Site icon Vistara News

Palki Sharma: ಬ್ರಿಟನ್‌ನಲ್ಲಿ ಭಾರತದ ಏಳಿಗೆ ಬಿಚ್ಚಿಟ್ಟ ಪತ್ರಕರ್ತೆ ಪಾಲ್ಕಿ ಶರ್ಮಾಗೆ ಮೋದಿ ಮೆಚ್ಚುಗೆ!

Palki Sharma

PM Narendra Modi reacts to Indian journalist Palki Sharma's Oxford Union speech

ನವದೆಹಲಿ: ದೇಶದ ಪತ್ರಕರ್ತೆ ಪಾಲ್ಕಿ ಶರ್ಮಾ (Palki Sharma) ಅವರು ಬ್ರಿಟನ್‌ನಲ್ಲಿ ಭಾರತದ ಅಭಿವೃದ್ಧಿ ಕುರಿತು ಅಂಕಿ-ಅಂಶಗಳ ಸಮೇತ ಮಾತನಾಡಿದ್ದಾರೆ. ಜಾಗತಿಕ ಚರ್ಚೆಯ ವೇದಿಕೆಯಾದ ಆಕ್ಸ್‌ಫರ್ಡ್‌ ಯುನಿಯನ್‌ನಲ್ಲಿ (Oxford Union) ಪಾಲ್ಕಿ ಶರ್ಮಾ (Palki Sharma) ಅವರು ಭಾರತದ ಏಳಿಗೆ ಕುರಿತು ಮಾತನಾಡಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಭಾರತವು ಹೇಗೆ ರೂಪಾಂತರ ಹೊಂದಿದೆ ಎಂಬುದನ್ನು ನೀವು ವಿವರಿಸಿದ್ದೀರಿ” ಎಂಬುದಾಗಿ ಮೋದಿ ಬಣ್ಣಿಸಿದ್ದಾರೆ.

ಪಾಲ್ಕಿ ಶರ್ಮಾ ಹೇಳಿದ್ದೇನು?

ಆಕ್ಸ್‌ಫರ್ಡ್‌ ಯುನಿಯನ್‌ನಲ್ಲಿ ಭಾರತದ ಏಳಿಗೆ ಕುರಿತು ಪಾಲ್ಕಿ ಶರ್ಮಾ ಮಾತನಾಡಿದರು. “ಭಾರತವು ಕಳೆದ 10 ವರ್ಷಗಳಲ್ಲಿ ಗಣನೀಯವಾಗಿ ಏಳಿಗೆ ಹೊಂದಿದೆ. ಭಾರತ ಈಗ ಯಾವುದೇ ತೀರ್ಮಾನ ತೆಗೆದುಕೊಳ್ಳಬಹುದು. ಜಾಗತಿಕ ಅಭಿಪ್ರಾಯದ ಮೇಲೆ ಭಾರತದ ನಿರ್ಧಾರ ಇರುವುದಿಲ್ಲ. ಈಗ ಭಾರತದ ನಿರ್ಧಾರಗಳನ್ನು ಜಗತ್ತೇ ಮೆಚ್ಚುತ್ತಿದೆ. ಜಾಗತಿಕ ವಿಷಯಗಳ ಮೇಲೆ ಭಾರತದ ಅಭಿಪ್ರಾಯವು ಪರಿಣಾಮ ಬೀರುತ್ತಿದೆ” ಎಂದು ಹೇಳಿದರು.

ಡಿಜಿಟಿಲ್‌ ಇಂಡಿಯಾ ಪ್ರಸ್ತಾಪ

ಭಾರತವು ಡಿಜಿಟಲೀಕರಣವಾಗುತ್ತಿದೆ. ಡಿಜಿಟಲ್‌ ಇಂಡಿಯಾ ಎಂಬ ಕಲ್ಪನೆಯು ಹಳ್ಳಿಗಳಿಗೂ ತಲುಪಿದೆ. ನರೇಂದ್ರ ಮೋದಿ ಆಡಳಿತದಲ್ಲಿ ದೇಶವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಭಾರತದಲ್ಲಿ ಇಂಟರ್‌ನೆಟ್‌ ಬಳಕೆಯು 10 ವರ್ಷದ ಹಿಂದೆ ಶೇ.17ರಷ್ಟಿತ್ತು. ಈಗ ಶೇ.48ರಷ್ಟು ಮಂದಿ ಇಂಟರ್ನೆಟ್‌ ಬಳಕೆಯಾಗುತ್ತಿದೆ. ತರಕಾರಿ ಮಾರುವವರೂ ಕ್ಯೂಆರ್‌ ಕೋಡ್‌ ಮೂಲಕ ವಹಿವಾಟು ನಡೆಸುತ್ತಿದ್ದಾರೆ. ಇದು ಡಿಜಿಟಲ್‌ ಇಂಡಿಯಾ ಏಳಿಗೆಗೆ ಸಹಕಾರಿಯಾಗಿದೆ” ಎಂದು ತಿಳಿಸಿದರು.

