Site icon Vistara News

Gujarat Election Result | ನೀವು ನೀಡಿದ ಗೆಲುವು ಕಂಡು ಹೃದಯ ತುಂಬಿ ಬಂದಿದೆ, ಗುಜರಾತ್‌ ಜನರಿಗೆ ಮೋದಿ ಧನ್ಯವಾದ

Narendra Modi World's Most Popular Leader

Narendra Modi Dominates List Of Most Popular World Leaders With 77% Approval Rating

ಗಾಂಧಿನಗರ: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ (Gujarat Election Result) ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಸತತ ಏಳನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯುತ್ತಿದೆ. ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು, ನಾಯಕರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಇದರ ಬೆನ್ನಲ್ಲೇ, ಗುಜರಾತ್‌ ವಿಧಾನಸಭೆ ಚುನಾವಣೆ ಗೆಲುವಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದು, “ಗುಜರಾತ್‌ನ ಎಲ್ಲರಿಗೂ ಧನ್ಯವಾದ” ಎಂದು ಟ್ವೀಟ್‌ ಮಾಡಿದ್ದಾರೆ.

“ಗುಜರಾತ್‌ನ ಪ್ರತಿಯೊಬ್ಬರಿಗೂ ಧನ್ಯವಾದಗಳು. ಚುನಾವಣೆಯಲ್ಲಿ ನೀವು ನೀಡಿದ ಅಭೂತಪೂರ್ವ ಗೆಲುವಿನಿಂದ ಹೃದಯ ತುಂಬಿ ಬಂದಿದೆ. ರಾಜ್ಯದ ಜನ ಅಭಿವೃದ್ಧಿ ಹಾಗೂ ಏಳಿಗೆಯನ್ನು ಗಮನಿಸಿ ನಮ್ಮನ್ನು ಗೆಲ್ಲಿಸಿದ್ದಾರೆ. ಗುಜರಾತ್‌ ಜನಶಕ್ತಿಗೆ ನಾನು ತಲೆಬಾಗಿ ನಮಿಸುತ್ತೇನೆ. ಐತಿಹಾಸಿಕ ಗೆಲುವಿಗೆ ಕಾರಣರಾದ ಪಕ್ಷದ ಕಾರ್ಯಕರ್ತರಿಗೂ ಅಭಿನಂದನೆಗಳು” ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಹಿಮಾಚಲ ಪ್ರದೇಶದ ಜನರಿಗೂ ಧನ್ಯವಾದ

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ವಿಫಲವಾದರೂ ಆ ರಾಜ್ಯದ ಜನರಿಗೆ ಮೋದಿ ಧನ್ಯವಾದ ತಿಳಿಸಿದ್ದಾರೆ. “ಬಿಜೆಪಿಗೆ ಬೆಂಬಲ ನೀಡಿದ ಹಿಮಾಚಲ ಪ್ರದೇಶದ ಜನರಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲೂ ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ಬಿಜೆಪಿ ಕಾರ್ಯನಿರ್ವಹಿಸಲಿದೆ” ಎಂದು ಟ್ವೀಟ್‌ ಮಾಡಿದ್ದಾರೆ. ‌

ಇದನ್ನೂ ಓದಿ | Gujarat Election Result | ಗುಜರಾತ್‌ನಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿಗೆ ಇಲ್ಲಿದೆ ಪಂಚ ಕಾರಣ!

Exit mobile version