Site icon Vistara News

PM Narendra Modi: “ನನ್ನನ್ನು ದೇವರೇ ಈ ಭೂಮಿಗೆ ಕಳಿಸಿದ್ದಾನೆ..”; ಭಾರೀ ಸದ್ದು ಮಾಡ್ತಿದೆ ಮೋದಿಯ ಈ ವಿಡಿಯೊ

Narendra Modi

I Miss A Strong Opposition, It Pains My Heart: Says PM Narendra Modi

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024)ಯ ಗುಂಗಿನಲ್ಲಿರುವ ರಾಜಕೀಯ ಮುಖಂಡರು ಪರ – ವಿರೋಧ ಹೇಳಿಕೆ, ವಿವಾದಾತ್ಮಕ ಮಾತುಗಳ ಮೂಲಕ ಸುದ್ದಿಯಾಗುವುದು ಸಹಜ. ತಾವು ನೀಡಿರುವ ಹೇಳಿಕೆಗಳಿಂದಲೇ ಹಲವು ದಿನಗಳ ಕಾಲ ಟ್ರೋಲ್‌ ಆಗೋದೂ ಇದೆ. ಇದೀಗ ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌(Viral Video) ಆಗುತ್ತಿದ್ದು, ಹಲವರು ಹಲವು ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಮೋದಿ ಹೇಳಿದ್ದೇನು?

ಇತ್ತೀಚೆಗೆ ಪತ್ರಕರ್ತೆ ರುಬಿಕಾ ಲಿಯಾಖತ್‌ ಅವರ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಹೀಗೆ ಮಾತನಾಡುತ್ತಾ “”ನಾನು ಸಾಮಾನ್ಯರಂತೆ ಹುಟ್ಟಿಲ್ಲ. ದೇವರೇ ನನ್ನನ್ನು ಈ ಭೂಮಿಗೆ ಜನರ ಸೇವೆಗಾಗಿ ಕಳುಹಿಸಿದ್ದಾನೆ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅಲ್ಲದೇ ಇದೇ ಕಾರಣದಿಂದಾಗಿ ನನ್ನಲ್ಲಿ ಇಷ್ಟೊಂದು ಶಕ್ತಿ ಸಾಮರ್ಥ್ಯ ಇದೆ ಎಂದು ಅನಿಸುತ್ತಿದೆʼʼ ಎಂದು ಹೇಳಿದ್ದಾರೆ.

ಸಂದರ್ಶನದ ನಡುವೆ ರುಬಿಕಾ ಅವರು ನಿಮಗೆ ಸುಸ್ತು ಅನ್ನೋದೇ ಆಗೋದಿಲ್ವಾ ಎಂದು ಪ್ರಶ್ನೆ ಕೇಳಿದ್ದಾರೆ. ಆಗ ಆ ಪ್ರಶ್ನೆಗೆ ಉತ್ತರಿಸುತ್ತಾ, “”ನಾನು ಎಲ್ಲರಂತೆ ಸಾಮಾನ್ಯವಾಗಿ ಹುಟ್ಟಿದ್ದೇನೆಂದು ಭಾವಿಸುವ ಬದಲಾಗಿ ದೇವರ ಕಾರ್ಯವನ್ನು ಪೂರೈಸಲು ಜನಿಸಿದ್ದೇನೆ ಎಂದು ಭಾವಿಸುತ್ತೇನೆ. ನನಗೆ ಗೊತ್ತಿಲ್ಲ, ನಾನು ಅಂದುಕೊಂಡಿದ್ದೂ ತಪ್ಪು ಕಲ್ಪನೆಯೂ ಆಗಿರಬಹುದು. ಅಥವಾ ನನ್ನ ಹೇಳಿಕೆಗೆ ಟೀಕೆಯೂ ವ್ಯಕ್ತವಾಗಬಹುದು. ಆದರೆ ನಾನು ಯಾವಾಗಲೂ ಹಾಗೆಯೇ ಭಾವಿಸುತ್ತೇನೆʼʼ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದಿರುವ ಈ ಸಂದರ್ಶನದ ಕ್ಲಿಪಿಂಗ್ಸ್‌ ಅನ್ನು ಸ್ವತಃ ರುಬಿಕಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ಪ್ರಧಾನಮಂತ್ರಿಗಳೇ ನಿಮಗೆ ಆಯಾಸ ಆಗುವುದಿಲ್ಲವೇ” ಎಂದ್ ಕ್ಯಾಪ್ಶನ್‌ ಕೊಟ್ಟಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ರುಬಿಕಾ ಬದಲಾಗಿ ಬೇರೆ ಪತ್ರಕರ್ತರು ಆ ಜಾಗದಲ್ಲಿ ಇರುತ್ತಿದ್ದರೆ ಆ ರೀತಿ ಪ್ರಶ್ನೆ ಕೇಳುತ್ತಿರಲಿಲ್ಲ ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಪ್ರಧಾನಿಗೆ ಆಯಾಸ ಹೇಗೆ ಆಗಲು ಸಾಧ್ಯ? ಅವರ ಬಳಿ ಕಾರು, ಬಂಗಲೆ ಆಳು-ಕಾಳು ಜೊತೆಗಿರುವಾಗ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ರುಬಿಕಾ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಬಹಳಷ್ಟು ಮಂದಿ, “”ಹೌದು. ಮೋದಿಯನ್ನು ಭಗವಂತನೇ ಈ ಭೂಮಿಗೆ ಕಳುಹಿಸಿದ್ದಾನೆ. ಏನೀಗ? ಮೋದಿ ಅವರು ನಿಸ್ವಾರ್ಥವಾಗಿ ಜನ ಸೇವೆ ಮಾಡುತ್ತಿಲ್ಲವೇʼʼ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

ಮತ್ತೊಂದೆಡೆ ಒಡಿಶಾದಲ್ಲಿರುವ ಐತಿಹಾಸಿಕ ಪುರಿ ಜಗನ್ನಾಥನೇ ಪ್ರಧಾನಿ ನರೇಂದ್ರ ಮೋದಿ ಅವರ ಭಕ್ತ ಎಂಬುದಾಗಿ ಬಿಜೆಪಿ ನಾಯಕ, ಪುರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಸಂಬಿತ್‌ ಪಾತ್ರಾ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ವಿವಾದ ಉಂಟಾದ ಬೆನ್ನಲ್ಲೇ, ಸಂಬಿತ್‌ ಪಾತ್ರಾ ಅವರು ತಮ್ಮ ಹೇಳಿಕೆ ಕುರಿತಂತೆ ಕ್ಷಮೆ ಕೇಳಿದ್ದಾರೆ. ಹಾಗೆಯೇ, ಅಂತಹ ಹೇಳಿಕೆ ನೀಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಮೂರು ದಿನ ಉಪವಾಸ ಕೂಡ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

Exit mobile version