂ 10% ಹೆಚ್ಚಳ; ಜಾಗತಿಕ ನಾಯಕರ ಪಟ್ಟಿಯಲ್ಲಿ ಮೊದಲಿಗ

Narendra Modi

ಹೊಸದಿಲ್ಲಿ: ಜನಪ್ರಿಯ ಜಾಗತಿಕ ನಾಯಕರಲ್ಲಿ (Global Leaders) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೇ ಮೊದಲಿನ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕಳೆದ ಆರು ತಿಂಗಳಿಗೆ ಹೋಲಿಸಿದರೆ ಮೋದಿಯವರು ಇನ್ನೂ ಶೇ.10ರಷ್ಟು ಜನಪ್ರಿಯತೆ ಹೆಚ್ಚಿಸಿಕೊಂಡಿದ್ದು, 75 ಪ್ರತಿಶತದಷ್ಟು ಅನುಮೋದನೆ ರೇಟಿಂಗ್‌ ಹೊಂದಿ ಮೇಲಿದ್ದಾರೆ.

ಜನಪ್ರಿಯತೆಯ ಸಮೀಕ್ಷೆ ನಡೆಸಿ ಪಟ್ಟಿ ಮಾಡುವ ಸಂಸ್ಥೆ ಇಪ್ಸೋಸ್ ಇಂಡಿಯಾಬಸ್ (Ipsos IndiaBus) ಪ್ರಕಾರ, ಪ್ರಧಾನಿ ಮೋದಿ ಫೆಬ್ರವರಿ 2024ರಲ್ಲಿ ಶೇಕಡಾ 75ರಷ್ಟು ಅನುಮೋದನೆ ರೇಟಿಂಗ್ ಅನ್ನು
ಸಾಧಿಸಿದ್ದಾರೆ. ಈ ಹಿಂದೆ, ಸೆಪ್ಟೆಂಬರ್ 2023ರಲ್ಲಿ ಬಿಡುಗಡೆಯಾದ ಡೇಟಾದಲ್ಲಿ, ಪಿಎಂ ಮೋದಿ 65 ಪ್ರತಿಶತದಷ್ಟು ರೇಟಿಂಗ್ ಪಡೆದಿದ್ದರು. ಈ ಬಾರಿ ಅವರ ಅನುಮೋದನೆ ರೇಟಿಂಗ್ ಶೇಕಡಾ 10ರಷ್ಟು ಹೆಚ್ಚಾಗಿದೆ.

ಡಿಸೆಂಬರ್ 2022ರಿಂದ ಪಿಎಂ ಮೋದಿಯವರ ಅನುಮೋದನೆ ರೇಟಿಂಗ್ ಹೆಚ್ಚಾಗಿದೆ. 2022ರ ಡಿಸೆಂಬರ್‌ನಲ್ಲಿ ಪ್ರಧಾನಿಯ ರೇಟಿಂಗ್ ಶೇಕಡಾ 60ರಷ್ಟಿತ್ತು . ಫೆಬ್ರವರಿ 2023ರಲ್ಲಿ ರೇಟಿಂಗ್ ಶೇಕಡಾ 67ರಷ್ಟಿತ್ತು. ಸೆಪ್ಟೆಂಬರ್ 2023ರಲ್ಲಿ ಎರಡು ಪ್ರತಿಶತದಷ್ಟು ಕುಸಿದಿದೆ ಮತ್ತು 65 ಪ್ರತಿಶತದಷ್ಟು ರೇಟಿಂಗ್ ಪಡೆದಿದೆ. ಈಗ ಫೆಬ್ರವರಿ 2024ರಲ್ಲಿ ಮೋದಿ ರೇಟಿಂಗ್ ಮತ್ತೆ ಹೆಚ್ಚಾ ಗಿದೆ.

