Site icon Vistara News

Narendra Modi: ಆಂಧ್ರದಲ್ಲಿ ಮೆಗಾ ಸ್ಟಾರ್‌, ಪವರ್‌ ಸ್ಟಾರ್‌ ಜತೆ ‘ಪೊಲಿಟಿಕಲ್‌ ಸ್ಟಾರ್’‌ ಮೋದಿ; Video ನೋಡಿ

Narendra Modi

PM Narendra Modi pulls Chiranjeevi on dais as brother Pawan Kalyan takes oath as Andhra Pradesh DCM

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಟಿಡಿಪಿಯ ಎನ್‌.ಚಂದ್ರಬಾಬು ನಾಯ್ಡು (N Chandrababu Naidu), ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ (Pawan Kalyan) ಅವರು ಬುಧವಾರ (ಜೂನ್‌ 12) ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೂ ಭಾಗಿಯಾದರು. ಅಷ್ಟೇ ಅಲ್ಲ, ನರೇಂದ್ರ ಮೋದಿ ಅವರು ವೇದಿಕೆ ಮೇಲೆ ಮೆಗಾ ಸ್ಟಾರ್‌ ಚಿರಂಜೀವಿ, ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಅವರ ಕೈ ಹಿಡಿದು, ಅವರ ಕೈಗಳನ್ನು ಒಮ್ಮೆಲ್ಲೆ ಎತ್ತಿ ಹಿಡಿಯುವ ಮೂಲಕ ಗಮನ ಸೆಳೆದರು. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ವಿಜಯವಾಡದಲ್ಲಿರುವ ಮೇಧಾ ಐಟಿ ಪಾರ್ಕ್‌ ಬಳಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಎನ್‌.ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದಾದ ಬಳಿಕ ಮೋದಿ ಅವರು ನಾಯ್ಡು ಅವರಿಗೆ ಶುಭ ಕೋರಿದರು. ನಂತರ ಪವನ್‌ ಕಲ್ಯಾಣ್‌ ಅವರು ತಮ್ಮ ಸಹೋದರ ಚಿರಂಜೀವಿ ಕೂಡ ಇಲ್ಲೇ ಇದ್ದಾರೆ ಎಂದು ಮೋದಿ ಅವರಿಗೆ ಹೇಳಿದರು. ಆಗ ಮೋದಿ ಅವರು ಚಿರಂಜೀವಿ ಬಳಿ ಹೋಗಿ, ಅವರ ಹಾಗೂ ಪವನ್‌ ಕಲ್ಯಾಣ್‌ ಕೈ ಹಿಡಿದು ವೇದಿಕೆಗೆ ಕರೆತಂದರು. ಬಳಿಕ ಮೂವರೂ ಕೈ ಎತ್ತಿದರು. ಆ ಮೂಲಕ ಒಗ್ಗಟ್ಟಿನ ಬಲ ಪ್ರದರ್ಶನ ಮಾಡಿದರು.

ಇದರ ಮಧ್ಯೆಯೇ ಚಂದ್ರಬಾಬು ನಾಯ್ಡು ಅವರು ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಲು ಮುಂದಾದರು. ಚಂದ್ರಬಾಬು ನಾಯ್ಡು ಅವರು ನರೇಂದ್ರ ಮೋದಿ ಅವರಿಗಿಂತ ಒಂದು ವರ್ಷ ದೊಡ್ಡವರು. ಹೀಗಿದ್ದರೂ ಮೋದಿ ಅವರ ಮೇಲಿನ ಗೌರವದಿಂದಾಗಿ ಅವರ ಕಾಲು ಮುಟ್ಟಿ ನಮಸ್ಕರಿಸಲು ಚಂದ್ರಬಾಬು ನಾಯ್ಡು ಮುಂದಾದರು. ಆದರೆ, ಇದಕ್ಕೆ ನರೇಂದ್ರ ಮೋದಿ ಅವರು ಅವಕಾಶ ಕೊಡದೆ, ಚಂದ್ರಬಾಬು ನಾಯ್ಡು ಅವರನ್ನು ತಬ್ಬಿಕೊಂಡು, ನೂತನ ಸರ್ಕಾರಕ್ಕೆ ಶುಭ ಹಾರೈಸಿದರು.

ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್‌ ಶಾ, ನಿತಿನ್‌ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ನಟರಾದ ಚಿರಂಜೀವಿ, ರಜನಿಕಾಂತ್‌, ಮಾಜಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ನಾಲ್ಕನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಚಂದ್ರಬಾಬು ನಾಯ್ಡು ಅವರು ದಾಖಲೆ ಬರೆದರು.

ಇದನ್ನೂ ಓದಿ: ಒಡಿಶಾಗೆ ಬಿಜೆಪಿಯ ಮೋಹನ್‌ ಚರಣ್‌ ಮಾಝಿ, ಅರುಣಾಚಲಕ್ಕೆ ಪೆಮಾ ಖಂಡು ಸಿಎಂ; ಖಂಡು ನಾಳೆ ಪದಗ್ರಹಣ

Exit mobile version