Site icon Vistara News

PM Narendra Modi: ಮೋದಿ ಭೇಟಿ ಹಿನ್ನೆಲೆಯಲ್ಲಿ ತಿರಂಗಾ ಬಣ್ಣಗಳಲ್ಲಿ ಮಿನುಗಿದ ಸಿಡ್ನಿ ಹಾರ್ಬರ್, ಓಪೇರಾ ಹೌಸ್!

PM Narendra Modi: Sydney Harbour and Opera House light up in Tiranga colours

ಸಿಡ್ನಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಭೇಟಿ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಸಿಡ್ನಿ ಹಾರ್ಬರ್ (Sydney Harbour) ಮತ್ತು ಓಪೇರಾ ಹೌಸ್‌ ವನ್ನು (Opera House) ಭಾರತದ ತ್ರಿವರ್ಣಧ್ವಜ ಬಣ್ಣಗಳಲ್ಲಿ ಬೆಳಗಲಾಗಿತ್ತು. ಮಂಗಳವಾರ ಆಸ್ಟ್ರೇಲಿಯಾಕ್ಕೆ ಆಗಮಿಸಿದ ಮೋದಿ ದ್ವೀಪಕ್ಷೀಯ ಮಾತುಕತೆ ನಡೆಸಿದ್ದಾರೆ. ಮೋದಿ ಅವರು ಎರಡನೇ ಬಾರಿಗೆ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದಾರೆ.

ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಸಿಡ್ನಿ ಹಾರ್ಬರ್ ಮತ್ತು ಓಪೇರಾ ಹೌಸ್

ಒಪೇರಾ ಹೌಸ್ ಕೂಡ ಭಾರತದ ರಾಷ್ಟ್ರಧ್ವಜದ ಮೂರು ಬಣ್ಣಗಳಲ್ಲಿ ಹೊಳೆಯುತ್ತಿರುವುದು ಕಂಡುಬಂದಿತು. ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಪ್ರಧಾನ ನರೇಂದ್ರ ಮೋದಿ ಅವರು ಸಿಡ್ನಿಯಲ್ಲಿರುವ ಒಪೇರಾ ಹೌಸ್‌ಗೆ ಪ್ರವೇಶಿಸಿದರು. ಇದು ಮೋದಿ ಅವರು ಪ್ರವಾಸದ ಕೊನೆಯ ಕಂತಾಗಿದೆ.

ಇಬ್ಬರು ನಾಯಕರು ಈ ವೇಳೆ, ಫೋಟೋಗಳಿಗೆ ಪೋಸ್ ನೀಡಿ, ಎರಡು ಬೆರಳುಗಳಿಂದ ಶಾಂತಿಯ ಸಂಕೇತವನ್ನು ಪ್ರದರ್ಶಿಸಿದರು. ಉಭಯ ನಾಯಕರು ಗಾಢವಾದ ಸ್ನೇಹವನ್ನು ಹೊಂದಿದ್ದು, ಪ್ರಧಾನಿ ಮೋದಿಯವರು ಅಲ್ಬನೀಸ್ ಅವರನ್ನು ತಮ್ಮ ಆತ್ಮೀಯ ಸ್ನೇಹಿತ ಎಂದು ಕರೆಯುತ್ತಾರೆ.

ತಮ್ಮ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿ ಅವರು ಭಾರತ-ಆಸ್ಟ್ರೇಲಿಯಾ ಸಂಬಂಧಗಳ ಕುರಿತು ಹಲವಾರು ಸುತ್ತಿನ ಚರ್ಚೆಗಳನ್ನು ನಡೆಸಿದರು. ವೇಗವಾಗಿ ವಿಸ್ತರಿಸುತ್ತಿರುವ ಭಾರತ-ಆಸ್ಟ್ರೇಲಿಯಾ ಬಾಂಧವ್ಯವನ್ನು ವಿವರಿಸಲು ಕ್ರಿಕೆಟ್ ಉದಾಹರಣೆಯನ್ನು ಬಳಸಿಕೊಂಡರು. ಉಭಯ ದೇಶಗಳ ನಡುವಿನ ಸಂಬಂಧವು ಟಿ-20 ಮೋಡ್ ಅನ್ನು ಪ್ರವೇಶಿಸಿದೆ ಎಂದು ಅವರು ಹೇಳಿದರು. ಆಸ್ಟ್ರೇಲಿಯಾ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಪ್ರಧಾನಿ ಮೋದಿ ಅವರು ಮಾತುಕತೆ ನಡೆಸಿದರು.

ಇದನ್ನೂ ಓದಿ: ದೇಗುಲ ಧ್ವಂಸ ಸಹಿಸಲ್ಲ; ಆಸ್ಟ್ರೇಲಿಯಾದಲ್ಲಿ ನಡೆದ ಕೃತ್ಯ ಖಂಡಿಸಿದ ಪ್ರಧಾನಿ ಮೋದಿ, ಅಲ್ಲಿನ ಪ್ರಧಾನಿ ಹೇಳಿದ್ದೇನು?

ನನ್ನ ಸ್ನೇಹಿತ ಪ್ರಧಾನಿ ಅಲ್ಬನೀಸ್ ಭಾರತಕ್ಕೆ ಭೇಟಿ ನೀಡಿದ ಎರಡು ತಿಂಗಳೊಳಗೆ ನಾನು ಇಲ್ಲಿಗೆ ಬಂದಿದ್ದೇನೆ. ಇದು ಕಳೆದ ಒಂದು ವರ್ಷದಲ್ಲಿ ನಮ್ಮ ಆರನೇ ಭೇಟಿಯಾಗಿದೆ. ಇದು ನಮ್ಮ ವಿಶಾಲ ವ್ಯಾಪ್ತಿಯ ಬಾಂಧವ್ಯಗಳ ಆಳ, ನಮ್ಮ ಅಭಿಪ್ರಾಯಗಳ ಒಮ್ಮುಖತೆ ಮತ್ತು ನಮ್ಮ ಸಹಕಾರದ ಪರಿಪಕ್ವತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ಹೇಳಿದರು.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version