ಭಾರತದಲ್ಲಿ ಸಹಿಷ್ಣುತೆ

“ಭಾರತದಲ್ಲಿ ಸಹಿಷ್ಣುತೆ ಹೆಚ್ಚಿದೆ. ಹಜ್‌ ನೀತಿ ಮೂಲಕ ಮುಸ್ಲಿಮರು ಹಜ್‌ ಯಾತ್ರೆ ಕೈಗೊಳ್ಳಲು ಮೋದಿ ಸರ್ಕಾರ ನೆರವಾಯಿತು. ಸೌದಿ ಅರೇಬಿಯಾ ಸರ್ಕಾರದ ಜತೆ ಮಾತನಾಡಿ ಹಜ್‌ ಯಾತ್ರೆಗೆ ನೆರವು ಪಡೆದರು. ಈಗ ಭಾರತದಿಂದ ಹಜ್‌ ಯಾತ್ರೆಗೆ ಹೋಗುವವರ ಪ್ರಮಾಣ 2 ಲಕ್ಷ ದಾಟಿದೆ. ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಮುಸ್ಲಿಮರು ಹೆಚ್ಚಿನ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ. ತ್ರಿವಳಿ ತಲಾಕ್‌ ನಿಷೇಧಿಸಿ ಮುಸ್ಲಿಂ ಹೆಣ್ಣುಮಕ್ಕಳ ಹಕ್ಕುಗಳನ್ನು ರಕ್ಷಿಸಲಾಗಿದೆ” ಎಂದು ಪಾಲ್ಕಿ ಶರ್ಮಾ ಬಣ್ಣಿಸಿದರು.

ಜಾಗತಿಕವಾಗಿ ಭಾರತ ಬಲಿಷ್ಠ

“ಭಾರತವು ಜಾಗತಿಕವಾಗಿ ಬಲಿಷ್ಠವಾಗುತ್ತಿದೆ. ಕಾಶ್ಮೀರದಲ್ಲಿ ಪಾಕ್‌ ಉಗ್ರರ ದಾಳಿಗೆ ಪ್ರತಿಯಾಗಿ ಸರ್ಜಿಕಲ್‌ ಸ್ಟ್ರೈಕ್‌, ಬಾಲಾಕೋಟ್‌ ದಾಳಿ ಮೂಲಕ ಪ್ರತ್ಯುತ್ತರ ನೀಡುತ್ತಿದೆ. ಭಾರತದ ಆರ್ಥಿಕ ಬೆಳವಣಿಗೆಯು ಶೇ.7ರಷ್ಟಿದೆ. ಶ್ರೀಲಂಕಾ ಆರ್ಥಿಕತೆ ಮುಳುಗುತ್ತಿದ್ದಾಗ ಯಾವುದೇ ಫಲಾಪೇಕ್ಷೆ, ಕುತಂತ್ರ ಇಲ್ಲದೆ 4 ಶತಕೋಟಿ ಡಾಲರ್‌ ನೆರವು ನೀಡಿದೆ. ಭಾರತದ ವಿಮಾನ ನಿಲ್ದಾಣಗಳು ಜಾಗತಿಕ ಮಟ್ಟದಲ್ಲಿವೆ. ಇಲ್ಲಿಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣವೂ ಅಧಿಕವಾಗಿದೆ” ಎಂದರು.

ಇದನ್ನೂ ಓದಿ: Narendra Modi: ಭ್ರಷ್ಟರ ಬೇಟೆಯಾಡಿದ, ಉಗ್ರರ ಓಡಿಸಿದ; ಮೋದಿಗಾಗಿ ಕನ್ನಡದಲ್ಲಿ ಹಾಡು ಹಾಡಿದ ಅಜ್ಜಿ!

Exit mobile version