ಇತ್ತೀಚಿನ ಪ್ರಮುಖ ಮತ್ತು ಜನಪ್ರಿಯ ಉಪಕ್ರಮಗಳು, ವಿಶೇಷವಾಗಿ ರಾಮ ಮಂದಿರದ ಪ್ರತಿಷ್ಠಾಪನೆ ಮತ್ತು G20 ಶೃಂಗಸಭೆಗಳು ಪ್ರಧಾನ ಮಂತ್ರಿಯ ಜನಪ್ರಿಯತೆಯ ಹೆಚ್ಚಳಕ್ಕೆ ಅಧಿಕೃತ ಕಾರಣಗಳಾಗಿವೆ. “ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ, ಯುಎಇಯಲ್ಲಿ ಮಂದಿರ ಉದ್ಘಾಟನೆ, ಯಾವುದೇ ಪಾಶ್ಚಿಮಾತ್ಯ ಶಕ್ತಿಯ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರವಾಗಿ ಜಾಗತಿಕ ಸಮಸ್ಯೆಗಳ ಬಗ್ಗೆ ನಿಲುವು ತೆಗೆದುಕೊಳ್ಳುವುದು, ಬಾಹ್ಯಾಕಾಶದ ಉಪಕ್ರಮಗಳು, ಭಾರತದಲ್ಲಿ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿರುವುದು ಮುಂತಾದ ಕೆಲವು ಬಿಗ್‌ಬ್ಯಾಂಗ್ ಉಪಕ್ರಮಗಳು ಮೋದಿ ಜನಪ್ರಿಯತೆಗೆ ಕೊಡುಗೆ ನೀಡಿವೆ. ಪ್ರಮುಖ ಜಾಗತಿಕ ಕಂಪನಿಗಳು ಭಾರತದಲ್ಲಿ ಉತ್ಪಾದನೆಯನ್ನು ಆರಿಸಿಕೊಳ್ಳುವುದರೊಂದಿಗೆ ಮೇಕ್ ಇನ್ ಇಂಡಿಯಾಗೆ ಪೂರಕವಾಗಿವೆ. ಇದೂ ಪ್ರಧಾನ ಮಂತ್ರಿಯವರ ಅನುಮೋದನೆಯ ರೇಟಿಂಗ್‌ಗಳ ಹೆಚ್ಚಳಕ್ಕೆ ಕಾರಣವಾಗಿದೆ” ಎಂದು ಇಂಡಿಯಾಬಸ್‌ನ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಪಾರಿಜಾತ್ ಚಕ್ರವರ್ತಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಮುನ್ನ ಬಂದ ಈ ವರ್ಷದ ಸಮೀಕ್ಷೆಯಲ್ಲಿ ಉತ್ತರ ವಲಯದ ನಗರಗಳಿಂದ (ಶೇ. 92) ಅತಿ ಹೆಚ್ಚು ರೇಟಿಂಗ್‌ಗಳು ಬಂದಿವೆ. ಅದರ ನಂತರ ಪೂರ್ವ ವಲಯ (ಶೇ. 84) ಮತ್ತು ಪಶ್ಚಿಮ ವಲಯ (ಶೇ. 80). ಶ್ರೇಣಿ 1 ನಗರಗಳು ಸಹ 84 ಶೇಕಡಾ ಅನುಮೋದನೆ ರೇಟಿಂಗ್‌ಗೆ ಕೊಡುಗೆ ನೀಡಿವೆ. ದಕ್ಷಿಣ ವಲಯದಿಂದ (ಶೇ. 35) ಕಡಿಮೆ ರೇಟಿಂಗ್ ಬಂದಿದೆ. ವಯಸ್ಸಿನ ಸಮೂಹಕ್ಕೆ ಸಂಬಂಧಿಸಿದಂತೆ, ಹೆಚ್ಚಿನ ರೇಟಿಂಗ್‌ಗಳು 45+ ಗುಂಪಿನಿಂದ ಬಂದವು (79 ಪ್ರತಿಶತ).

ಇದನ್ನೂ ಓದಿ: ದೇಶದ ಮೊದಲ ಅಂಡರ್‌ ವಾಟರ್‌ ಮೆಟ್ರೋ ಸೇವೆಗೆ ಮೋದಿ ಇಂದು ಚಾಲನೆ; ಏನೆಲ್ಲ ವೈಶಿಷ್ಟ್ಯ?

Exit mobile version