Site icon Vistara News

Narendra Modi: ಲಂಕಾಗೆ ಕಚ್ಚತೀವು ದ್ವೀಪ ಬಿಟ್ಟ ಕಾಂಗ್ರೆಸ್‌ ನಂಬಿಕೆಗೆ ಅರ್ಹವಲ್ಲ; ಮೋದಿ ವಾಗ್ದಾಳಿ

Narendra Modi

Jammu Kashmir assembly polls soon, statehood to be restored; Says PM Narendra Modi In Udhampur

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ದಿನಗಳು ಬಾಕಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾಂಗ್ರೆಸ್‌ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲೂ, “ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟ ಕಾಂಗ್ರೆಸ್‌ ನಂಬಿಕೆಗೆ ಅರ್ಹವಲ್ಲ” ಎಂದು ಟೀಕಿಸಿದ್ದಾರೆ. ಕಚ್ಚತೀವು ದ್ವೀಪದ (Katchatheevu Island) ಕುರಿತು ಆರ್‌ಟಿಐ ಪ್ರತಿಕ್ರಿಯೆಯ ಉಲ್ಲೇಖ ಇರುವ ಟೈಮ್ಸ್‌ ಆಫ್‌ ಇಂಡಿಯಾ ವರದಿಗೆ ಪ್ರತಿಕ್ರಿಯಿಸಿದ ಮೋದಿ, ಕಾಂಗ್ರೆಸ್‌ಗೆ ವಾಗ್ಬಾಣ ಪ್ರಯೋಗಿಸಿದ್ದಾರೆ.

“ಕಣ್ಣು ತೆರೆಸುವ ಹಾಗೂ ಭಯಾನಕ ವರದಿಯೊಂದು ಇಲ್ಲಿದೆ. ಕಾಂಗ್ರೆಸ್‌ ತುಂಬ ನಿಷ್ಠುರವಾಗಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿತು ಎಂಬ ಹೊಸ ಸತ್ಯ ಈಗ ಬಯಲಾಗಿದೆ. ಕಾಂಗ್ರೆಸ್‌ಅನ್ನು ಯಾವುದೇ ಕಾರಣಕ್ಕೂ ನಂಬಬಾರದು ಎಂಬುದು ಇದರಿಂದ ಜನರಿಗೆ ಮತ್ತೆ ಖಾತ್ರಿಯಾಗಿದೆ. ದೇಶದ ಸಮಗ್ರತೆ, ಒಗ್ಗಟ್ಟನ್ನು ದುರ್ಬಲಗೊಳಿಸುವುದು, ದೇಶದ ಹಿತಾಸಕ್ತಿಗಳನ್ನು ಕಡೆಗಣಿಸುವುದೇ ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್‌ ಮಾಡಿದ ಸಾಧನೆಯಾಗಿದೆ” ಎಂದು ಮೋದಿ ಟೀಕಿಸಿದ್ದಾರೆ.

ಆರ್‌ಟಿಐ ವರದಿ ಹೇಳುವುದೇನು?

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಆರ್‌ಟಿಐ ಮೂಲಕ ಪಡೆದಿರುವ ಮಾಹಿತಿಯಲ್ಲಿ ಕಚ್ಚತೀವು ದ್ವೀಪದ ಬಗೆಗಿನ ಭಯಾನಕ ಅಂಶವನ್ನು ತೆರೆದಿಡಲಾಗಿದೆ. “ಇಂದಿರಾ ಗಾಂಧಿ ಅವರು 1974ರಲ್ಲಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟರು” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕಚ್ಚತೀವು ದ್ವೀಪದ ಮೇಲೆ ಶ್ರೀಲಂಕಾ ಹಕ್ಕು ಚಲಾಯಿಸಲು ಶುರು ಮಾಡಿತು. ಶ್ರೀಲಂಕಾದ ಅನುಮತಿ ಇಲ್ಲದೆ ಕಚ್ಚತೀವು ದ್ವೀಪದಲ್ಲಿ ಭಾರತದ ನೌಕಾಪಡೆಯು ಸಮರಾಭ್ಯಾಸ ನಡೆಸಲು ಕೂಡ ಆಗದಂತಾಯಿತು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Pooja Vastrakar: ಮೋದಿ ವಿರೋಧಿ ಪೋಸ್ಟ್​ಗಾಗಿ ಕ್ಷಮೆ ಯಾಚಿಸಿದ ಟೀಮ್​ ಇಂಡಿಯಾ ಆಟಗಾರ್ತಿ​ ಪೂಜಾ ವಸ್ತ್ರಾಕರ್

ಕಚ್ಚತೀವು ದ್ವೀಪದ ಕುರಿತು ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು‌ ಅವರ ಹೇಳಿಕೆಯನ್ನೂ ಆರ್‌ಟಿಐ ವರದಿ ಒಳಗೊಂಡಿದೆ. “ನಾನು ಈ ಒಂದು ಸಣ್ಣ ದ್ವೀಪಕ್ಕೆ ಹೆಚ್ಚಿನ ಆದ್ಯತೆ ಕೊಡುವುದಿಲ್ಲ. ಇದರ ಮೇಲೆ ಭಾರತ ಹೊಂದಿರುವ ಹಕ್ಕನ್ನು ಬಿಟ್ಟುಕೊಡುವುದಕ್ಕೂ ನಾನು ಹಿಂಜರಿಯುವುದಿಲ್ಲ” ಎಂಬುದಾಗಿ ಜವಾಹರ ಲಾಲ್‌ ನೆಹರು ಅವರು 1961ರ ಮೇ 10ರಂದು ಹೇಳಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಕುರಿತು ಈಗ ಭಾರಿ ಚರ್ಚೆ ಶುರುವಾಗಿವೆ. ಕಾಂಗ್ರೆಸ್‌ ನಾಯಕರು ಮೋದಿ ಅವರಿಗೆ ತಿರುಗೇಟು ನೀಡಿದ್ದು, ಲಡಾಕ್‌ ಗಡಿಯಲ್ಲಿ ಚೀನಾ ಭಾರತದ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version